Uttaradi Math ಉತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು 28ನೇ ಚಾತುರ್ಮಾಸ್ಯದ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಹೊಳೆಹೊನ್ನೂರು ಪಟ್ಟಣಕ್ಕೆ ಪುರಪ್ರವೇಶ ಮಾಡಿದರು.
ಶ್ರೀಪಾದಂಗಳವರ ಆಗಮನದ ಹಿನ್ನಲೆಯಲ್ಲಿ ರಾಜಬೀದಿಯನ್ನು ದೀಪಾಲಂಕೃತಗೊಳಿಸಲಾಗಿತ್ತು. ಸುವಾಸಿನಿಯರು ಪೂರ್ಣಕುಂಭಗಳೊಂದಿಗೆ ಆಗಮಿಸಿದ್ದರು.
ನೆರೆದಿದ್ದ ನೂರಾರು ವಿಪ್ರರು ವೇದಘೋಷ ಮಾಡಿದರು.

ಹೊಳೆಹೊನ್ನೂರು ಬಸ್‌ಸ್ಟಾಂಡ್ ಬಳಿಯಿಂದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರನ್ನು ಅದ್ಧೂರಿ ಮೆರವಣ ಗೆಯ ಮೂಲಕ ಬರ ಮಾಡಿಕೊಳ್ಳಲಾಯಿತು. ಮೊದಲು ಪ್ರಾಣದೇವರ ದರ್ಶನ ಮಾಡಿದ ಶ್ರೀಪಾದರು ನಂತರ ತಮ್ಮ ಪೀಠದ ಪೂರ್ವಯತಿಗಳಾದ ಶ್ರೀ ಸತ್ಯಧರ್ಮತೀರ್ಥರ ದರುಶನ ಪಡೆದರು. ನಂತರ ಚಾತುರ್ಮಾಸ್ಯ ಕಾಲದಲ್ಲಿ ಸಂಸ್ಥಾನ ಪೂಜೆ ನೆರವೇರಿಸಲೆಂದೆ ನೂತನ ನಿರ್ಮಿಸಲಾಗಿರುವ ಪೂಜಾ ಮಂದಿರದಲ್ಲಿ ಶ್ರೀ ದಿಗ್ವಿಜಯ ಮೂಲ ರಾಮ ದೇವರ ಪೆಟ್ಟಿಗೆಯನ್ನಿರಿಸಿ ಮಂಗಳಾರತಿ ಮಾಡಿದರು.
ನಂತರ ನಡೆದ ವಿದ್ವತ್ ಸಭೆಯಲ್ಲಿ ಸಮಸ್ತ ಭಕ್ತರ ಪರವಾಗಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವಂತೆ ಶ್ರೀಗಳವರಲ್ಲಿ ವಿಜ್ಞಾಪಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಉತ್ತರಾದಿಮಠದ ದೀವಾನರಾದ ಶಶಿಆಚಾರ್ಯ, ವಿದ್ವಾಂಸರಾದ ನವರತ್ನ ಸುಬ್ಬಣ್ಣಆಚಾರ್ಯ, ನವರತ್ನ ಶ್ರೀನಿವಾಸ ಆಚಾರ್ಯ, ನವರತ್ನ ಪುರುಷೋತ್ತಮ ಆಚಾರ್ಯ, ಶಿವಮೊಗ್ಗ ಜಿಲ್ಲೆಯ ಉತ್ತರಾದಿಮಠದ ಮಠಾಧಿಕಾರಿಗಳಾದ ಬಾಳಗಾರು ಜಯತೀರ್ಥಆಚಾರ್ಯ, ರಘೂತ್ತಮ ಆಚಾರ್ಯ ಸಂಡೂರು ಇನ್ನಿತರರು ಹಾಜರಿದ್ದರು.
Uttaradi Mathಇದೇ ಸಂದರ್ಭದಲ್ಲಿ ಸ್ವಾಮಿಗಳು ಚಾತುರ್ಮಾಸ್ಯ ಸೇವಾ ಕೌಂಟರನ್ನು ಉದ್ಘಾಟಿಸಿದರು.