Thursday, June 18, 2026
Thursday, June 18, 2026

Missing Person in Sagara ಕಾಣೆಯಾದ ವ್ಯಕ್ತಿ ಜಯಂತ್ ಬಗ್ಗೆ ಪೊಲೀಸ್ ಪ್ರಕಟಣೆ

Date:

Missing Person in Sagara ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ ತಾಲ್ಲೂಕು ಭಾರಂಗಿ ಹೋಬಳಿ ಅರಳಗೋಡು ತುಮರಿ ಗ್ರಾಮದ ಜಯಂತ್ ಎಂಬ ವ್ಯಕ್ತಿಯು ದಿನಾಂಕ 15/07/2023 ರಂದು ಬೆಳಗ್ಗೆ 11:00 ಗಂಟೆಯ ಸುಮಾರಿಗೆ ತಮ್ಮ ಮನೆಯಲ್ಲಿ ಕೂಗಾಡಿ ಗಲಾಟೆ ಮಾಡಿಕೊಂಡು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದರು.

ನಂತರ ಸಂಜೆಯಾದರೂ ವಾಪಸ್ ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಅವರ ಕುಟುಂಬದವರು ಬಂದು ಗಣಕೀಕೃತ ದೂರನ್ನು ನೀಡಿದ್ದಾರೆ.

Missing Person in Sagara ಕಾಣೆಯಾದ ಜಯಂತ್ ರವರಿಗೆ 30 ವರ್ಷವಾಗಿದ್ದು 5.8 ಅಡಿ ಎತ್ತರವಿದ್ದಾರೆ, ದುಂಡನೆ ಮುಖ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ಬಲಗೈಯಲ್ಲಿ ಸುಟ್ಟ ಗಾಯದ ಕಲೆ ಇರುತ್ತದೆ, ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಇವರು ಮನೆಯಿಂದ ಹೋಗುವಾಗ ನೀಲಿ ಮತ್ತು ಹಳದಿ ಬಣ್ಣದ ಚೆಕ್ಸ್ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರ ಸುಳಿವು ಸಿಕ್ಕವರು ಕಾರ್ಗಲ್ ಪೊಲೀಸ್ ಠಾಣೆ:08186-240324, ಪಿಎಸ್ಐ ಕಾರ್ಗಲ್ ಪೊಲೀಸ್ ಠಾಣೆ:9480803362, ಸಿಪಿಐ ಸಾಗರ ಗ್ರಾಮಾಂತರ ವೃತ್ತ:9480803336, ಎಸ್ ಪಿ ಕಚೇರಿ ಶಿವಮೊಗ್ಗ:08182-262400, 9480803301 ಈ ನಂಬರ್ ಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಬೇಕೆಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...