Thursday, September 17, 2026
Thursday, September 17, 2026

Akashvani Bhadravati ಸರ್ಕಾರದ ಪ್ರಸ್ತಾವನೆಯಂತೆ ಶಿವಮೊಗ್ಗದಲ್ಲಿ ,ಆಕಾಶವಾಣಿ ಎಫ್ ಎಂ ಪ್ರಾರಂಭಿಸಲು ಸಂಸದರಿಗೆ ಮನವಿ

Date:

Akashvani Bhadravati ಆಕಾಶವಾಣಿ ಭದ್ರಾವತಿ (ಎಫ್‌ಎಂ 103.5) ಕೇಂದ್ರದಿಂದ ಪ್ರಸಾರ ಆಗುತ್ತಿರುವ ಕಾರ್ಯಕ್ರಮಗಳ ಪ್ರಸಾರವನ್ನು ಶಿವಮೊಗ್ಗದಿಂದ ಹೆಚ್ಚಿನ ತರಂಗಾಂತರದ ಮೂಲಕ ಪ್ರಸಾರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವಂತೆ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಆಕಾಶವಾಣಿ ಭದ್ರಾವತಿ ಕೇಂದ್ರ 1 ಕಿವ್ಯಾ (ತರಂಗಾಂತರ 103.5) ಸಾಮರ್ಥ್ಯದ ಪ್ರಸರಣಾ ವ್ಯವಸ್ಥೆ ಹೊಂದಿದೆ. ಇದು 20 ಕಿಲೋ ಮೀಟರನಲ್ಲಿ ವಾಸಿಸುತ್ತಿರುವ ಜನ ಸಾಮಾನ್ಯರಿಗೆ ಅನುಕೂಲ ಆಗುತ್ತಿದೆ. ಲೋಕಸಭಾ ಸದಸ್ಯರ ಆಸಕ್ತಿಯಿಂದ ಈಗಾಗಲೇ ಶಿವಮೊಗ್ಗ ದೂರದರ್ಶನ ಕೇಂದ್ರದ 150 ಮೀ ಪ್ರಸರಣಾ ಗೋಪುರದ ಮೇಲೆ 10 ಕಿವ್ಯಾ ಸಾಮರ್ಥ್ಯದ ಎಫ್‌ಎಂ ಟ್ರಾನ್ಸ್ಮೀಟರ್ ಸ್ಥಾಪಿಸಲು ಕೇಂದ್ರಸರ್ಕಾರ (ಪ್ರಸಾರ ಭಾರತಿ) ಒಪ್ಪಿಗೆ ನೀಡಿ ಆದೇಶಿಸಿದೆ.

ಭದ್ರಾವತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮದ ಪ್ರಸಾರ ವ್ಯಾಪ್ತಿ ಸುತ್ತಲಿನ 8 ಜಿಲ್ಲೆಗೆ ತಲುಪಲು ಸಾದ್ಯವಾಗುತ್ತದೆ. ಈ ಕ್ರಮದಿಂದ ವಾಣಿಜ್ಯ ಚಟುವಟಿಕೆ, ಸಾಂಸ್ಕೃತಿಕ ಸೊಬಗು, ಆರೋಗ್ಯ ಮಾಹಿತಿ, ಶಿಕ್ಷಣ ಮತ್ತು ರಾಜ್ಯ ಹಾಗೂ ದೇಶದ ಸುದ್ದಿ, ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರನ್ನು ತಲುಪಲು ಸಾಧ್ಯ. ಎಫ್‌ಎಂ ಪ್ರಸಾರದಿಂದ ಸಾಮಾನ್ಯ ಮೊಬೈಲ್, ಕಂಪ್ಯೂಟರ್ ಹಾಗೂ ಕಾರ್‌ನಲ್ಲೂ ಕೇಳಲು ಸಾಧ್ಯವಾಗುತ್ತದೆ.

ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ, ಪ್ರಚಾರ ಕಾರ್ಯಕ್ರಮ, ಕುಶಲತೆಯ ತರಬೇತಿಗಳನ್ನು ರೇಡಿಯೋ ಮುಖಾಂತರ ನೀಡಬಹುದಾಗಿದೆ.

Akashvani Bhadravati ಶಿವಮೊಗ್ಗದಾದ್ಯಂತ ಪ್ರಚಾರ ಮಾಡಲು ಸಾಧ್ಯವಾಗಲಿದೆ. ಈಗಾಗಲೇ ಶಿವಮೊಗ್ಗದ ದೂರದರ್ಶನ 150 ಮೀಟರ್ ಗೋಪುರದ ಮೇಲೆ 10 ಕಿವ್ಯಾ ಟ್ರಾನ್ಸ್ಮೀಟರ್ ಸ್ಥಾಪಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವಂತೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್ ಮತ್ತು ಸಹ ಕಾರ್ಯದರ್ಶಿ ಜಿ.ವಿಜಯಕುಮಾರ ಮನವಿ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...