Global Human Rights Forum ಮನುಷ್ಯ ಪರ ನಿಲುವುಗಳಿಗಾಗಿ, ಮೂಲಭೂತ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಪಿತವಾಗಿರುವ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೊರಂ ನ ಲಾಂಛನವನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಂದ ಬಿಡುಗಡೆಗೊಳಿಸಲಾಯಿತು,
ಲಾಂಛನವನ್ನು ಶಿವಮೊಗ್ಗ ನಗರದ ಅಂಬೇಡ್ಕರ್ ಭವನದ ಮುಂದಡಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿದ ಪೌರಕಾರ್ಮಿಕರ ಪ್ರತಿನಿಧಿ ಶ್ರೀಧರ್ ರವರು ಮಾತನಾಡಿ ಎಲ್ಲಾ ಸಮುದಾಯದ ಶೋಷಿತರಿಗೆ ಫೋರಂ ಕಾನೂನಾತ್ಮಕವಾಗಿ ನೆರವಾಗಲಿ ಎಂದರು ಅಲ್ಲದೆ ಒಳ್ಳೆಯ ಉದ್ದೇಶವಿದೆ ಇದು ರಾಜ್ಯದಲ್ಲಿ ಸಂಘಟಿತಗೊಳ್ಳಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಫೋರಂ ನ ಉಪಾಧ್ಯಕ್ಷರಾದ ಶಶಿ.ಕೆ.ಎಸ್ ರವರು ಮಾತನಾಡಿ ಯಾವುದೇ ಜಾತಿ.ಮತ ಪಂಥಗಳ ಬೇದವಿಲ್ಲದೆ, ರಾಜಕೀಯದ ಲೇಪನವಿಲ್ಲದೆ, ಮನುಷ್ಯ ಸಮುದಾಯದ ಜೀವನದ ಮೌಲ್ಯಗಳಿಗಾಗಿ ಇಂದು ಸಮಗ್ರವಾಗಿ ತಿಳುವಳಿಕೆ ಮೂಡಿಸಬೇಕಾದ ಸಂದರ್ಭಗಳಿವೆ, ಹೀಗಾಗಿಯೇ ನಮ್ಮ ಸಂಸ್ಥೆಯ ಮೊದಲ ಕಾರ್ಯಕ್ರಮದಲ್ಲಿ ಲಾಂಛನ (ಲೋಗೋ) ಬಿಡುಗಡೆಯನ್ಮು ಶೋಷಿತ ವರ್ಗಗಳಿಂದಲೇ ಮಾಡಿಸಲು ಹಾಗೂ ಇದರ ಮೂಲಕ ಸಹಭಾಗಿತ್ವ, ಸಹಭಾಳ್ವೆ, ಸಾಮರಸ್ಯವನ್ನು ನಾಗರೀಕ ಸಮಾಜಕ್ಕೆ ಫೋರಂ ನ ನಿಲುವುಗಳನ್ನು ಸ್ಪಷ್ಟಪಡಿಸಿದ್ದೇವೆ ಎಂದರು.
ಈಗಾಗಲೇ ಫೋರಂ ಅಸ್ತಿತ್ವಕ್ಕೆ ಬಂದಿದ್ದು ರಾಜ್ಯ ಘಟಕದ ಗೌರವ ಅಧ್ಯಕ್ಷರಾಗಿ ಮುಕ್ತಿಯಾರ್ ಅಹ್ಮದ್, ಅಧ್ಯಕ್ಷರಾಗಿ ಜ್ಯೋತಿ ಅರಳಪ್ಪ, ಉಪಾಧ್ಯಕ್ಷರುಗಳಾದ ಐಡಿಯಲ್ ಗೋಪಿ, ಶಶಿ.ಕೆ.ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಗಾರಾ.ಶ್ರೀನಿವಾಸ್, ಸಹ ಕಾರ್ಯದರ್ಶಿಯಾಗಿ ಚಿರಂಜೀವಿ ಬಾಬು, ಖಜಾಂಚಿಯಾಗಿ ಸಿಬ್ಗತ್ ಉಲ್ಲಾ, ನಿರ್ದೇಶಕರುಗಳಾಗಿ ಸ್ವಪ್ನ ಸಂತೋಷ್ ಗೌಡ, ಪರಮೇಶ್ವರ ಎಲ್.ಕೆ, ರುದ್ರೇಶ್ (ರುದ್ರಿ) ಮಮತಾ ಶಿವಣ್ಣನವರುಗಳಿದ್ದಾರೆ ಎಂದು ತಿಳಿಸಿದರು.
ಪೌರಕಾರ್ಮಿಕರಿಗೆ ಸಿಹಿ ತನ್ನಿಸಿ ಸಹಭಾಳ್ವೆ, ಸಹಭಾಗಿತ್ವಕ್ಕೊಂದು ಮನುಷ್ಯ ಜೀವನಗಳು ಮುಂದಾಗಬೇಕು ಎಂದು ಹೇಳಿದ ಫೋರಂ ನ ರಾಜ್ಯಾಧ್ಯಕ್ಷರಾದ ಜ್ಯೋತಿ ಅರಳಪ್ಪನವರು, ಮಾನವ ಬದುಕುಗಳಿಗೆ ಸ್ವತಂತ್ರತೆ ಇದೆ, ತಿನ್ನುವ ಆಹಾರ, ಆಚರಣೆ, ವಿವಿಧತೆಗಳಿಗೆ ಸ್ವತಂತ್ರವಿದೆ, ಆಯಾ ಸರಕಾರಿ ಯೋಜನೆಗಳಿಗೆ ಬದುಕುಗಳು ಅರ್ಹತೆ ಹೊಂದಿದೆ, ಮೂಲಭೂತ ಸೌಕರ್ಯಗಳಿಗೆ ಒಳಪಟ್ಟಿರುವ ಮಾನವ ಸಮುದಾಯ ವಂಚಿತವಾದರೆ ಅದೊಂದು ಮಾನವ ಹಕ್ಕುಗಳ ಉಲ್ಲಂಘನೆ ಎಂದಾಗುತ್ತದೆ ಈ ಸಂದರ್ಭದಲ್ಲಿ ನಮ್ಮ ಫೋರಂ ಕಾನೂನಾತ್ಮಕವಾಗಿ ದನಿಯಾಗುತ್ತದೆ ಎಂದು ಅವರು ನುಡಿದರು.
Global Human Rights Forum ಲಾಂಛನ ಬಿಡುಗಡೆಯ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸಿಹಿ ಹಂಚಲಾಯಿತು, ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಶರಾವತಿಯ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್ ಸೇರಿದಂತೆ ಪಧಾದಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.