Indian Space Research Organisation ಚಂದ್ರಯಾನ-3’ರ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಅನ್ನು ಪ್ರತ್ಯೇಕಿಸುವ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿತು ಎಂದು ಇಸ್ಕೊ ಪ್ರಕಟಿಸಿದೆ.
ಚಂದ್ರನ ಅಂಗಳಕ್ಕೆ ಲ್ಯಾಂಡ ಇಳಿಸುವ ಸರಣಿ ಪ್ರಕ್ರಿಯೆಯಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ನೋದನ ಘಟಕದಿಂದ (ಪ್ರೊಪಲ್ಟನ್ ಮಾಡ್ಯೂಲ್) ಲ್ಯಾಂಡರ್ ಪ್ರತ್ಯೇಕಗೊಂಡ ಬಳಿಕ ಎರಡೂ ಸ್ವತಂತ್ರ ಯಾನ ಆರಂಭಿಸಿವೆ.
ಲ್ಯಾಂಡ ಮಾಡ್ಯೂಲ್‌ನಲ್ಲಿ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಗ್ಯಾನ್) ಅನ್ನು ಒಳಗೊಂಡಿದೆ. ಪ್ರತ್ಯೇಕಗೊಂಡ ಬಳಿಕ ಚಂದ್ರನ ಮೇಗೆ ಇನ್ನಷ್ಟು ಹತ್ತಿರಕ್ಕೆ ಒಯ್ಯುವ ಪ್ರಕ್ರಿಯೆಯನ್ನು ಇಸ್ರೋ ನಡೆಸಿದೆ. ಇದೇ 23 ರಂದು ಲ್ಯಾಂಡರ್‌ನ ಹಗುರ ಸ್ಪರ್ಶ ನಡೆಯಲಿದೆ.
ನೋದನ ಘಟಕ ಈಗಿರುವ ಕಕ್ಷೆಯಲ್ಲೇ ಪರಿಭ್ರಮಣ ನಡೆಸಿದರೆ, ಲ್ಯಾಂಡರ್ ಘಟಕ ಚಂದ್ರನ ಅಂಗಳದತ್ತ ತನ್ನ ಯಾನ ಬೆಳೆಸಿದೆ.
ನೌಕೆಯಿಂದ ಬೇರ್ಪಡೆ ಆಗುತ್ತಿದ್ದಂತೆ, ಸವಾರಿಗೆ ಧನ್ಯವಾದ ಸಂಗಾತಿ’ ಎಂದು ಲ್ಯಾಂಡರ್ ಹೇಳಿದೆ.
Indian Space Research Organisation ಶುಕ್ರವಾರ(ಆ.18) ಸಂಜೆ ಸುಮಾರು 4 ಗಂಟೆಯ ವೇಳೆಗೆ ಲ್ಯಾಂಡರ್‌ನ ವೇಗವನ್ನು ತಗ್ಗಿಸಿ ಕೆಳ ಹಂತದ ಕಕ್ಷೆಗೆ ಇಳಿಸಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ ಎಂದು ತಿಳಿದುಬಂದಿದೆ.
ನೋದನ ಘಟಕದಿಂದ ಲ್ಯಾಂಡ ಪ್ರತ್ಯೇಕಗೊಂಡ ಬಳಿಕ ಕಕ್ಷೆಯಲ್ಲಿ ಅದರ ವೇಗವನ್ನು ತಗ್ಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಇದಕ್ಕೆ ‘ಡೀಬೂಸ್ಟ್’ ಎಂದು ಕರೆಯಲಾಗುತ್ತದೆ.
ಲ್ಯಾಂಡರ್ ಇಳಿಸುವುದಕ್ಕೆ ಮುನ್ನ – ಬಾಹ್ಯಾಕಾಶ ನೌಕೆಯನ್ನು ಚಂದ್ರನಿಗೆ ಅತ್ಯಂತ ಸನಿಹದ ಬಿಂದು ಅಂದರೆ 30 ಕಿ.ಮೀ ಮತ್ತು ದೂರದ ಬಿಂದು 100 ಕಿ.ಮೀನಲ್ಲಿ ನೆಲೆಗೊಳಿಸಲಾಗುವುದು. ಇಲ್ಲಿಂದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಅನ್ನು ಇಳಿಸ- ಲಾಗುತ್ತದೆ. ಇದಕ್ಕೆ ಸಾಫ್ಟ್ ಲ್ಯಾಂಡಿಂಗ್ ಎನ್ನಲಾಗುತ್ತದೆ. ಇನ್ನೊಂದೆಡೆ ನೋದನ ಘಟಕ ಈಗಿರುವ ಕಕ್ಷೆಯಲ್ಲೇ ತಿಂಗಳು/ ವರ್ಷಗಟ್ಟಲೆ ಪರಿಭ್ರಮಣ ನಡೆಸುತ್ತದೆ