Karnataka Rakshana Vedhike ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅತಿಹೆಚ್ಚು ಲಂಚದ ಹಾವಳಿ ತಾಂಡವವಾಡುತ್ತಿದೆ. ಇದನ್ನು ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸುವ ಮೂಲಕ ಲಂಚದ ಹಾವಳಿ ತಡೆಗಟ್ಟಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಚೆ ಮೂಲಕ ಮನವಿ ಸಲ್ಲಿಸಿ ಪತ್ರಿಕಾ ಹೇಳಿಕೆ ನೀಡಿದ ಕರವೇ ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್ ಆರ್.ಟಿ.ಓ. ಕಚೇರಿಯಲ್ಲಿ ಲಂಚ ಹಾವಳಿ ಹೆಚ್ಚಾಗಿರುವ ಪರಿಣಾಮ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅತೀಹೆಚ್ಚು ಲಂಚದ ಹಾವಳಿಯಿಂದ ಸಾರ್ವಜನಿಕರನ್ನು ಸುಲಿಗೆ ಮಾಡ ಲಾಗುತ್ತಿದೆ. ಸರ್ಕಾರ ಬಡವರಿಗಾಗಿ ಹಲವು ಭಾಗ್ಯಗಳನ್ನು ನೀಡಿದೆ. ಆದರೆ ಆರ್.ಟಿ.ಓ. ಕಚೇರಿಯಲ್ಲಿ ಅದೇ ಬಡ ವರಿಂದ ಲಂಚದ ಮೂಲಕ ಹಣವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
Karnataka Rakshana Vedhike ವಾಹನ ಸಂಬಂಧಿಸಿದ ಒಂದೊಂದು ಕೆಲಸಕ್ಕೆ ಇಂತಿಷ್ಟು ಮೊತ್ತ ಎಂಬಂತೆ ದರವನ್ನು ನಿಗಧಿಪಡಿಸಲಾಗಿದೆ. ಇದರಲ್ಲಿ ದ್ವಿತೀಯ ದರ್ಜೆ ನೌಕರರು ದರ ನಿಗಧಿಪಡಿಸಿ ಭ್ರಷ್ಟಾಚಾರವೆಸಗಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಹೊರರಾಜ್ಯದ ನೊಂದಣಿಗೆ ಬರುವ ದಾಖಲಾತಿಗಳನ್ನು ಪರಿಶೀಲಿಸಿ ಡಾಟಾ ಎಂಟ್ರಿ ಮಾಡಲು ಕೆಲವರು ನಿಗಧಿ ಮಾಡಿರುವ ದರ ಐದು ಸಾವಿರ. ಈ ಹಣವನ್ನು ನೀಡಿದರೆ ಮರುದಿನವೇ ಆತನಿಗೆ ಆಕರ್ಷಕ ಸಂಖ್ಯೆಯೊ ಂದಿಗೆ ನೊಂದಣ ಯಾಗಲಿದೆ ಎಂದು ತಿಳಿಸಿದ್ದಾರೆ.
ಕೂಡಲೇ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಆರ್.ಟಿ.ಓ. ಕಚೇರಿಯಲ್ಲಾಗುತ್ತಿರುವ ಭ್ರಷ್ಟಚಾರವನ್ನು ಪರಿಶೀಲಿಸಿ ಭ್ರಷ್ಟ ನೌಕರರನ್ನು ಮತ್ತು ಬೆಂಬಲಿತ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಆರ್.ಟಿ.ಓ. ಲಂಚದ ಹಾವಳಿ ಸಂಬಂಧ ಗೃಹಸಚಿವರು, ಸಾರಿಗೆ ಸಚಿವ, ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿ ಹಾಗೂ ಲೋಕಾಯುಕ್ತಕ್ಕೆ ಅಂಚೆ ಮೂಲಕ ದೂರು ಸಲ್ಲಿಸಲಾಗಿದೆ ಎಂದಿದ್ದಾರೆ.