Kuvempu University ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ 2021-22ನೇ ಶೈಕ್ಷಣಿಕ ಸಾಲಿನ ಕುವೆಂಪು ವಿಶ್ವವಿದ್ಯಾಲಯವು ನಡೆಸಿದ ಎಂ.ಎಸ್ಸಿ ಮನ:ಶಾಸ್ತçದ ವಿಭಾಗದ ಸ್ನಾತಕೋತ್ತರ ಪದವಿಯ ಪರೀಕ್ಷೆಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಾದ ಕು. ಗಾಯತ್ರಿ ವಿ ಇವರು ಪ್ರಥಮ ರ‍್ಯಾಂಕ್ ಹಾಗೂ ದೇವಿಕಾ ಎಂ ಇವರು ಎರಡನೇ ರ‍್ಯಾಂಕ್ ಗಳಿಸಿರುತ್ತಾರೆ.
ಜುಲೈ 22 ರಂದು ನಡೆಯಲಿರುವ ವಿಶ್ವವಿದ್ಯಾನಿಲಯದ 33ನೇ ಘಟಿಕೋತ್ಸವದಲ್ಲಿ ಕು. ಗಾಯತ್ರಿ ವಿ. ರವರು ಪ್ರಥಮ ರ‍್ಯಾಂಕಿನ ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ.
ಕಾಲೇಜಿನ ಸ್ನಾತಕೋತ್ತರ ಮನ:ಶಾಸ್ತçದ ಮೊದಲ ಬ್ಯಾಚ್‌ನಲ್ಲಿಯೇ ಶೇ.100 ಫಲಿತಾಂಶ ಹಾಗೂ ಎರಡು ರ‍್ಯಾಂಕ್‌ಗಳು ಲಭ್ಯವಾಗಿರುವುದು ಹೆಮ್ಮೆಯಾಗಿದೆ ಎಂದು ಪ್ರಾಂಶುಪಾಲರು ತಿಳಿಸಿರುತ್ತಾರೆ.
ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ಮನ:ಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮಾನಸ ಆಸ್ಪತ್ರೆಯ ಮೂಲಕ ಕ್ಲಿನಿಕಲ್ ಹಾಗೂ ಕೌನ್ಸಲಿಂಗ್ ಕೌಶಲ್ಯಗಳು, ಮನ:ಶಾಸ್ತçದ ಸಂಶೋಧನಾ ಕೌಶಲ್ಯಗಳ ನೇರ ತರಬೇತಿ ಸಿಗುತ್ತದೆ.
ಆದುದರಿಂದ ಈ ಕಾಲೇಜಿನಲ್ಲಿ ಸ್ನಾತಕೋತ್ತರ Psychology ಪೂರೈಸಿದ ಎಲ್ಲಾ ವಿದ್ಯಾರ್ಥಿಗಳಿಗೂ ನೇರವಾಗಿ ಉದ್ಯೋಗ ದೊರೆತಿದೆ.
ಇದೊಂದು ಅತ್ಯುತ್ತಮ ಶೈಕ್ಷಣಿಕ ಸಾಧನೆ ಎಂದು ಮಾನಸ ಟ್ರಸ್ಟ್ನ ನಿರ್ದೇಶಕರಾದ ಡಾ. ರಜನಿ ಎ. ಪೈ ರವರು ಶ್ಲಾಘಿಸಿದರು.
Kuvempu University ರ‍್ಯಾಂಕ್ ಪಡೆದ ಎಲ್ಲ ವಿದ್ಯಾರ್ಥಿನಿಯರನ್ನು ಮಾನಸ ಟ್ರಸ್ಟ್ನ ಡಾ. ರಜನಿ ಎ. ಪೈ, ಡಾ. ಪ್ರೀತಿ ವಿ. ಶಾನ್‌ಭಾಗ್, ಡಾ. ವಾಮನ್ ಶಾನ್‌ಭಾಗ್, ಸಿಸ್ಟರ್ ಮಾರೀ ಇವ್ಲಿನ್, ಡಾ. ರಾಜೇಂದ್ರ ಚೆನ್ನಿ, ಡಾ. ಅರ್ಚನಾ ಭಟ್ ಕೆ., ಹಾಗೂ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿ ಅಭಿನಂದಿಸಿರುತ್ತಾರೆ.