Congress Karnataka ಸಾರ್ವಜನಿಕರ ತೆರಿಗೆ ಹಣವನ್ನು ಸಾರ್ವಜನಿಕವಾಗಿ ಬಳಕೆಯಾಗುತ್ತಿದ್ದರೂ ವಿರೋಧ ಪಕ್ಷದ ಮುಖಂಡರುಗಳು ಕಾಂಗ್ರೆಸ್ ಭ್ರಷ್ಟಚಾರ ಆರೋಪವೆಸಗುತ್ತಿದೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಾ ನಾಟಕವಾಡುತ್ತಿದೆ ಎಂದು ಕಾಂಗ್ರೆಸ್ ಕಿಸಾನ್ ಸೆಲ್ ರಾಜ್ಯ ಕಾರ್ಯದರ್ಶಿ ಸಿ.ಎನ್.ಅಕ್ಮಲ್ ಆರೋಪಿ ಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಗಳ ಆರೋಪಗಳಲ್ಲಿ ಹುರುಳಿಲ್ಲ. ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿ ಸುವ ಕಾರ್ಯದಲ್ಲಿ ರಾಜ್ಯಸರ್ಕಾರ ತೊಡಗಿದೆ. ಇದನ್ನು ಅರ್ಥಮಾಡಿಕೊಳ್ಳದ ವಿರೋಧ ಪಕ್ಷದವರು ಸುಖಸುಮ್ಮ ನೆ ತೆರಿಗೆ ಹಣ ಪೋಲಾಗುತ್ತಿದೆ, ಲಂಚ ಹೆಚ್ಚಾಗಿದೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
Congress Karnataka ಈಗಾಗಲೇ ವಿರೋಧ ಪಕ್ಷದ ಶಾಸಕರುಗಳು ಚುನಾವಣಾ ಸಮಯದಲ್ಲಿ ಕೋಟಿಗಳಲ್ಲೇ ಆಸ್ತಿ ಹೊಂದಿರು ವುದಾಗಿ ತಿಳಿಸಿದ್ದಾರೆ. ಎರಡು ದಶಕಗಳ ಹಿಂದೆ ಶಾಸಕರ ಸ್ಥಿತಿ ಏನಾಗಿತ್ತು, ಇದೀಗ ಯಾವ ಸ್ಥಾನದಲ್ಲಿದ್ದಾರೆ ಎಂ ಬುದನ್ನು ಅರಿಯಬೇಕು. ಇದನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳ ವಿಷಯ ದಲ್ಲೂ ಬೆಣ್ಣೆಯಲ್ಲಿ ಕಲ್ಲುಡುಕುವ ಕೆಲಸ ಮಾಡಬಾರದು ಎಂದಿದ್ದಾರೆ.
ಜೆಡಿಎಸ್ ಮುಖಂಡರುಗಳಿಗೆ ಕೇಳುವುದೇನೆಂದರೆ ನಿಮ್ಮ ಸರ್ಕಾರವಿದ್ಧಾಗ ರೈತರ ಸಾಲ ಮನ್ನಾ ಮಾಡುವು ದಾಗಿ ಒಂದೂವರೆ ವರ್ಷಗಳ ಕಾಲ ಕಣ್ಣಿರಿಡುತ್ತಾ ಕಾಲಹರಣ ಮಾಡಿರುವುದು ಸರಿಯೇ. ಕಾಂಗ್ರೆಸ್ ಜನರಿಗೆ ನುಡಿದಂತೆ ನಡೆಯುತ್ತಿರುವುದು ಸರಿಯೇ ಎಂಬುದನ್ನು ರಾಜ್ಯದ ಜನತೆ ಅರಿತಿದ್ದಾರೆ ಎಂದು ಹೇಳಿದ್ದಾರೆ.
ಜನಪರವಾಗಿ ಹಲವಾರು ಯೋಜನೆಗಳನ್ನು ತಂದೊಡ್ಡುವ ಮೂಲಕ ಉತ್ತಮ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ರಾಜ್ಯದ ಮಾದರಿಯಲ್ಲೇ ಲೋಕಸಭಾ ಚುನಾವಣೆಯಲ್ಲೂ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.