Saturday, May 16, 2026
Saturday, May 16, 2026

Rotary Club Shivamogga ಪ್ರತಿಭಾ ಪರೀಕ್ಷೆ: ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ಸಹಕಾರಿ- ಶೇಷಾಷಲ

Date:

Rotary Club Shivamogga ಮಕ್ಕಳಿಗೆ ವಿದ್ಯಾಭ್ಯಾಸದ ಜತೆಯಲ್ಲಿ ಸಾಮಾನ್ಯ ಜ್ಞಾನದ ಅವಶ್ಯಕತೆ ಅತ್ಯಂತ ಮುಖ್ಯ ಆಗಿದ್ದು, ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ನೆರವಾಗುತ್ತದೆ ಎಂದು ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೇಷಾಚಲ ಹೇಳಿದರು.

ಶಿವಮೊಗ್ಗ ನಗರದ ವಾಸವಿ ವಿದ್ಯಾಲಯದಲ್ಲಿ ಜೆಸಿಐಯ ಸಹ್ಯಾದ್ರಿ ಸಂಸ್ಥೆ ಹಾಗೂ ಇಂಡಿಯಾ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕಾ ಸಾಮಾರ್ಥ್ಯ ವೃದ್ಧಿಸುವ ದೃಷ್ಠಿಯಲ್ಲಿ ಇಂತಹ ಪರೀಕ್ಷೆಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.

ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಮಕ್ಕಳ ಶಿಕ್ಷಣದ ಜತೆಯಲ್ಲಿ ರಾಷ್ಟ್ರಮಟ್ಟದ ಪರೀಕ್ಷೆಗಳು ಹೊಸ ವಿಚಾರಗಳ ಕಲಿಕೆಗೆ ನೆರವು ಆಗಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಲಿದೆ. ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Rotary Club Shivamogga ಇದೇ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಅಧ್ಯಕ್ಷೆ ಹಾಗೂ ತರಬೇತುದಾರರಾದ ಡಾ. ಸುಷ್ಮಾ ಹಿರೇಮಠ್ ಮಾತನಾಡಿ, ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮ ಇದಾಗಿದ್ದು, ಪರೀಕ್ಷೆಯಲ್ಲಿ ವಿಜೇತರಾದವರಿಗೆ 50 ಸಾವಿರ ರೂ. ನಗದು ಬಹುಮಾನ ಪ್ರಥಮ ಸ್ಥಾನ, 40 ಸಾವಿರ ರೂ. ನಗದು ಬಹುಮಾನ ದ್ವಿತೀಯ, 30 ಸಾವಿರ ರೂ. ನಗದು ಬಹುಮಾನ ತೃತೀಯ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ದೆಹಲಿಯಿಂದ ಪ್ರಶ್ನೆ ಪತ್ರಿಕೆಗಳು ಬಂದಿದ್ದು, ರಾಷ್ಟçಮಟ್ಟದಲ್ಲಿ 500ಕ್ಕೂ ಹೆಚ್ಚು ಕೇಂದ್ರಗಳಲ್ಲಿ 1,33,642 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಇಂತಹ ಸ್ಪರ್ಧೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ನಗರದ ವಾಸವಿ ಶಾಲೆ, ರೋಟರಿ ಶಾಲೆ, ಸಹ್ಯಾದ್ರಿ ಪ್ರೌಢಶಾಲೆ, ಗಂಗೋತ್ರಿ ಪಿಯು ಕಾಲೇಜುಗಳಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆ ನಡೆಸಲಾಯಿತು. ಜೆಸಿಐನ ಸುಷ್ಮಾ ಅರವಿಂದ್, ಸ್ವಪ್ನ ಬದರೀನಾಥ್, ವಿದ್ಯಾ, ಶ್ರೀಯಾ ಪರೀಕ್ಷಿತ್, ಸ್ಫೂರ್ತಿ, ಹರ್ಷ, ಜೆಸಿಐ ವಲಯ ಉಪಾಧ್ಯಕ್ಷ ಸತೀಶ ಚಂದ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...