Shivamogga Municipal Corporation ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗವು ಶಿವಮೊಗ್ಗ ನಗರದಲ್ಲಿ ೨೪/೭ ನಿರಂತರ ನೀರು ವಿತರಣಾ ವ್ಯವಸ್ಥೆಯನ್ನು ನಗರದ 18 ಜೋನ್‌ಗಳಲ್ಲಿ ಚಾಲನೆಗೊಳಿಸಿದೆ.
Shivamogga Municipal Corporation ಜೋನ್ ನಂ:02 -ಗೋಪಾಳ, ಜೋನ್ ನಂ.03- ಸ್ವಾಮಿ ವಿವೇಕಾನಂದ ಬಡಾವಣೆ, ಜೋನ್ ನಂ.04- ಆರ್.ಎಂ.ಎಲ್.ನಗರ, ಜೋನ್ ನಂ: 05- ಬಿ.ಬಿ.ಸ್ಟಿಟ್, ಜೋನ್ ನಂ.06- ಮಲ್ಲೇಶ್ವರ ನಗರ, ಜೋನ್ ನಂ. 07- ಅಪ್ಪಾಜಿ ರಾವ್ ಕಾಂಪೌಂಡ್, ಜೋನ್ ನಂ:08- ಪಾಲಿಕೆ ಟ್ಯಾಂಕ್, ಜೋನ್ ನಂ.10- ಉರ್ದು ಶಾಲೆ ಟ್ಯಾಂಕ್, ಜೋನ್ ನಂ:11- ಎನ್.ಟಿ.ರಸ್ತೆ, ಪಿ.ಡಬ್ಲ್ಯೂಡಿ ಬ್ಯಾಂಕ್, ಜೋನ್ ನಂ.19- ವಿನೋಬನಗರ ಶಿವಾಲಯ ಬ್ಯಾಂಕ್, ಜೋನ್ ನಂ:24- ಸ್ಟೇಡಿಯಂ ಟ್ಯಾಂಕ್, ಜೋನ್ ನಂ:25- ರವೀಂದ್ರ ನಗರ ಬ್ಯಾಂಕ್, ಜೋನ್ ನಂ.38-ಊರಗಡೂರು ಟ್ಯಾಂಕ್, ಜೋನ್ ನಂ.45-ಬಿ.ಎಸ್.ಎನ್.ಎಲ್.ಟ್ಯಾಂಕ್, ಜೋನ್ ನಂ.46- ಗಾಡಿಕೊಪ್ಪ ಟ್ಯಾಂಕ್, ಜೋನ್ ನಂ.50- ಹರಿಗೆ ಟ್ಯಾಂಕ್, ಜೋನ್ ನಂ.52- ಶರಾವತಿ ನಗರ ಎ.ಬ್ಲಾಕ್, ಹೊಸ ಟ್ಯಾಂಕ್, ಜೋನ್ ನಂ.59- ಆರ್.ಎಮ್.ಎಲ್.ನಗರ, ಹೊಸ ಬ್ಯಾಂಕ್ ಈ ಎಲ್ಲಾ ಟ್ಯಾಂಕ್ ಜೋನ್‌ಗಳಲ್ಲಿ ಹೊಸದಾಗಿ ನಿರ್ಮಾಣವಾಗುವ ಮನೆ ಮತ್ತು ವಾಣ ಜ್ಯ ಕಟ್ಟಡಗಳಿಗೆ 24/7 ಯೋಜನೆಯಡಿ ನೀರಿನ ಸಂಪರ್ಕವನ್ನು ಕಲ್ಪಿಸಲು ತಗಲುವ ವೆಚ್ಚವನ್ನು ನೀರಿನ ಸಂಪರ್ಕ ಪಡೆಯುವ ಗ್ರಾಹಕರೇ ನೇರವಾಗಿ ಕಛೇರಿಗೆ ಪಾವತಿಸಿದ ಈ ಯೋಜನೆಯ ಗುತ್ತಿಗೆದಾರರಾದ ಮೇ||ವಿಯೋಲಿಯಾ ಇಂಡಿಯಾ ಲಿಮಿಟೆಡ್, ಶಿವಮೊಗ್ಗ ರವರಿಂದ ನೀರಿನ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಕನನೀಸ ಮತ್ತು ಒಚ ಮಂಡಳಿಯ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.