Wednesday, April 30, 2025
Wednesday, April 30, 2025

Health Department ತಾಲ್ಲೂಕಿನಲ್ಲಿ ಶೇ,100 ಲಸಿಕಾಕರಣ ಸಾಧಿಸಲು ಅಗತ್ಯ ಕ್ರಮ- ತಹಶೀಲ್ದಾರ್ ನಾಗರಾಜ್

Date:

Health Department ಲಸಿಕಾ ವಂಚಿತ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡುವುದರೊಂದಿಗೆ ತಾಲ್ಲೂಕಿನಲ್ಲಿ ಸಾರ್ವತ್ರಿಕೆ ಲಸಿಕೆ ಗುರಿಯನ್ನು ಶೇ.100 ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು ತಹಶೀಲ್ದಾರ್ ನಾಗರಾಜ್ ತಿಳಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವತ್ರಿಕ ಲಸಿಕೆ ಹಾಗೂ ಇತರೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕುರಿತು ದಿ:04-08-2023 ರಂದು ತಹಶೀಲ್ದಾರರ ಕಚೇರಿಯಲ್ಲಿ ಏರ್ಪಡಿಸಲಾಗದ್ದ ತಾಲ್ಲೂಕು ಟಾಸ್ಕ್‍ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 0 ಯಿಂದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬಿಟ್ಟು ಹೋದ ಲಸಿಕೆಗಳನ್ನು ಪೂರ್ಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಾರ್ವತ್ರಿಕ ಲಸಿಕೆಯೊಂದಿಗೆ ಇತರೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Health Department ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ತೀವ್ರತರ ಮಿಷನ್ ಇಂದ್ರಧನುಷ್ ಅಭಿಯಾನ 3 ಸುತ್ತಿನಲ್ಲಿ ನಡೆಯಲಿದೆ. 2023 ರ ಆಗಸ್ಟ್ 7 ರಿಂದ 12, ಸೆಪ್ಟೆಂಬರ್ 11 ರಿಂದ 16, ಅಕ್ಟೋಬರ್ 9 ರಿಂದ 14 ನಡೆಯಲಿದೆ. ಈ ಸುತ್ತುಗಳಲ್ಲಿ ಲಸಿಕಾವಂಚಿತರಾದ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಗಳನ್ನು ಪಡೆಯಬೇಕು.

ತಾಲ್ಲೂಕು ವ್ಯಾಪ್ತಿಯ ಅದರಲ್ಲೂ ಹೈರಿಸ್ಕ್ ಏರಿಯಾ(ಹೆಚ್‍ಆರ್‍ಎ)ಗಳಾದ ಸ್ಲಂ, ಇಟ್ಟಿಗೆಭಟ್ಟಿಗಳು, ವಲಸಿಗರು ವಾಸಿಸುವ ಸ್ಥಳಗಳು, ನಗರ ಹೊರವಲಯ(ಪೆರಿ-ಅರ್ಬನ್) ಪ್ರದೇಶಗಳಲ್ಲಿ ಲಸಿಕಾವಂಚಿತರನ್ನು ಗುರುತಿಸಿ ಲಸಿಕೆ ನೀಡಬೇಕು.

(ಮೀಸಲ್ಸ್ ರುಬೆಲ್ಲಾ)ಎಂಆರ್-1 ಮತ್ತು ಎಂಆರ್-2 ಲಸಿಕಾಕರಣ ಶೇ.95 ಪ್ರಗತಿಯಾಗಿದೆ. ಬಿಟ್ಟುಹೋದ, ಲಸಿಕೆ ವಂಚಿತರಾದವರ ಬಗ್ಗೆ ಮನೆ ಮನೆ ಸರ್ವೇ ಕಾರ್ಯವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಡಿಸಲಾಗುತ್ತಿದೆ ಎಂದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸದೇ ಬಾಕಿ ಇರುವ 0 ಯಿಂದ 2 ವರ್ಷದೊಳಗಿನ 730 ಮಕ್ಕಳು, 2 ರಿಂದ 5 ವರ್ಷದೊಳಗಿನ 6 ಮಕ್ಕಳು ಮತ್ತು 226 ಗುರುತಿಸಲಾಗಿದೆ. ಹಾಗೂ 16 ಹೆಚ್‍ಆರ್‍ಎ ಪ್ರದೇಶಗಳನ್ನು ಲಸಿಕೆ ನೀಡಲು ಗುರುತಿಸಲಾಗಿದೆ. ಈ ಲಸಿಕಾಕರಣದ ನಿಗಿದತ ಗುರಿ ತಲುಪಲು ಅಗತ್ಯವಾದ ಇತರೆ ಇಲಾಖೆಗಳ ಪಾತ್ರ ಕುರಿತು ವಿವರಿಸಿದರು.

ಹಾಗೂ ಯು-ವಿನ್ ಪೋರ್ಟಲ್ ಮೂಲಕ ಲಸಿಕೆ ಪಡೆಯುವ ಫಲಾನುಭವಿಗಳು ಆನ್‍ಲೈನ್ ನೋಂದಣಿ ಮಾಡಿಸಿಕೊಳ್ಳಬಹುದು. ಈ ಪೋರ್ಟಲ್ ಮೂಲಕ ಲಸಿಕಾ ಅಧಿವೇಶನ ಬುಕ್ ಮಾಡಿಕೊಳ್ಳಬಹುದು. ಲಸಿಕೆ ಕುರಿತಾಗಿ ಎಸ್‍ಎಂಎಸ್, ಸರ್ಟಿಫಿಕೇಟ್ ಪಡೆಯಬಹುದಾಗಿದ್ದು ಕೋವಿನ್ ರೀತಿಯಲ್ಲಿ ಇದು ಕೆಲಸ ಮಾಡಲಿದೆ ಎಂದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಾಲ್ಲೂಕಿನಲ್ಲಿ ಒಟ್ಟು 11 ತಂಬಾಕು ದಾಳಿಗಳನ್ನು ನಡೆಸಿದ್ದು 42 ಪ್ರಕರಣ ದಾಖಲಿಸಿ ರೂ.26600 ಗಳನ್ನು ಸಂಗ್ರಹಿಸಲಾಗಿದೆ. 03 ಶಾಲೆಗಳಲ್ಲಿ ತರಬೇತಿ ಏರ್ಪಡಿಸಲಾಗಿದೆ ಎಂದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಎ ಮತ್ತು ಬಿ ತಂಡಗಳು ಸೇರಿ 0 ಯಿಂದ 6 ವರ್ಷದ ಒಟ್ಟು 24071 ಮಕ್ಕಳ ಆರೋಗ್ಯ ತಪಾಸಣೆ ಕೈಗೊಂಡಿದ್ದು ಶೇ.99 ಪ್ರಗತಿ ಸಾಧಿಸಲಾಗಿದೆ.

ತಾಲ್ಲೂಕಿನಲ್ಲಿ ಈವರೆಗೆ 03 ಮಲೇರಿಯಾ, 27 ಡೆಂಗ್ಯು, 9 ಚಿಕುನ್‍ಗುನ್ಯ ಪ್ರಕರಣ ದಾಖಲಾಗಿದೆ. ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಗಸ್ಟ್ 1 ರಿಂದ 7 ರವರೆಗೆ ಅಭಿಯಾನ ಆಚರಿಸಿ, ತಾಯಂದಿರಿಗೆ ಸ್ತನ್ಯಪಾನದ ಮಹತ್ವವನ್ನು ತಿಳಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಸಭೆಗೆ ಹಾಜರಾಗಿ ತಮ್ಮ ಕುಂದು ಕೊರತೆಗಳ ಕುರಿತು ತಹಶೀಲ್ದಾರರ ಬಳಿ ಅಹವಾಲು ಸಲ್ಲಿಸಿದರು.

ಸಭೆಯಲ್ಲಿ ಸಿಡಿಪಿಓ ಚಂದ್ರಪ್ಪ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...