Thursday, April 24, 2025
Thursday, April 24, 2025

Manasa Pets Mart ಮುದ್ದು ಪ್ರಾಣಿಗಳ ಆಹಾರ& ಪರಿಕರಗಳ ರಿಯಾಯಿತಿ ದರ ಮಾರಾಟ

Date:

Manasa Pets Mart ಶಿವಮೊಗ್ಗ ನಗರದ ಪ್ರಸಿದ್ಧ ಮುದ್ದು ಪ್ರಾಣಿಗಳ ಔಷಧ ಮತ್ತು ಆಹಾರಗಳ ಸಗಟು/ಬಿಡಿ ಮಾರಾಟಗಾರರಾದ ಮಾನಸ ಪೆಟ್ಸ್ ಮಾರ್ಟ್, ಪೋಲೀಸ್ ಚೌಕಿ, ಶಿವಮೊಗ್ಗ ಇವರು ದಿನಾಂಕ 15-08-2023 ರಿಂದ 10 ದಿನಗಳ ಕಾಲ “ ಪೆಟ್- ಓ- ಮೇನಿಯಾ 2023” ಹೆಸರಿನಲ್ಲಿ ರಿಯಾಯಿತಿ ಮೇಳವನ್ನು ಏರ್ಪಡಿಸಲಾಗಿತ್ತು.

ಇದರ ಉದ್ಘಾಟನೆಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯದ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ: ಎನ್.ಬಿ.ಶ್ರೀಧರ, ಇವರು ನೆರವೇರಿಸಿದರು.

ಶ್ರೀ ಗಜಾನನ ಹೆಗಡೆಯವರ ಈ ಕಾರ್ಯ ಶ್ಲಾಘನೀಯ ಮತ್ತು ಮುದ್ದು ಪ್ರಾಣಿಗಳ ಮಾಲಕರು ಈ ಮೇಳದ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

Manasa Pets Mart ಮಾನಸ ಪೆಟ್ಸ್ ಮಾರ್ಟ್ ಮಾಲಕರಾದ ಶ್ರೀ ಗಜಾನನ ಹೆಗಡೆ ಇವರು ಈ 10 ದಿನಗಳಲ್ಲಿ ಮುದ್ದು ಪ್ರಾಣಿಗಳ ಮಾಲಕರಿಗೆ ಅವುಗಳ ಆಹಾರ, ಮತ್ತು ಪರಿಕರಗಳ ಮೇಲೆ ಶೇ. 20-40 % ರಿಯಾಯಿತಿ ದರದಲ್ಲಿ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಗೌತಮ್ ನಾಯಕ್, ಮಾಲಕರು, ಅಮುಂಜೆ ಅಕ್ಕಿ ಉಧ್ಯಮ ಮತ್ತು ನಿರ್ದೇಶಕರು, ಶಿವಮೊಗ್ಗ ಕೆನ್ನೆಲ್ ಕ್ಲಬ್ ಮತ್ತು ಇತರರು ಭಾಗವಹಿಸಿ ಶುಭ ಕೋರಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...