Saturday, December 6, 2025
Saturday, December 6, 2025

Meteorological Department ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1160 ಹೆಕ್ಟೇರಿನಲ್ಲಿ ಮುಸುಕಿನ ಜೋಳ ಬಿತ್ತನೆ

Date:

Meteorological Department ಶಿವಮೊಗ್ಗ ತಾಲ್ಲೂಕಿನ ಮುಂಗಾರು ಹಂಗಾಮಿನಲ್ಲಿ 11060 ಹೆ ಮುಸುಕಿನ ಜೋಳದ ಬೆಳೆ ಬಿತ್ತನೆಯಾಗಿರುತ್ತದೆ.

ಈ ಬಾರಿ ಮುಂಗಾರು ಹಂಗಾಮು ತಡವಾದ್ದರಿಂದ ಬಿತ್ತನೆಯು ಸಹ ತಡವಾಗಿದ್ದು ಕುಂಸಿ, ಚೋರಡಿ, ಹುಣಸೋಡು, ಕುಂಚೇನಹಳ್ಳಿ, ಕಲ್ಲಾಪುರ, ಗ್ರಾಮಗಳಿಗೆ ಭೇಟಿ ನೀಡಲಾಗಿ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟಗಳಾದ ಕಾಂಡಕೊರಕ ಹಾಗೂ ಎಲೆ ತಿನ್ನುವ ಹುಳುಗಳ ಹೊರತಾಗಿ ಎಲೆ ತಿನ್ನುವ ವಿದೇಶಿ ಆಕ್ರಮಣಕಾರಿ ಸೈನಿಕ ಹುಳುವಿನ ಪ್ರಬೇಧ ಸ್ಪೊಡೋಪ್ಟೆರಾ ಫ್ರೂಜಿಪರ್ದಾ ಕಂಡುಬಂದಿರುತ್ತದೆ.

ಈ ಕೀಟವು ಸುಳಿಯಲ್ಲಿದ್ದುಕೊಂಡು ಎಲೆಗಳನ್ನು ತಿಂದು ಅಧಿಕ ಪ್ರಮಾಣದಲ್ಲಿ ಲದ್ದಿಯನ್ನು ಸುಳಿಗಳಲ್ಲಿ ಹಾಕುತ್ತದೆ. ಇದರಿಂದ ಮೆಕ್ಕೆಜೋಳದ ಇಳುವರಿ ಕುಂಠಿತವಾಗುತ್ತದೆ. ಆದ್ದರಿಂದ ಕೆಳಕಾಣಿಸಿದಂತೆ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

Meteorological Department ಹತೋಟಿ ಕ್ರಮಗಳು 15 ರಿಂದ 20 ದಿನದ ಬೆಳೆಯಲ್ಲಿ ಪ್ರಾರಂಭ ಹಂತದಲ್ಲಿ ಬೇವಿನ ಎಣ್ಣೆ 2 ಮಿ.ಲಿ. ಪ್ರತಿ ಲೀ. ನೀರಿನೊಂದಿಗೆ ಸಿಂಪರಣೆ ಮಾಡುವುದು. ನಂತರದಲ್ಲಿ ಎಮಮೆಕ್ಟಿನ್ ಬೆಂಜೋಯೇಟ್ 5% ಎಸ್‍ಸಿ ಅಥವಾ 0.4 ಮಿ.ಲಿ. ಕ್ಲೋರಂತ್ರ ನಿಲಿಪ್ರೊಲ್ 18.5% ಅಥವಾ 1 ಮಿ.ಲಿ. ಲ್ಯಾಂಬ್ಡಸೈಹಲೋತ್ರಿನ್ 9.5% ಪ್ರತಿ ಲೀ. ನೀರಿಗೆ ಬೆರೆಸಿ 200-250 ಸಿಂಪರಣಾ ದ್ರಾವಣ ಬಳಸಬೇಕು. ಮತ್ತು ಎಕರೆಗೆ 2 ರಂತೆ ಮೋಹಕ ಬಲೆ/ಬೆಳಕಿನ ಬಲೆಗಳನ್ನು ಬಳಸುವುದು.

ವಿಷ ಪಾಷಣ ತಯಾರಿಕೆ 10 ಕೆಜಿ ಭತ್ತದ ತೌಡು, 2 ಕೆಜಿ ಬೆಲ್ಲ, 100 ಗ್ರಾಂ ಥಯೋಡಿಕಾರ್ಬ್ 75% ಡಬ್ಲ್ಯುಪಿ/250 ಎಂಎಲ್ ಮನೋಕ್ರೋಟೋಫಾಸ್ ಕೀಟನಾಶಕವನ್ನು 5 ಲೀ. ನೀರಿನಲ್ಲಿ ಬೆರೆಸಿ 24 ಗಂಟೆಗಳ ಕಾಲ ಗಾಳಿಯಾಡದಂತೆ ಚೀಲದಲ್ಲಿ ಕಟ್ಟಿ ಇಡುವುದು. 24 ಗಂಟೆಗಳ ನಂತರ ಸಂಜೆ ಸಮಯದಲ್ಲಿ ಈ ವಿಷ ಪಾಷಾಣವನ್ನು ಹೊಲದಲ್ಲಿ ಉಂಡೆ ಮಾಡಿ ಅಲ್ಲಲ್ಲಿ ಇಡುವುದು ಎಂದು ಸಹಾಯಕ ಕೃಷಿ ನಿರ್ದೇಶಕರು, ಶ್ರೀ ರಮೇಶ್ ಎಸ್.ಟಿ ಇವರು ತಿಳಿಸಿದರು.

ಮೆಕ್ಕೆಜೋಳದ ಬಿತ್ತನೆ ಕ್ಷೇತ್ರದಲ್ಲಿ ಪರಿಶೀಲನೆ ವೇಳೆ ಸಹಾಯಕ ಕೃಷಿ ನಿರ್ದೇಶಕ ರಮೇಶ್ ಎಸ್.ಟಿ, ಕೃಷಿ ಅಧಿಕಾರಿಗಳಾದ ಚೇತನ್ ಸಿ.ಜಿ, ಸುನೀಲ್ ನಾಯ್ಕ್ ಮತ್ತು ರೈತರುಗಳಾದ ಜಗದೀಶ್, ಮಲ್ಲೇಶಪ್ಪ, ಹರಿಶ್ಚಂದ್ರನಾಯ್ಕ, ಉಮೇಶಪ್ಪ ಮತ್ತು ಇತರರು ಹಾಜರಿದ್ದರು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...