Ministry Of Heavy Industries ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ದಕ್ಷಿಣ ಕೊರಿಯಾದ ‘ಸಿಯೋಲ್ ಸೆಮಿಕಂಡಕ್ಟರ್‍ಸ್’ ಕಂಪನಿಯು ಕರ್ನಾಟಕದಲ್ಲಿ ಎಲ್‌ಇಡಿ ಚಿಪ್ ಮತ್ತು ಪ್ಯಾಕೇಜ್ ಉತ್ಪಾದನಾ ಸ್ಥಾವರ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ಇದಕ್ಕಾಗಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಿ ಜೆ ಕಿಮ್ ನೇತೃತ್ವದ ನಿಯೋಗವು ಈ ಬಗ್ಗೆ ವಿಚಾರ ವಿನಿಮಯ ನಡೆಸಿ, ರಾಜ್ಯ ಸರಕಾರದ ಸಹಕಾರ ಕೋರಲು ಸಚಿವರನ್ನು ಭೇಟಿ ಮಾಡಿತ್ತು.
ಬಳಿಕ ಮಾತನಾಡಿದ ಸಚಿವರು, “ಸಿಯೋಲ್ ಸೆಮಿಕಂಡಕ್ಟರ್‍ಸ್ ಕಂಪನಿಯು ಎಲ್‌ಇಡಿ ಚಿಪ್ ತಯಾರಿಕೆಯಲ್ಲಿ ಜಗತ್ತಿನಲ್ಲೇ ನಾಲ್ಕನೇ Ministry Of Heavy Industries ಅತಿದೊಡ್ಡ ಕಂಪನಿಯಾಗಿದೆ. ತನ್ನ ಘಟಕವನ್ನು ಸ್ಥಾಪಿಸಲು ಅದು ರಾಜ್ಯದಲ್ಲಿ 10ರಿಂದ 50 ಎಕರೆ ಜಮೀನನ್ನು ಬಯಸಿದೆ. ಉದ್ದೇಶಿತ ಉತ್ಪಾದನಾ ಸ್ಥಾವರದಿಂದ ಜನರಲ್ ಲೈಟಿಂಗ್, ಐಟಿ ಡಿಸ್‌ಪ್ಲೇ, ಯುವಿ ಮತ್ತು ಆಟೋಮೋಟೀವ್ ಕ್ಷೇತ್ರಕ್ಕೆ ಬೇಕಾದ ಉತ್ಪನ್ನಗಳು ತಯಾರಾಗಲಿವೆ” ಎಂದು ತಿಳಿಸಿದರು.
ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಇರುವುದನ್ನು ಕಂಪನಿಯು ಮನಗಂಡಿದೆ. ಈ ಘಟಕಕ್ಕೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್, ಮೆಟೀರಿಯಲ್, ಕೆಮಿಕಲ್ ಮತ್ತು ಮೆಕ್ಯಾನಿಕ್ ಎಂಜಿನಿಯರ್‍ಗಳು ಕೂಡ ಅಗತ್ಯವಾಗಿ ಬೇಕಾಗುತ್ತಾರೆ. ತಮಗೆ ಅಗತ್ಯವಾದ ಭೂಮಿಯನ್ನು ನೋಡಲು ಕಂಪನಿಯ ತಂಡವು ಸದ್ಯದಲ್ಲೇ ರಾಜ್ಯದ ಹಲವು ಸ್ಥಳಗಳಿಗೆ ಭೇಟಿ ನೀಡಲಿದೆ ಎಂದು ಅವರು ಮಾಹಿತಿ ನೀಡಿದರು.
ಕಂಪನಿಯ ನಿಯೋಗದಲ್ಲಿ ಇನ್ವೆಸ್ಟ್ ಇಂಡಿಯಾದ ಉನ್ನತಾಧಿಕಾರಿಗಳಾದ ಹೀತಲ್ ಸಾಂಘ್ವಿ ಮತ್ತು ಕಾಶಿಕಾ ಮಲ್ಹೋತ್ರ ಇದ್ದ
Ministry Of Heavy Industries ರಾಜ್ಯದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆಗೆ ಸಿಯೋಲ್ ಸೆಮಿಕಂಡಕ್ಟರ್ಸ್ ಆಸಕ್ತಿ
Date: