ZP Chikkamagaluru ಚಿಕ್ಕಮಗಳೂರು ತಾಲ್ಲೂಕಿನ ಬೀಕನಹಳ್ಳಿ ಗ್ರಾಮ ಪಂಚಾಯಿತಿಗೆ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಹೇಮಾವತಿ ದಿನೇಶ್ ಹಾಗೂ ಉಪಾಧ್ಯಕ್ಷರಾಗಿ ಲೀಲಾ ಪುಟ್ಟೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾವತಿ ಮತ್ತು ಲೀಲಾ ಹೊರತು ಪಡಿಸಿ ಬರ‍್ಯಾವ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಚಂದ್ರಶೇಖರ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ನಗರ ಸಮೀಪದಲ್ಲಿರುವ ಬೀಕನಹಳ್ಳಿ ಗ್ರಾ.ಪಂ. ಪ್ರಭಾವಶಾಲಿಯಾಗಿದೆ. ಇಂತಹ ಪಂಚಾಯಿತಿ ಅಧಿಕಾರ ವಹಿಸಿಕೊಂಡವರು ಚುರುಕಿನಿಂದ ಕೆಲಸ ಮಾಡಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಹೆಜ್ಜೆ ಗುರುತು ಬಿಡುವ ರೀತಿಯಲ್ಲಿ ಕೆಲಸ ಮಾಡಿದರೆ ಗ್ರಾಮಸ್ಥರ ಮನಸ್ಸಿನಲ್ಲಿ ಶಾಶ್ವತವಾಗಿ ನೆರಯೂರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ZP Chikkamagaluru ಜಿ.ಪಂ. ಮಾಜಿ ಉಪಾಧ್ಯಕ್ಷ ಸೋಮಶೇಖರ್ ಮಾತನಾಡಿ ಹಿಂದಿನ ಶಾಸಕರ ಅನುದಾನದಲ್ಲಿ ಈ ಗ್ರಾ.ಪಂ. ವ್ಯಾಪ್ತಿಯಲ್ಲಿ 20 ಕೋಟಿ ರೂ.ಹೆಚ್ಚು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದೀಗ ಅಧಿಕಾರ ವಹಿಸಿ ಕೊಂಡಂತವರು ಗ್ರಾಮಸ್ಥರಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಾಜೀವ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಪುಟ್ಟೇಗೌಡ, ಗ್ರಾ.ಪಂ. ಸದಸ್ಯರುಗಳಾದ ಬಿ.ವಿ.ವಿಜಯಕುಮಾರ್, ಬಿ.ಎಂ.ಯೋಗೀಶ್, ಹೇಮಾವತಿ ಲೋಕೇಶ್, ಹೆಚ್.ಪಿ.ಮಂಜೇಗೌಡ, ಮಂಜುಳಾ, ಭಾಗೀರಥಿ ಜಯಣ್ಣ, ಭಾಗ್ಯಮ್ಮ, ಪಿಡಿಓ ಕೆ.ಎಸ್.ಪ್ರದೀಪ್ ಕುಮಾರ್, ಬಿಜೆಪಿ ಮುಖಂಡರುಗಳಾದ ಬೀರೇಗೌಡ, ಕುಮಾರ್, ನವೀನ್ ಮತ್ತಿತರರು ಹಾಜರಿದ್ದರು.