Saturday, November 23, 2024
Saturday, November 23, 2024

Press Conference On 3rd Culture Working Group Meeting in Hampi ನಾಲ್ಕು ಆದ್ಯತೆಗಳ ಬಗ್ಗೆ ಸಹಮತ ಮೂಡಿಸುವಲ್ಲಿ ಪ್ರಗತಿ ಹೊಂದಿದ್ದೇವೆ – ಸಚಿವ ಪ್ರಹ್ಲಾದ ಜೋಷಿ

Date:

Press Conference On 3rd Culture Working Group Meeting in Hampi ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಮೂರನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆ ಕರ್ನಾಟಕದ ಹಂಪಿಯಲ್ಲಿ ಇಂದು ಸಮಾಪನಗೊಂಡಿತು.

ಭಾರತದ ಜಿ-20 ಅಧ್ಯಕ್ಷತೆಯಲ್ಲಿ 3ನೇ ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಮಾಲೋಚನೆಗಳು 2023ರ ಜುಲೈ 11ರಂದು ಮುಕ್ತಾಯಗೊಂಡವು. 3ನೇ ಸಿಡಬ್ಲ್ಯೂಜಿ ಗೋಷ್ಠಿಯು ವಾರಣಾಸಿಯಲ್ಲಿ 2023ರ ಆಗಸ್ಟ್ 26ರಂದು ನಡೆಯಲಿರುವ ಮುಂಬರುವ ಜಿ-20 ಸಂಸ್ಕೃತಿ ಸಭೆಯ ತಾಜಾ ಮಾಹಿತಿ ಹಾಗೂ ಬೆಳವಣಿಗೆಗಳೊಂದಿಗೆ 3ನೇ ಸಿಡಬ್ಲೂಜಿಯ ಅಂತಿಮ ಗೋಷ್ಠಿ ಮುಕ್ತಾಯವಾಯಿತು.

ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ, ಸಿಡಬ್ಲ್ಯೂಜಿಯು ನೀತಿ ರಚನೆಯಲ್ಲಿ ಸಂಸ್ಕೃತಿಯನ್ನು ಕೇಂದ್ರ ಬಿಂದುವನ್ನಾಗಿರಿಸಲು ಶ್ರಮಿಸುತ್ತದೆ. ಕ್ರಮವಾಗಿ ಖಜುರಾಹೊ ಮತ್ತು ಭುವನೇಶ್ವರದಲ್ಲಿ ಆಯೋಜಿಸಲಾದ ಹಿಂದಿನ ಎರಡು ಸಿಡಬ್ಲ್ಯೂಜಿ ಸಭೆಗಳಲ್ಲಿ ಚರ್ಚಿಸಲಾದ ಶಿಫಾರಸುಗಳ ಮೇಲೆ ಒಮ್ಮತವನ್ನು ಸಾಧಿಸುವತ್ತ 3ನೇ ಸಿಡಬ್ಲ್ಯೂಜಿ ಗಮನಹರಿಸಿತು.

ಕರ್ನಾಟಕದ ಹಂಪಿಯ ಹಜಾರ ರಾಮ ದೇವಸ್ಥಾನದಲ್ಲಿ ಜಿ-20 ಪ್ರತಿನಿಧಿಗಳು ಯೋಗ ಅಧಿವೇಶನದಲ್ಲಿ ಪಾಲ್ಗೊಂಡರು.

ಸಾಂಸ್ಕoತಿಕ ಮೇಳದ ಅನುಭವದ ಭಾಗವಾಗಿ ನಿನ್ನೆ, ಹಂಪಿಯಲ್ಲಿನ ಐತಿಹಾಸಿಕ ರಾಣಿಯ ಸ್ನಾನದ ಕೋಣೆಯ ಜಾಗದಲ್ಲಿ ಸಸಿಗಳನ್ನು ನೆಡುವ ಚಟುವಟಿಕೆ ಕೈಗೊಳ್ಳಲಾಗಿತ್ತು.

ಪ್ರತಿನಿಧಿಗಳಿಗೆ ರಾಜ ಸಂಭಾಗಣದ ವೀಕ್ಷಣೆಗೆ ಮಾರ್ಗದರ್ಶನ ನೀಡಲಾಯಿತು.

ಅವರು ಆ ಪ್ರದೇಶದಲ್ಲಿನ ಶ್ರೀಮಂತ ಪರಂಪರೆ ಮತ್ತು ವಾಸ್ತುಶಿಲ್ಪ ವೈಭವವನ್ನು ಶ್ಲಾಘಿಸಿದರು. ಪ್ರಯಾಣದ ವೇಳೆ ಪ್ರತಿನಿಧಿಗಳು ವಿರೂಪಾಕ್ಷ ದೇವಾಲಯದ ಮುಂದಿರುವ ಎದುರು ಬಸವಣ್ಣ ಸಂಕೀರ್ಣದತ್ತ ಸಾಗಿದರು. ಈ ಸುಂದರವಾದ ಸ್ಥಳದಲ್ಲಿ, ಕೌಸಲ್ಯ ರೆಡ್ಡಿ ಅವರಿಂದ ಆಯೋಜಿತವಾಗಿದ್ದ ರಾಧಾ ಮತ್ತು ರಾಜಾ ರೆಡ್ಡಿ ಗುರುಗಳ ತಂಡಗಳಿಂದ ಆಕರ್ಷಕ ಸಾಂಸ್ಕoತಿಕ ಪ್ರದರ್ಶನ ನಡೆಯಿತು.

ಅವರು ದಕ್ಷಿಣ ಭಾರತದಿಂದ ನಾಲ್ಕು ವಿಭಿನ್ನ ನೃತ್ಯ ಶೈಲಿಗಳನ್ನು ಪ್ರದರ್ಶಿಸಿದರು. ಅವುಗಳೆಂದರೆ ತಮಿಳುನಾಡಿನ ಭರತನಾಟ್ಯಂ, ಕೇರಳದಿಂದ ಮೋಹಿನಿಯಾಟ್ಟಂ, ಆಂಧ್ರಪ್ರದೇಶದ ಕೂಚಿಪುಡಿ ಮತ್ತು ಒಡಿಶಾದಿಂದ ಒಡಿಸ್ಸಿ, ಸ್ಮಾರಕಗಳ ಹಿನ್ನೋಟದಲ್ಲಿ ಈ ಅದ್ಭುತ ಪ್ರದರ್ಶನವು ಪ್ರತಿನಿಧಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ಇದಕ್ಕೂ ಮುನ್ನ ಜುಲೈ 10ರಂದು ಕರ್ನಾಟಕದ ಹಂಪಿಯಲ್ಲಿ ಜಿ-20 ಸಂಸ್ಕೃತಿ ಕಾರ್ಯಕಾರಿ ಗುಂಪು (ಸಿಡಬ್ಲ್ಯೂಜಿ)ನ ಉದ್ಘಾಟನಾ ಗೋಷ್ಠಿ ನಡೆಯಿತು.

ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀತಿ ರಚನೆಯಲ್ಲಿ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಳ್ಳುವುದು ಮಹತ್ವದ ಹೆಜ್ಜೆಯಾಗಿಸುವ ನಿಟ್ಟಿನಲ್ಲಿ ನಾವು ನಾಲ್ಕು ಆದ್ಯತೆಗಳನ್ನು ಗುರುತಿಸುವ ಮತ್ತು ಚರ್ಚಿಸುವ ಮೂಲಕ ಕ್ರಮ-ಆಧಾರಿತ ಶಿಫಾರಸುಗಳ ಕುರಿತು ಸಹಮತವನ್ನು ಮೂಡಿಸುವಲ್ಲಿ ಪ್ರಗತಿ ಹೊಂದಿದ್ದೇವೆ’’.

ನಾಲ್ಕು ಆದ್ಯತೆಯ ವಲಯಗಳೆಂದರೆ: ಸಾಂಸ್ಕ0ತಿಕ ಆಸ್ತಿಯ ರಕ್ಷಣೆ ಮತ್ತು ಮರುಸ್ಥಾಪನೆ; ಸುಸ್ಥಿರ ಭವಿಷ್ಯಕ್ಕಾಗಿ ಜೀವಂತ ಪರಂಪರೆ ಬಳಸಿಕೊಳ್ಳುವುದು; ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳು ಮತ್ತು ಸೃಜನಾತ್ಮಕ ಆರ್ಥಿಕತೆಯ ಪ್ರಚಾರ; ಮತ್ತು ಸಂಸ್ಕoತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ನಿಯಂತ್ರಿಸುವುದು’’ ಎಂದು ಅವರು ಹೇಳಿದರು.

ಜುಲೈ 10ರಂದು ಸಂಜೆ ಪ್ರತಿನಿಧಿಗಳನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಹಂಪಿಯ ಸಮೂಹ ಸ್ಮಾರಕಗಳ ಗುಂಪಿನಲ್ಲಿ ವಿಜಯ ವಿಠಲ ಮಂದಿರ, ರಾಜ ಸಭಾಂಗಣ ಮತ್ತು ಎದುರು ಬಸವಣ್ಣ ಸಂಕೀರ್ಣಗಳಿಗೆ ಸುತ್ತಾಟಕ್ಕೆ ಕರೆದೊಯ್ಯಲಾಗಿತ್ತು.

ತುಂಗಭದ್ರಾ ನದಿಯಲ್ಲಿ ದೋಣಿ ವಿಹಾರಕ್ಕೂ ಕರೆದೊಯ್ಯಲಾಗಿತ್ತು.
ಘಟಂ ಅನ್ನು ನಮ್ಮ ಶಾಸ್ತ್ರೀಯ ಸಂಗೀತ ಸಂಪ್ರದಾಯಗಳ ಪ್ರಮುಖ ಭಾಗವನ್ನಾಗಿಸಿ ವಿಶ್ವ ಸಂಗೀತಗಾರರ ಜೊತೆಗಿನ ಫ್ಯೂಷನ್ ಸಂಗೀತ ಕಾರ್ಯಕ್ರಮಗಳ ಮೂಲಕ ವಿಶ್ವ ವೇದಿಕೆಗೆ ಕೊಂಡೊಯ್ದ ಖ್ಯಾತ ಸಂಗೀತಗಾರ ವಿಕ್ಕು ವಿನಾಯಕರಾಮ್ ಅವರ ತಾಳವಾದ್ಯವನ್ನು ಪ್ರತಿನಿಧಿಗಳು ಆನಂದಿಸಿದರು.

Press Conference On 3rd Culture Working Group Meeting in Hampi ವಿಜಯ ವಿಠಲ ದೇವಾಲಯದ ಸಂಕೀರ್ಣದ ಅವಶೇಷಗಳ ಹಿನ್ನೋಟದಲ್ಲಿ 30 ನಿಮಿಷಗಳ ಸಂವಾದಾತ್ಮಕ ಪ್ರಸ್ತುತಿಯಲ್ಲಿ ಭರತನಾಟ್ಯಂ ನೃತ್ಯಪಟುಗಳು ವಿಜಯನಗರ ಸಾಮ್ರಾಜ್ಯದ ವೈಭವವನ್ನು ಜೀವಂತಗೊಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...