Department Of Forest ನಾಡಿನಲ್ಲಿ ಬೆಳೆದಿರುವ ಶ್ರೀಗಂಧವನ್ನು ಉಳಿಸಬೇಕಾದ ನಿಟ್ಟಿನಲ್ಲಿ ಸರ್ಕಾರವು ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಶ್ರೀಗಂಧ ರಕ್ಷಣೆಗೆ ಮುಂದಾ ಗಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ|| ಕೆ.ಸುಂದರ ಗೌಡ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಇತ್ತೀಚಿನ ದಿನಗಳಲ್ಲಿ ಶ್ರೀಗಂಧದ ಕಳ್ಳತನ ಮಾಡಿದ ನಂತರ ವೈಯಕ್ತಿಕ ಲಾಭಕ್ಕಾಗಿ ರಿಸೀವರ್ ಆಗಿ ಕಾರ್ಯನಿರ್ವಹಿಸುವ ಮಧ್ಯವರ್ತಿಗಳ ಆಸ್ತಿ ಯನ್ನು ಮುಟ್ಟುಗೋಲು ಹಾಕಿ ಸರ್ಕಾರವು ಹರಾಜು ಮುಖಾಂತರ ಬಂದ ಹಣವನ್ನು ಕಳ್ಳತನಕ್ಕೆ ಗುರಿಯಾದ ರೈತರಿಗೆ ನೀಡಬೇಕು ಎಂದಿದ್ದಾರೆ.
ಅರಣ್ಯದಲ್ಲಿರುವ ಶ್ರೀಗಂಧವು ನಾಶವಾದ ನಂತರ ರೈತರು ಬೆಳೆದಿರುವ ನಾಡಿನ ಶ್ರೀಗಂಧಕ್ಕೆ ಕಳ್ಳರು ಕನ್ನ ಹಾಕಿರುವುದು ಕಾನೂನಿನ ಶಿಥಿಲತೆಯ ಮೂಲವಾಗಿದೆ. ಶ್ರೀಗಂಧವನ್ನು ಉಳಿಸಬೇಕಾದಲ್ಲಿ ಸರ್ಕಾರವು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ತರಬೇತಿ ಹೊಂದಿದ ಶ್ವಾನದಳದ ಸಹಕಾರವನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯಪೂರ್ವದಲ್ಲಿ ಶ್ರೀಗಂಧದ ನಾಡಾಗಿದ್ದ ಕರ್ನಾಟವು ವಿನಾಶದ ಕಡೆಗೆ ನಡೆ ಹಾಕಿರುವುದು ದೊಡ್ಡ ದುರಂತ. ಜಿಲ್ಲೆಯಲ್ಲಿ ವನ್ಯಜೀವಿಗಳನ್ನು ಕಳೆದುಕೊಂಡ ನಾವು ಇದೀಗ ಬಯೋಡೈವರ್ಸಿಟಿಯನ್ನು ನಾಶಗೊ ಳಿಸುವ ಮರವನ್ನು ಸಿಗಿಯಲು ಹೊಂದಿರುವುದು ಪರಿಸರಕ್ಕೆ ನೀಡಿರುವ ವಿನಾಶದ ಕೊಡುಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Department Of Forest ಇತ್ತೀಚೆಗೆ ಕಡೂರು ಮತ್ತು ಅಜ್ಜಂಪುರದ ಸಮೀಪ ಶ್ರೀಗಂಧ ಕಳ್ಳತನದ ಆರೋಪಿಗಳನ್ನು ದಸ್ತಗಿರಿ ಮಾಡಿ ದರೂ ಕೂಡ ಕೆಲವರು ತಲೆಮರೆಸಿಕೊಂಡು ನಿರಂತರ ಶ್ರೀಗಂಧದ ಕಳ್ಳಸಾಗಾಣ ಯಲ್ಲಿ ತೊಡಗಿಸಿಕೊಂಡು ಯಾವುದೇ ರೀತಿಯ ಶಿಕ್ಷೆಗೊಳಗಾಗದೇ ಶ್ರೀಗಂಧದ ಸಂಪೂರ್ಣ ನಾಶಕ್ಕೆ ಕಾರಣಕರ್ತರಾಗಿದ್ದಾರೆ ಎಂದಿದ್ದಾರೆ.
ಈ ಸಂಬಂಧ ಪೊಲೀಸ್ ಹಾಗೂ ಅರಣ್ಯ ಇಲಾಖೆ ಆರೋಪಿಗಳನ್ನು ಕಾನೂನಿನ ಸಿಲುಕಿಸಿ ಅವರಿಗೆ ಕೇಸು ಹಾಕುವ ಮುಖಾಂತರ ರೌಡಿ ಗುಂಪಿಗೆ ಸೇರಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಕಾನೂನಡಿಯಲ್ಲಿ ಅವರಿಗೆ ಮಾನವ, ಸಂವಿಧಾನದ, ನಾಗರೀಕ ಹಾಗೂ ಮತದಾನದ ಹಕ್ಕನ್ನು ನಿರಾಕರಿಸುವಂತಹ ಕಾನೂನನ್ನು ಹುಟ್ಟುಹಾಕ ಬೇಕು ಎಂದಿದ್ದಾರೆ.