National Broadcasting Day ಪ್ರತೀ ವರ್ಷದ ಜುಲೈ 23 ,ರಾಷ್ಟ್ರೀಯ ಪ್ರಸಾರ ದಿನ.
1927 ,ಜುಲೈ 23 ನ್ಯಾಷನಲ್ ಬ್ರಾಡ್ ಕಾಸ್ಟಿಂಗ್ ಕಂಪನಿ ಅಸ್ತಿತ್ವಕ್ಕೆ ಬಂದಿತು.
ಹಣಕಾಸಿನ ಮುಗ್ಗಟ್ಟಿನಿಂದಾಗಿ
ಶುರುವಾದ ಮೂರು ವರ್ಷದೊಳಗೇ ಕಂಪನಿ ಕಣ್ಮುಚ್ಚಿತು.
1930 ,ಜೂನ್ 8 ರಲ್ಲಿ ಆಲ್ ಇಂಡಿಯ ರೇಡಿಯೊ ಆಗಿ ನಾಮಾಂಕಿತವಾಗಿ ಮತ್ತೆ ಪ್ರಸಾರ ಕಾರ್ಯ ಆರಂಭಿಸಿತು.
ವಾಲ್ಟರ್ ಕಾಫ್ ಮನ್ ಆರಂಭಿಕ
ಸೂಚನಾ ಸಂಗೀತವನ್ನ ಸಂಯೋಜಿಸಿ ನುಡಿಸಿದರು.
1941 ರಲ್ಲಿ ವ್ಯವಸ್ಥಿತವಾಗಿ
ಬ್ರಿಟಿಷ್ ಆಳ್ವಿಕೆಯಲ್ಲಿ
ಸೂಚನಾ ಮತ್ತು ಪ್ರಸಾರ ಇಲಾಖೆಯ ಆಡಳಿತಕೊಳಪಟ್ಟಿತು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಹೊತ್ತಿಗೆ
ದೆಹಲಿ,ಮುಂಬೈ,ಕೊಲ್ಕತ್ತ,ಚೆನೈ, ಲಕ್ನೊ ಮತ್ತು ತಿರುಚಿರಪಲ್ಲಿ ಹೀಗೆ ಆರು ಆಕಾಶವಾಣಿ ನಿಲಯಗಳಿದ್ದವು.
ಅಚ್ಚುಕಟ್ಟಾಗಿ ಮತ್ತು ಕೇಳುಗರಿಗೆ ಕಾರ್ಯಕ್ರಮಗಳನ್ನು ರೂಪಿಸುವ ದಕ್ಷಿಣ ಭಾರತದ ಚೆನೈ ನಿಂದ ಶುರುವಾದವು.
1956 ರಲ್ಲಿ ಆಕಾಶವಾಣಿ ಪದ ಬಳಕೆಗೆ ಬಂದಿತು.
ಈ ಪದ ಕೊಡುಗೆ ಮೈಸೂರು ಖಾಸಗಿ ಕೇಂದ್ರ ನಡೆಸುತ್ತಿದ್ದ
ಗೋಪಾಲ ಸ್ವಾಮಿ ಅಯ್ಯಂಗಾರ್ ಅವರದ್ದಾಗಿದೆ.
ಕನ್ನಡದಲ್ಲಿ ” ಬಾನುಲಿ ” ಎಂಬ ಸುಂದರ ಹೆಸರಿದೆ.
ಆಕಾಶವಾಣಿಯ
ಧ್ಯೇಯ ವಾಕ್ಯ
” ಬಹುಜನ ಹಿತಾಯ,ಬಹುಜನ ಸುಖಾಯ”
National Broadcasting Day ಆಕಾಶವಾಣಿಯು
ಸಾಮಾಜಿಕ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನಲ್ಲದೇ ಕ್ರೀಡಾ ವಿವರಣೆ, ನಾಟಕ, ಸಂಗೀತ,ಚರ್ಚೆ ,ಸಂದರ್ಶನ ,ಸುದ್ದಿ ಸಮಾಚಾರ ಮುಂತಾದ ವಿವಿಧ ಅಭಿರುಚಿಯ ಕಾರ್ಯಕ್ರಮಗಳನ್ನ
ರೂಪಿಸಿ ಜನಮನ್ನಣೆಗಳಿಸಿದೆ.