Heavy Rain In Shivamogga ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ಶಿವಮೊಗ್ಗ ಜಿಲ್ಲಾದ್ಯಂತ ಇಂದು ಬೆಳಗ್ಗೆಯಿಂದಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ.
ಮಳೆ ಬಿರುಸುಗೊಂಡಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಭತ್ತ ನಾಟಿ ಮಾಡಲು ಸಸಿ ಮಡಿ ಸಿದ್ಧಪಡಿಸುವುದು, ಗೊಬ್ಬರ ಹಾಕುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.
ಹೊಸನಗರ ತಾಲೂಕಿನ ಮಾಣಿಯಲ್ಲಿ ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ 142 ಮಿಲಿ ಮೀಟರ್ ಅತ್ಯಧಿಕ ಮಳೆ ದಾಖಲಾಗಿದೆ.
ಉಳಿದಂತೆ ಹುಲಿಕಲ್ಲಿನಲ್ಲಿ 127, ಸಾವೆಹಕ್ಲುವಿನಲ್ಲಿ 120, ಚಕ್ರಾನಗರದಲ್ಲಿ 118, ಮಾಸ್ತಿಕಟ್ಟೆಯಲ್ಲಿ 116, ಯಡೂರಿನಲ್ಲಿ 100, ನಗರದಲ್ಲಿ 87 ಮತ್ತು ಹೊಸನಗರದಲ್ಲಿ 48 ಮಿಲಿ ಮೀಟರ್ ಮಳೆ ದಾಖಲಾಗಿದೆ.
Heavy Rain In Shivamogga 1819 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ 1742.65 ಅಡಿ ತಲುಪಿದೆ. ಕಳೆದ ವರ್ಷಕ್ಕಿಂತ 20 ಅಡಿ ನೀರು ಸಂಗ್ರಹ ಕಡಿಮೆ ಇದೆ. ಜಲಾಶಯಕ್ಕೆ 9237 ಕ್ಯೂಸೆಕ್ ನೀರು ಹರಿದು ಬರುತ್ತಿದೆ.