Thursday, March 19, 2026
Thursday, March 19, 2026

Sandipani School ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಸುವ ರಸಪ್ರಶ್ನೆ ಸ್ಪರ್ಧೆ ಉಪಯುಕ್ತ- ಶಾಸಕ ಚನ್ನಬಸಪ್ಪ

Date:

Sandipani School ಸಾಂದೀಪನಿ ಆಂಗ್ಲ ಶಾಲೆ, ಸಾರಥಿ ಯ್ಯೂಟ್ಯೂಬ್ ಚಾನಲ್ ಮತ್ತು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ಶಿವಮೊಗ್ಗ ಜಿಲ್ಲಾ ಘಟಕ) ಇವರ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಅಂತರ ಶಾಲಾ ರಸಪ್ರಶ್ನೆ ಕಾರ್ಯಕ್ರಮವು ಸಾಂದೀಪನಿ ಶಾಲೆಯಲ್ಲಿ ನಡೆಯಿತು.

ನಗರದ ಅನೇಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯನ್ನು ಕ್ವಿಜ್ ಮಾಸ್ಟರ್ ಹೇಮಂತ್ ಕೇಳ್ಕರ್ ಅವರು ನಡೆಸಿಕೊಟ್ಟರು.

Sandipani School ಈ ಕಾರ್ಯಕ್ರಮದಲ್ಲಿ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು, ಸಾಂದೀಪನಿ ಆಂಗ್ಲ ಶಾಲೆ ದ್ವಿತೀಯ ಸ್ಥಾನವನ್ನು, ಶ್ರೀರಾಮಕೃಷ್ಣ ಶಾಲೆ ತೃತೀಯ ಸ್ಥಾನವನ್ನು ಪಡೆದುಕೊಂಡರು.

ವಿಜೇತರುಗಳಿಗೆ ಶಿವಮೊಗ್ಗ ವಿಧಾನಸಭಾ ಸದಸ್ಯರಾದ ಶ್ರೀ ಚನ್ನಬಸಪ್ಪ ಇವರು ವಿತರಿಸಿ, ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಸ್ವಾತಂತ್ರ ಹೋರಾಟ ಸಾಗಿ ಬಂದ ಹಾದಿಯನ್ನು ತಿಳಿಸುವ ಸಲುವಾಗಿ ಈ ರಸಪ್ರಶ್ನೆಯು ಉಪಯುಕ್ತವಾಗಿದ್ದು, ಅನೇಕ ವಿಚಾರಗಳನ್ನು ತಿಳಿಯಲು ಸಹಕಾರಿಯಾಯಿತು ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ವರ್ಮ, ಕಾರ್ಯದರ್ಶಿ ಲೋಕೇಶ್, ನಿರ್ದೇಶಕರಾದ ರಾಜಶೇಖರ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ಶಿವಮೊಗ್ಗ ಜಿಲ್ಲಾ ಘಟಕ)ದ ಹರೀಶ್ ಪಂಡಿತ್ ಮತ್ತು ನಿರ್ದೇಶಕರುಗಳು, ಸಾರಥಿ ಚಾನಲ್ ನ ಅಜೇಯ ಶ್ರೀನಿವಾಸ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...