Protest in the Assembly ವಿಧಾನ ಸಭೆಯ ಕಲಾಪ ಮೊದಲಿಗೆ ಕೇವಲ ಗ್ಯಾರಂಟಿಗಳ ಬಗ್ಗೆ ಕೋಲಾಹಲ ಹುಟ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ವಿಪಕ್ಷವಾದ ಬಿಜೆಪಿ ಬೇರೆಯೇ ವರಸೆಯಿಂದ ಸದನದಲ್ಲಿ ಸದ್ದುಗದ್ದಲ ಮಾಡಿದೆ.
ಮಸೂದೆಗಳ ಅಂಗೀಕಾರಕ್ಕೆ ಒಪ್ಪದ ವಿಪಕ್ಷಗಳು
ಧರಣಿ,ಘೋಷಣೆ ಮತ್ತು ಕಾಗದ ಪತ್ರಗಳನ್ನ ಚೂರು ಚೂರು ಮಾಡಿ ಉಪಸ್ಪೀಕರ್ ಮೇಲೆ ಎಸೆದದ್ದು ಗಂಭೀರ ಸಂಗತಿಯಾಯಿತು.
ಇಲ್ಲಿ ಗಮನಾರ್ಹ ವಿಷಯವೆಂದರೆ
ಈ ಕೋಲಾಹಲ ಸನ್ನಿವೇಶವನ್ನ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮೊಬೈಲ್ ಮೂಲಕ ಚಿತ್ರೀಕರಿಸಿದ್ದು ಹಾಗೂ ಉಪ ಸ್ಪೀಕರ್ ದಲಿತರೆಂಬ ಕಾರಣಕ್ಕೆ ವಿಪಕ್ಷ ಬಿಜೆಪಿ ಅವರುಗೆ ಅಗೌತವ ತೋರಿದೆ ಎಂಬ ಕಾಂಗ್ರೆಸ್ ಪಕ್ಷದ ಸದಸ್ಯರ ಆರೋಪ.
ಸದನದೊಳಕ್ಕೆ ಮೊಬೈಲ್ ನಿಷೇಧವಿದ್ದೂ ಉಪಮುಖ್ಯ ಮಂತ್ರಿಗಳು ಅದನ್ನ ತಂದಿರುವುದೂ ಒಂದು ಆಕ್ಷೇಪಕ್ಕೆಡೆ ಮಾಡುತ್ತದೆ.
ವಿಪಕ್ಷಗಳ ಮತ್ತೊಂದು ಗಂಭೀರ ಆರೋಪವೆಂದರೆ
ಹಿರಿಯ ಐಎಎಸ್ ಅಧಿಕಾರಿಗಳನ್ನ ಬೆಂಗಳೂರಲ್ಲಿ ನಡೆದ ರಾಜಕೀಯ ಪಕ್ಷಗಳ ಬೃಹತ್ ಸಭೆಗೆ ಬಳಸಿಕೊಂಡದ್ದು ಸರಿಯಲ್ಲ ಎಂಬುದಾಗಿದೆ.
ಆದರೆ ಆಡಳಿತಾರೂಢ ಪಕ್ಷವು ಬೇರೆ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯಕ್ಕೆ ಬಂದಾಗ ಶಿಷ್ಟಾಚಾರ ಪಾಲಿಸುವ ಸಲುವಾಗಿ ಅಧಿಕಾರಗಳನ್ನ ಬಳಸಿಕೊಳ್ಳಲಾಗಿತ್ತು. ರಾಜಕೀಯ ಪಕ್ಷಗಳ ನಾಯಕರಿಗೆ ಬೇರೆ ವ್ಯವಸ್ಥೆಮಾಡಿತ್ತು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಆರೋಪವನ್ನ ತಳ್ಳಿಹಾಕಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಅವರನ್ನ ಭೇಟಿ ಮಾಡಿದ ಸ್ಪೀಕರ್ ಖಾದರ್ ಅವರ ಬಗ್ಗೆಯೂ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು.
ಅದಕ್ಕೆ ಸ್ಪೀಕರ್ ಅವರು ” ನಾನೂ ಮನುಷ್ಯ .ಊಟಕ್ಕೆ ಕರೆದಿದ್ದರು.ಸೌಜನ್ಯಕ್ಕೆ ಹೋಗಿದ್ದೆ” ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಐಎಎಸ್ ಅಧಿಕಾರಿಗಳನ್ನ ನಿಯಮಿಸಿದ್ದರ ಬಗ್ಗೆ ಸರ್ಕಾರ ಕ್ಷಮೆ ಕೋರಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಜೆಡಿಎಸ್ ನ ಕುಮಾರಸ್ವಾಮಿ ಅವರು ” ರಾಜಕೀಯ ಸಭೆಗೆ ಅಧಿಕಾರಿಗಳ ಬಳಕೆ ಅಪರಾಧ ಮತ್ತು ನಾಚಿಕೆಗೇಡು ಎಂದರು. ಒತ್ತಾಯಿಸಿದರು.
ಪ್ರತಿಪಕ್ಷಗಳ ಧರಣಿ ಮತ್ತು ಕೋಲಾಹಲದ ನಡುವೆಯೇ ಐದು ವಿಧೇಯಕಗಳು ಅಂಗೀಕಾರವಾದವು.ಸ್ವಾರಸ್ಯವೆಂದರೆ ಭೋಜನವಿರಾಮವಿಲ್ಲ. ಬಜೆಟ್ ಬಗ್ಗೆ ಚರ್ಚೆ ಮುಂದುವರೆಯುತ್ತದೆ. ಬೇಕಾದವರು ಊಟಕ್ಕೆ ತೆರಳಬಹುದು ಎಂದು ಸ್ಪೀಕರ್ ಖಾದರ್ ಅವರು ಉಒ ಸ್ಪೀಕರ್ ರುದ್ರಪ್ಒ ಲಮಾಣಿ ಅವರನ್ನ ಆಸೀನರಾಗಲು ಹೇಳಿ ಊಟಕ್ಕೆ ಹೋದರು.
ಮತ್ತಷ್ಟೂ ಕೆರಳಿದ ಬಿಜೆಪಿ ಸದಸ್ಯರು
ಕಾರ್ಯದರ್ಶಿಯವರ ಮೇಜಿನ ಬಳಿ ತೆರಳಿ ಅಲ್ಲಿದ್ದ ಕಾಗದ ಪತ್ರಗಳನ್ನ ಹರಿದು ಚೂರುಚೂರುಮಾಡಿ ಉಪಸ್ಪೀಕರ್ ಅತ್ತ ಎಸೆದರು. ಕೂಡಲೇ ಉಪ ಸ್ಪೀಕರ್ ಅವರು
ಪ್ರತಿಭಟಿಸಿದ ಬಿಜೆಪಿ
Protest in the Assembly ಸದಸ್ಯರನ್ನ ಹೊರಹಾಕಲು ಮಾರ್ಷಲ್ ಗಳಿಗೆ ಸೂಚಿಸಿದರು.ನಂತರ ಸ್ಪೀಕರ್ ಖಾದರ್ ಆಗಮಿಸಿದರು.
ಕೋಲಾಹಲ ಸನ್ನವೇಶವುಂಟುಮಾಡಿದ ಹತ್ತು ಮಂದಿ ಶಾಸಕರನ್ನ ಸ್ಪೀಕರ್ ಖಾದರ್ ಅಮಾನತ್ತಿನಲ್ಲಿಡಲು ಆದೇಶ ಓದಿದರು.
ಅಧಿವೇಶನ ಮುಗಿಯುವವರೆಗೂ ಹತ್ತು ಮಂದಿ ಶಾಸಕರಿಗೆ ನೋ ಎಂಟ್ರಿ ಎಂದು ಆದೇಶವಿದೆ.