Klive Special Article ಅಧಿಕಮಾಸದ ಮಹತ್ವ
(33ರ ಗಂಟು ಅಧಿಕಮಾಸದ ನಂಟು)
ವರ್ಷದ 12 ತಿಂಗಳುಗಳಲ್ಲಿ ಸೂರ್ಯನ ಸಂಕ್ರಮಣವಿರುತ್ತೆ. ಯಾವ ಮಾಸದಲ್ಲಿ ಸೂರ್ಯ ಸಂಕ್ರಮಣ ಇರುವುದಿಲ್ಲವೋ ಆಮಾಸಕ್ಕೆ”ಅಧಿಕಮಾಸ” ಎಂದು ಕರೆಯುತ್ತಾರೆ.
ಈ ಮಾಸಕ್ಕೆ ” ಮಲಮಾಸ” ಎಂತಲೂ ಹೇಳುತ್ತಾರೆ.
ವರ್ಷದಲ್ಲಿ ಬರುವ ಒಂದೊಂದು ಮಾಸಕ್ಕೂ
ಒಬ್ಬೊಬ್ಬ ದೇವತೆ ನಿಯಾಮಕರಾಗಿರುತ್ತಾರೆ.
ಆದರೆ, ಈ ಮಲ ಮಾಸ,ಎಂದರೆ ಬೇಡವಾದ ವಸ್ತುವನ್ನು ಹೇಗೆ ದೂರಯಿಡುತ್ತೇವೆಯೋ ಹಾಗೆ ಈ ಮಾಸಕ್ಕೆಪ್ರಾಶಸ್ತ್ಯ ಕಡಿಮೆಯಾದಾಗ ಸಾಕ್ಷಾತ್ ಪುರುಷೋತ್ತಮ ರೂಪಿಯಾದ ಶ್ರೀಮನ್ನಾರಾಯಣನೇ ಈ ಮಾಸಕ್ಕೆ ಅಧಿಪತಿಯಾಗಿದ್ದಾನೆ. ಹಾಗಾಗಿ, ಈ ಮಾಸವನ್ನು “ಪುರುಷೋತ್ತಮ ಮಾಸ”
ಎಂತಲೂ ಕರೆಯುತ್ತಾರೆ.
ಈ ಮಾಸದಲ್ಲಿ ಏನು ಪುಣ್ಯಾಚರಣೆ ಮಾಡಿದರೂ ಅದನ್ನು ಪುರುಷೋತ್ತಮ ರೂಪಿಯಾದ ಭಗವಂತನು ಸ್ವೀಕರಿಸಿ ಎಲ್ಲರೊಳಗಿನ ಮಲ(ದೋಷ)ವನ್ನು ನಿವಾರಿಸುತ್ತಾನೆ. ಈ ಮಾಸದಲ್ಲಿ ಮಾಡುವ ವ್ರತ,
ಪೂಜೆ,ದಾನಗಳಿಂದ”ಅಧಿಕಸ್ಯ ಅಧಿಕ ಫಲಂ” ಎಂಬಂತೆ ಅಧಿಕವಾದ ಪುಣ್ಯ ಫಲ ಲಭಿಸುತ್ತದೆ.
ಪುರಾಣಗಳಲ್ಲಿ ಹೇಳಿರುವ ಪ್ರಕಾರ ಮಹಾಭಾರತದ ದ್ರೌಪದಿಗೆ ಅವಳು ಹಿಂದಿನ ಜನ್ಮದಲ್ಲಿ ಪುರುಷೋತ್ತಮ ಮಾಸದ ಹುಣ್ಣಿಮೆಯಂದು ಅಪೂಪದಾನವನ್ನು ಮಾಡಿದ ಫಲದಿಂದ ಅವಳಿಗೆ ತುಂಬಿದ ಕೌರವರ ಸಭೆಯಲ್ಲಿ ಮಾನಭಂಗದ ಪ್ರಯತ್ನ ನಡೆದಾಗ ಶ್ರೀಕೃಷ್ಣ ಪರಮಾತ್ಮನು ಅವಳನ್ನು ಸಂಕಷ್ಟ ಪರಿಸ್ಥತಿಯಿಂದ ರಕ್ಷಿಸಿದನು ಎಂದು ತಿಳಿಯುತ್ತದೆ.
ಸೌರಮಾನ ಮತ್ತು ಚಾಂದ್ರಮಾನ ವಾರ್ಷಿಕ ಚಲನೆಯಿಂದ ಆಗುವ ದಿನಗಳ ವ್ಯತ್ಯಾಸವನ್ನು ಸರಿದೂಗಿಸುವುದಕ್ಕಾಗಿ ಮೂರನೇ ವರ್ಷದಲ್ಲಿ ಅಧಿಕ ಮಾಸ ಬರುತ್ತದೆ.ಅಂದರೆ ಪ್ರತೀ 33 ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ.
ಹೀಗೆ 33 ತಿಂಗಳಿಗೊಮ್ಮೆ ಒಂದು ತಿಂಗಳನ್ನು
ಸೇರಿಸುವ ಪರಿಕಲ್ಪನೆಯೇ ಅಧಿಕಮಾಸ.33ಸಂಖ್ಯೆಗೂ ಅಧಿಕ ಮಾಸಕ್ಕೂ ಬಹಳನಂಟು. ಅಧಿಕ ಮಾಸದಲ್ಲಿ ದಾನಗಳನ್ನು ಮಾಡುವಾಗ 33 ಸಂಖ್ಯೆಗಳಲ್ಲಿ ಮಾಡುವುದು ರೂಢಿಯಲ್ಲಿದೆ.
ಅಧಿಕ ಮಾಸದಲ್ಲಿನ 33 ದೇವತೆಗಳ ವಿವರ
ಹೀಗಿದೆ.ಅಷ್ಟ(8)ವಸುಗಳು,ಏಕಾದಶ(11)
ರುದ್ರರು,ದ್ವಾದಶ(12)ಆದಿತ್ಯರು,(1)ಪ್ರಜಾ
ಪತಿ,(1)ವಷಟ್ಕಾರ. ಒಟ್ಟು 33 ದೇವತೆಗಳು.
ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನಕ್ಕೆ ಬಹಳ ವಿಶೇಷವಾದ ಫಲವಿದೆ.
ಅಪೂಪಗಳಲ್ಲಿ ಹೆಚ್ಚು ಛಿದ್ರ (ರಂಧ್ರ)ಗಳಿದ್ದಷ್ಟೂ ದೀರ್ಘಕಾಲ ಜೀವನದಲ್ಲಿ ಸುಖ,ಸಂತೋಷ
ನೆಮ್ಮದಿಗಳನ್ನು ಅನುಭವಿಸುತ್ತಾರೆ ಎಂಬ ಪ್ರತೀತಿ ಇದೆ. ಅಪೂಪವನ್ನು ದಾನ ಕೊಡುವಾಗ 33 ಭಗವದ್ರೂಪಗಳನ್ನು ಚಿಂತಿಸಿ ದಾನ ಮಾಡಬೇಕು.
ಸ್ತ್ರೀಯರು ಮೌನವ್ರತ, ಒಂದೇ ಹೊತ್ತು ಭೋಜನ, ಮಾಂಗಲ್ಯದ ಸೌಭಾಗ್ಯ ಅಭಿವೃದ್ಧಿಗಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರೆ ಒಳ್ಳೆಯ ಶುಭಫಲ ದೊರೆಯುತ್ತದೆ.
ಗೋಪೂಜೆ ಮಾಡುವುದರಿಂದ,ದೀಪದಾನ
ಮಾಡುವುದರಿಂದ ಪುಣ್ಯ ಲಭಿಸುತ್ತದೆ.ಈ ಮಾಸದಲ್ಲಿ ಶುಭಕಾರ್ಯಗಳಾದ ಗೃಹಪ್ರವೇಶ,ಮದುವೆ,
ಉಪನಯನಮುಂತಾದುವುಗಳನ್ನು ಮಾಡುವು
ದಿಲ್ಲ. ಅಧಿಕಮಾಸದಲ್ಲಿ ದಾನ,ವ್ರತ,ಪೂಜೆ,ಹವನ ಹೋಮ ಜಪ ತಪ ಇವುಗಳನ್ನುಮಾಡುವುದರಿಂದ ವಿಶೇಷ ಪುಣ್ಯಫಲ ಲಭಿಸುವುದೆಂದು ಹೇಳುತ್ತಾರೆ.
ಅಧಿಕ ಮಾಸದಲ್ಲಿ ಮಾಡುವ ವ್ರತ,ಪೂಜೆಯ
ಆಚರಣೆಗಳಿಂದ ಯಮರಾಜನ ಭಯ ಮತ್ತು ಶನಿಮಹಾರಾಜನ ಉಪಟಳದಿಂದ ರಕ್ಷಿಸಿಕೊಳ್ಳ
ಬಹುದು.
ಅಧಿಕಮಾಸದಲ್ಲಿ ಭಾಗವತವನ್ನು ಶ್ರವಣ
ಮಾಡುವುದರಿಂದ ಮತ್ತು ಪಾರಾಯಣ ಮಾಡಿಸುವುದರಿಂದ ಬಹಳ ಉತ್ತಮ ಫಲ ದೊರೆಯುತ್ತದೆಂದು ಪ್ರತೀತಿ ಇದೆ. ಅಧಿಕಮಾಸದಲ್ಲಿ ಮಾಡುವ ಧಾರ್ಮಿಕ ಕಾರ್ಯಗಳಿಗೆ ಯಾವುದೇ ಅನ್ಯಮಾಸಗಳಲ್ಲಿ ಮಾಡುವ ಪೂಜಾ ಪ್ರಾರ್ಥನೆಗಳಿಗಿಂತ ಅಧಿಕಪಟ್ಟು ಫಲವು ದೊರೆಯುತ್ತದೆ.
Klive Special Article ಈ ವರ್ಷದಲ್ಲಿ ಅಧಿಕಮಾಸ ತಾ 18/07/2023 ರ ಮಂಗಳವಾರದಿಂದ ಪ್ರಾರಂಭವಾಗಿ 16/08/2023
ರ ಅಮಾವಾಸ್ಯೆಯ ದಿನದಂದು ಮುಕ್ತಾಯಗೊಳ್ಳುತ್ತದೆ.ಶ್ರೀಮನ್ನಾರಾಯಣನೇ ಅಧಿಪತಿಯಾಗಿರುವ ಈ ಅಧಿಕಮಾಸದಲ್ಲಿ ಯಥಾನುಶಕ್ತಿ ಜಪತಪದಾನ
ಧರ್ಮ,ಪೂಜಾದಿಗಳನ್ನು ಮಾಡಿ ನಾವೂ ಶ್ರೀಮನ್ನಾರಾಯಣನಅನುಗ್ರಹಕ್ಕೆಪಾತ್ರರಾಗೋಣ.
ಲೇಖಕರು:
ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ.