Uttaradi Math ದೇವರೆಂಬ ಅಂಬಿಗನನ್ನು ನಂಬಿದರೆ ಸಂಸಾರವೆoಬ ಸಾಗರವನ್ನು ದಾಟುವುದು ಸುಲಭ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ ಗುರುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ದೇವರು ನನ್ನನ್ನು ರಕ್ಷಣೆ ಮಾಡುತ್ತಾನೆ ಎಂಬ ವಿಶ್ವಾಸವಿಡಿ. ಖಂಡಿತವಾಗಿ ನಿಮ್ಮ ರಕ್ಷಣೆಯನ್ನು ದೇವರು ಮಾಡಿಯೇ ಮಾಡುತ್ತಾನೆ. ಭಕ್ತರ ಮೇಲೆಯೇ ದೇವರು ಹೀಗೆ ಅನುಗ್ರಹ ಮಾಡುತ್ತಾನೆ. ಇನ್ನು ಸ್ವತಃ ಕೃಷ್ಣನೇ ಇರುವ ಜಾಗದಲ್ಲಿ ಎಲ್ಲ ರೀತಿಯ ವೈಭವ ಇದೆ. ಹೀಗಾಗಿಯೇ ಕೃಷ್ಣನ ಹೊತ್ತು ಬಂದ ಭಕ್ತ ವಸುದೇವನಿಗೆ ಯಮುನೆಯ ಪ್ರವಾಹ ದಾರಿ ಮಾಡಿ ಕೊಟ್ಟಿದೆ ಎಂದರು.
ಹೀಗಾಗಿ ಸಂಸಾರದ ಆ ದಡವಾಗಿರುವ ಮೋಕ್ಷವನ್ನು ದಾಟಲು ದೇವರನ್ನೇ ಮೊರೆ ಹೋಗಬೇಕು. ಸಂಸಾರ ನದಿಯಾದರೆ ದೇವರೇ ಸೇತುವೆ, ಸಮುದ್ರವಾದರೆ ದೇವರೇ ನೌಕೆ, ಯಾರೂ ನಾವಿಕರಿಲ್ಲ ಎಂದರೆ ದೇವರೇ ನಾವಿಕನಾಗಿ ನಮ್ಮನ್ನು ದಡ ಸೇರಿಸುತ್ತಾನೆ. ಆದರೆ ನಾವು ಆತನ ಮಾರ್ಗದಲ್ಲಿರಬೇಕು ಎಂದರು.
ಪ0ಡಿತ ಪವನಾಚಾರ್ಯ ಹುನಗುಂದ ಪ್ರಚವನ ನೀಡಿದರು. ತಿರುಪತಿ ಸಮೀಪದ ತಿರುಚಾನೂರಿನಲ್ಲಿರುವ ಪದ್ಮಾವತಿ ದೇವಿಯ ಗಂಧ ಪ್ರಸಾದವನ್ನು ಅಲ್ಲಿನ ದೇವಸ್ಥಾನದ ಅರ್ಚಕರು ಶ್ರೀಪಾದಂಗಳವರಿಗೆ ಸಮರ್ಪಿಸಿದರು.
ಆತಕೂರಿನಲ್ಲಿರುವ ಉತ್ತರಾದಿ ಮಠದ ಪೂರ್ವಯತಿಗಳಾದ ಶ್ರೀ ಸತ್ಯಕಾಮ ತೀರ್ಥರು, ಶ್ರೀ ಸತ್ಯೇಷ್ಟ ತೀರ್ಥರು, ಶ್ರೀ ಸತ್ಯಧೀರ ತೀರ್ಥರು ಮತ್ತು ಶ್ರೀ ಸತ್ಯಪ್ರಜ್ಞ ತೀರ್ಥರ ಮೂಲ ಬೃಂದಾವನಗಳ ಶೇಷವಸ್ತçವನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.
Uttaradi Math ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ ಮೊದಲಾದವರಿದ್ದರು.