Saturday, December 6, 2025
Saturday, December 6, 2025

MLA HD Tammaiah ಪ್ರತಿಯೊಬ್ಬ ಮನುಷ್ಯ ನಾಡು ನುಡಿಗಾಗಿ ಸ್ಮರಣೀಯ ಕೆಲಸ ಮಾಡಬೇಕು- ಶಾಸಕ ಎಚ್.ಡಿ.ತಮ್ಮಯ್ಯ

Date:

MLA HD Tammaiah ಅಧಿಕಾರ ಎಂದಿಗೂ ಶಾಶ್ವತವಲ್ಲ. ಇರುವಂತಹ ಅವಧಿಯಲ್ಲಿ ಕನ್ನಡಪರ ಸೇವೆ ಹಾಗೂ ಭಾಷಾಭಿಮಾನ ವೃದ್ದಿಸುವ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದರೆ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೇ ನೆಲೆಯೂರಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಶುಕ್ರ ವಾರ ಸಂಜೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡಾ. ರಾಜ್ ಸಂಘದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಹಾಗೂ ಹಲವಾರು ಜನಪರ ಸಂಘ- ಸಂಸ್ಥೆಗಳಲ್ಲಿ ನಿಷ್ಟೆಯಿಂದ ಸೇವೆ ಸಲ್ಲಿಸಲಾಗಿದೆ.

ರಾಜಕಾರಣದಲ್ಲಿ ಎಷ್ಟೇ ಸಮಯ ಕಳೆದರೂ ಸಹ ಕನ್ನಡಪರ ಕಾರ್ಯ ಕ್ರಮ ಗಳಿಗೆ ಸಮಯಾವಕಾಶ ನೀಡುವ ಮೂಲಕ ಜೀವನದ ಒಂದು ಭಾಗವನ್ನಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ಮನುಷ್ಯನು ನಾಡು, ನುಡಿಗಾಗಿ ಸ್ಮರಣೀಯ ಕೆಲಸವನ್ನು ಮಾಡಬೇಕು. ಸಾಮಾಜಿಕ ಚಟು ವಟಿಕೆ ಅಥವಾ ಕನ್ನಡಪರ ಸಂಘಟನೆಗಳ ಒಡಗೂಡಿ ಕೆಲಸ ಮಾಡಿದರೆ ಮುಂದೊoದು ದಿನ ಯೋಗ ಜೊತೆಗೆ ಯೋಗ್ಯತೆಯೊಂದಿಗೆ ಜೀವನದ ದಿಕ್ಕು ಬದಲಿಸದೆ ಎಂದರು.

ಕನ್ನಡಪ್ರೇಮ, ನಾಡು, ನುಡಿ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಸನ್ನದ್ದರಾಗಿರಬೇಕು. ಇದೀಗ ರಾಜ್‌ಕುಮಾರ್ ಅಭಿಮಾನಿ ಸಂಘದಿoದ ಆಜಾದ್ ಪಾರ್ಕ್ ವೃತ್ತದಲ್ಲಿ ಮಹಾಪುರುಷ ಪುನೀತ್‌ರಾಜ್‌ಕುಮಾರ್ ಪ್ರತಿಮೆ ನಿರ್ಮಿಸಲು ಮುಂದಾಗಿದ್ದು ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ ಮಾತನಾಡಿ ಕನ್ನಡಪರ ಹಲವಾರು ಹೋರಾಟಗಳ ಮೂಲಕ ಸಾಮಾನ್ಯರಾಗಿ ದುಡಿದು ಇದೀಗ ಎತ್ತರಕ್ಕೆ ಬೆಳೆದಿರುವ ಶಾಸಕರು ನಮ್ಮಗೆಲ್ಲಾ ಉದಾಹರಣೆ. ಆ ಸಾಲಿನಲ್ಲಿ ಹಲವಾರು ಮುಖಂಡರುಗಳು ನಮ್ಮ ಮುಂದಿದ್ದು ಎಂದಿಗೂ ತಾಳ್ಮೆ ಕಳೆದುಕೊಳ್ಳದೇ ನಿಷ್ಟೆಯಿಂದ ಕನ್ನಡಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾಡುಗಳ್ಳ ವೀರಪ್ಪರಿಂದ ಡಾ. ರಾಜ್ ಅಪಹರಣಗೊಳಿಸಿದಂತಹ ಸಂದರ್ಭದಲ್ಲಿ ಶಾಂತ ರೀತಿಯಲ್ಲಿ ಮುಖಂಡರುಗಳು ಪ್ರತಿಭಟನೆ ನಡೆಸಿ ಸಂಘವು ಕಾರ್ಯೋನ್ಮುಖರಾಗಿತ್ತು. ಬಳಿಕ ಪುನೀತ್‌ರಾಜ್‌ಕುಮಾರ್ ಅನನ್ಯ ಸೇವೆ ಪರಿಗಣಿಸಿ ಅವರ ಪ್ರತಿಮೆ ನಿರ್ಮಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಜೊತೆಗೆ ಸೂಕ್ತ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಲಾಗುವುದು ಎಂದು ಹೇಳಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಆನಂದ್ ಮಾತನಾಡಿ ಡಾ. ರಾಜ್ ಸಂಘವು ಸ್ಥಾಪಿಸಿದ ಬಳಿಕ ತಮ್ಮಯ್ಯ ಸೇರಿದಂತೆ ಹಲವಾರು ಮಂದಿ ಜೊತೆಯಲ್ಲೇ ಪಾದಾರ್ಪಣೆ ಮಾಡಿದವರು. ಪ್ರಮುಖವಾಗಿ ಗಿರಿಧರ್ ಯತೀಶ್ ಸೇರಿದಂತೆ ಇನ್ನಿತರೆ ಮುಖಂಡರು ಸದಾ ಸಕ್ರಿಯರಾಗಿ ಕಾರ್ಯನಿರ್ವಹಿಸಿದವರು ಎಂದು ಸ್ಮರಿಸಿದರು.

MLA HD Tammaiah ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ನಗರಸಭಾ ಸದಸ್ಯೆ ರೂಪಾ ಕುಮಾರಿ, ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಉಪಾಧ್ಯಕ್ಷರಾದ ವಿಕ್ರಾಂತ್‌ಗೌಡ, ಗೌತಮ್‌ಚಂದ್, ಪ್ರಧಾನ ಕಾರ್ಯದರ್ಶಿ ಎಂ.ಜಿ.ಬಸವರಾಜ್, ಗೌರವಾಧ್ಯಕ್ಷರಾದ ಬಿ.ಎಂ.ಕುಮಾರ್, ಎಲ್.ವಿ.ಕೃಷ್ಣಮೂರ್ತಿ, ಕಾರ್ಯ ದರ್ಶಿಗಳಾದ ಕಳವಾಸೆ ರವಿ, ವಿನಯ್, ಸದಸ್ಯರುಗಳಾದ ಈಶ್ವರ್, ಮೋಹನ್‌ಕುಮಾರ್, ಓಂಕಾರಮೂರ್ತಿ, ಶೈಲಜಾ, ಅಶೋಕ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...