Thursday, September 17, 2026
Thursday, September 17, 2026

Kuvempu University ಮೊಬೈಲ್ ಸೆಲ್ಫಿ ಹುಚ್ವಿನಿಂದಾಗಿ ಅಪಾಯಗಳು ಹೆಚ್ಚು-ಡಾ.ವಿ.ಎಲ್.ಎಸ್.ಕುಮಾರ್

Date:

Kuvempu University ಕುವೆಂಪು ವಿಶ್ವವಿದ್ಯಾಲಯದ ರಾಷ್ಟೀಯ ಸೇವಾ ಯೋಜನೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ : 04-08-2023 ರಂದು ವಿಶ್ವವಿದ್ಯಾಲಯದ ನಗರ ಕಛೇರಿ, ಶಿವಮೊಗ್ಗ ಇಲ್ಲಿ ಹಮ್ಮಿಕೊಂಡಿದ್ದ “ ವಿಶ್ವವಿದ್ಯಾಲಯ ಮಟ್ಟದ ಏಡ್ಸ್ ಜಾಗೃತಿ, ರಕ್ತದಾನದ ಮಹತ್ವ, ಪ್ರಥಮ ಚಿಕಿತ್ಸೆ ಕುರಿತು ಒಂದು ದಿನದ ಕಾರ್ಯಾಗಾರ ” ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಡಾ. ಸಂಧ್ಯಾಕಾವೇರಿ ಇವರು ಇಂದಿನ ಯುವಜನತೆಗೆ ಇಂತಹಾ ಸೂಕ್ಷ್ಮ ವಿಚಾರಗಳ ಕುರಿತ ಕಾರ್ಯಾಗಾರಗಳು ಅತ್ಯಂತ ಅವಶ್ಯಕ ಮಾಹಿತಿ ನೀಡಲಿವೆ ಇದನ್ನು ಆಯೋಜಿಸುತ್ತಿರುವ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಡಾ ನಾಗರಾಜ ಪರಿಸರ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಶಂಶಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ ನಾಗರಾಜ ಪರಿಸರ ಇವರು ಈ ಕಾರ್ಯಾಗಾರಕ್ಕೆ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ. ತಾವೆಲ್ಲರೂ ಇದರ ಸದುಪಯೋಗ ಪಡೆದುಕೊಂಡು ಸಮಾಜಕ್ಕೆ ಇದರ ಉತ್ತಮ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮೊದಲನೇ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀಮತಿ ಮಂಗಳಾ ಎನ್. ಎಮ್. ಜಿಲ್ಲಾ ಮೇಲ್ವಿಚಾರಕರು, ಡ್ಯಾಪ್ಕೋ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ ಇವರು “ಏಡ್ಸ್ ಜಾಗೃತಿ” ಕುರಿತು ಪ್ರಾತ್ಯಾಕ್ಷಿಕೆ ನೀಡುವ ಮೂಲಕ ಹೆಚ್ ಐ ವಿ (ಏಡ್ಸ್) ಧನಾತ್ಮಕತೆಯಲ್ಲಿ ಭಾರತ ಪ್ರಪಂಚದಲ್ಲಿ ೩ನೇ ಸ್ಥಾನದಲ್ಲಿದೆ. ಏಡ್ಸ್ ತಡೆಗಟ್ಟುವ ಕ್ರಮಗಳನ್ನು ಪ್ರಶ್ನೋತ್ತರಗಳ ಮೂಲಕ ವಿವರಿಸಿ ತಿಳಿಸಿದರು.

Kuvempu University ಡಾ. ವಿ. ಎಲ್. ಎಸ್. ಕುಮಾರ್, ಅಂತರಾಷ್ಟೀಯ ತರಬೇತುದಾರರು ಹಾಗು ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಶಿವಮೊಗ್ಗ ಇವರು “ರಕ್ತದಾನದ ಮಹತ್ವ ಹಾಗೂ ಪ್ರಥಮ ಚಿಕಿತ್ಸೆ” ಕುರಿತು ಪ್ರಾತ್ಯಾಕ್ಷಿಕೆ ನೀಡುವ ಮೂಲಕ ಅತ್ಯುನ್ನತ ಮಾಹಿತಿ ನೀಡಿದರು. ಈಗಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಸೆಲ್ಫಿ ಹುಚ್ಚಿನಿಂದಾಗುವ ಅಪಾಯಗಳ ಕುರಿತು ಹಾಗೂ ಪ್ರಥಮ ಚಿಕಿತ್ಸೆ ಗೊತ್ತಿದ್ದರೆ ಅಪಘಾತ ಸಂದರ್ಭದಲ್ಲಿ ನಾವು ಮಾಡಬೇಕಾದ ಸುರಕ್ಷತಾ ಕ್ರಮಗಳ ಕುರಿತು ವಿವರಿಸಿ ತಿಳಿಸಿದರು.

ಎನ್.ಎಸ್.ಎಸ್. ಸ್ವಯಂ ಸೇವಕಿಯರು ಎನ್.ಎಸ್.ಎಸ್. ಗೀತೆ ಹಾಡಿದರು. ರಾ.ಸೇ.ಯೋ. ಅಧಿಕಾರಿUಳಾದ ಶ್ರೀ ಮಲ್ಲಿಕಾರ್ಜುನ್ ಎ. ಎನ್. ನಿರೂಪಿಸಿದರೆ ಡಾ ಪ್ರಕಾಶ್ ಎನ್. ಜೆ. ಸರ್ವರನ್ನೂ ವಂದಿಸಿದರು.

ಶಿವಮೊಗ್ಗ ನಗರದ ಸ್ಥಳೀಯ ಕಾಲೇಜುಗಳ ಒಟ್ಟು ೧೫೦ ಸ್ವಯಂ ಸೇವಕ/ಸೇವಕಿಯರು ಅಧಿಕಾರಿಗಳು ಭಾಗವಹಿಸಿ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...