Shivamogga District Congress ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ, ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಇವರಲ್ಲಿ ಯಾರು ತಮ್ಮ ಚುನಾಯಿತ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನುವ ಬಗ್ಗೆ ಭಾರತೀಯ ಜನತಾ ಪಕ್ಷದ ನಾಯಕರು ಉತ್ತರಿಸಬೇಕೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಪ್ರಶ್ನಿಸಿದ್ದಾರೆ.
ದೇಶದಲ್ಲಿ ಕುಟುಂಬ ರಾಜಕಾರಣವನ್ನು ಎಲ್ಲಾ ರಾಜಕೀಯ ಪಕ್ಷಗಳು ಮಾಡಿಕೊಂಡು ಬಂದಿವೆ.ಇದಕ್ಕೆ ಭಾರತೀಯ ಜನತಾ ಪಕ್ಷವೂ ಹೊರತಾಗಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಹಿಡಿದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ವರೆಗೂ ಕುಟುಂಬ ರಾಜಕಾರಣದ ವಿಷಯದಲ್ಲಿ ಕಾಂಗ್ರೇಸ್ ಪಕ್ಷ ಮತ್ತು ಪಕ್ಷದ ನಾಯಕರನ್ನು ಅದರಲ್ಲೂ ನೆಹರೂ ಮತ್ತು ಗಾಂಧಿ ಕುಟುಂಬವನ್ನು ಹೀನಾಮಾನವಾಗಿ ನಿಂದಿಸುತ್ತ ಬಂದಿರುವುದನ್ನು ದೇಶದ ಜನರೂ ನೋಡಿದ್ದಾರೆ. ಆದರೂ ಕುಟುಂಬ ರಾಜಕಾರಣ ವಿರೋಧಿಸುವ ಬಿ.ಜೆ.ಪಿ. ನಾಯಕರೆ ಕುಟುಂಬ ರಾಜಕಾರಣ ಮಾಡುವುದು, ಭ್ರಷ್ಠಾಚಾರದ ಬಗ್ಗೆ ಮಾತನಾಡುವ ಬಿ.ಜೆ.ಪಿ.ನಾಯಕರು ಅದರ ವಿರುದ್ದವೆ ಆಡಳಿತ ಮಾಡುವ ಪ್ರಖ್ಯಾತಿಯನ್ನು ಹೊಂದಿದ್ದಾರೆಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಹೇಳಿದ್ದಾರೆ.
Shivamogga District Congress ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಷ್ಟ್ ೧೫ ರಂದು ದೇಶದ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತ, ಕುಟುಂಬ ರಾಜಕಾರಣವನ್ನು ಕಠೋರ ಶಬ್ದಗಳನ್ನು ಜರಿದಿರುವುದರಿಂದ ಕುಟುಂಬ ರಾಜಕಾರಣದ ಕುಡಿಗಳಾದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಇವರಲ್ಲಿ ಯಾರಾದರೂ ರಾಜೀನಾಮೆ ಸಲ್ಲಿಸಬೇಕು. ಅಲ್ಲದೆ ದೇಶದ ಬಿ.ಜೆ.ಪಿ ನಾಯಕರ ರಾಜಕೀಯ ಕುಡಿಗಳೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಚುನಾಯಿತ ಸ್ಥಾನಗಳಿಗೆ ರಾಜೀನಾಮೆ ನೀಡಿ ನುಡಿದಂತೆ ನೆಡೆಯುವ ನೈತಿಕತೆ ತೋರಿಸಬೇಕೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಸವಾಲ್ ಹಾಕಿದ್ದಾರೆ.
ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಂತೆ ಕುಟುಂಬ ರಾಜಕಾರಣದ ಕುಡಿಗಳು ತಮ್ಮ ಚುನಾಯಿತ ಸ್ಥಾನಗಳಿಗೆ ರಾಜೀನಾಮೆ ನೀಡದೆ ಹೋದರೆ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಭಾರತೀಯ ಜನತಾ ಪಕ್ಷದ ನಾಯಕರೆಲ್ಲರೂ ಡೋಂಗಿಗಳೆಂದು ದೇಶದ ಜನರು ಪರಿಗಣ ಸಬೇಕಾಗುತ್ತದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಕುಟುಕಿದ್ದಾರೆ.