Tungabhadra Reservoir ಮುಂಗಾರು ಮಳೆ ತೀರ ವಿಳಂಬದಿಂದ ಇಲ್ಲಿನ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಬಹುತೇಕ ತಳಮಟ್ಟ ತಲುಪಿದೆ. ಜಲಾಶಯದಲ್ಲಿ 5 ಟಿಎಂಸಿ ಅಡಿ ನೀರು ಇದ್ದರು ಉಪಯೋಗಕ್ಕೆ ಮತ್ತು ಬಳಕೆಗೆ 3 ಟಿ ಎಂ ಸಿ ಮಾತ್ರ ಲಭ್ಯವಿದೆ. ಅದು ಸಹಿತ ಇನ್ನೊಂದು ವಾರದಲ್ಲಿ ಖಾಲಿಯಾಗಲಿದೆ. ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಹಾಗೂ ತೆಲಂಗಾಣ, ಆಂಧ್ರಪ್ರದೇಶಗಳಿಗೂ ನೀರು ಪೂರೈಸುವ ತುಂಗಭದ್ರಾ ಜಲಾಶಯದಲ್ಲಿ 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಈಗ ಇರುವ ಒಟ್ಟು ನೀರಿನ ಪ್ರಮಾಣ 4.84 ಟಿಎಂಸಿ ಅಡಿ. ಇದರಲ್ಲೂ 2 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗಾಗಿ ಪರಿಗಣಿಸುವುದರಿಂದ ಇನ್ನು ಬಳಕೆಗೆ ಲಭ್ಯ ಇರುವ ನೀರಿನ ಪ್ರಮಾಣ 2.50 ಟಿಎಂಸಿ ಅಡಿ ನೀರು ಮಾತ್ರ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಜಲಾಶಯದಲ್ಲಿ 40 ಟಿಎಂಸಿ ನೀರಿನ ಸಂಗ್ರಹವಾಗಿತ್ತು.
ಕಳೆದ ನಾಲ್ಕೈದು ದಿನಗಳಿಂದ ಜಲಾಶಯಕ್ಕೆ ಒಳಹರಿವು ಬಂದ್ ಆಗಿದೆ. ಹೊರ ಹರಿವನ್ನು 300 ಕ್ಯೂಸೆಕ್‌ಗೂ ಮಿತಿಗೊಳಿಸಲಾಗಿದೆ.
ರಾಯಚೂರು ಜಿಲ್ಲೆಯ ಗಣೇಕಲ್ ಜಲಲಾಶಯಕ್ಕೆ ಕುಡಿಯುವ ನೀರು ಪೂರೈಸುವ ಸಲುವಾಗಿ ನೀರು ಹರಿಸಲಾಗುತ್ತಿದೆ., ಹೀಗಾಗಿ ಸದ್ಯ ಜಲಾಶಯದ ಹೊರಹರಿವಿನ ಪ್ರಮಾಣ 1,050 ಕ್ಯೂಸೆಕ್‌ಗೆ ಹೆಚ್ಚಳವಾಗಿದೆ.
ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವ ಕಾರಣ ವಿಜಯನಗರ ಜಿಲ್ಲೆ, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ತಲೆದೋರಬಹುದು. ತುಂಗಭದ್ರ ನದಿ ನಂಬಿ ಬೆಳೆದುನಿಂತಿರುವ ಕಾರ್ಖಾನೆಗಳು ನೀರಿಗಾಗಿ ಹರಸಾಹಸ ಮಾಡುತ್ತಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ, . ಶಿವಮೊಗ್ಗ ಸಹಿತ ಸುತ್ತಮುತ್ತಲ ಪ್ರದೇಶಗಳಿಗೆ ಮುಂಗಾರು ಮಳೆ ಬರುವುದು ಮತ್ತಷ್ಟು ವಿಳಂಬವಾದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುತ್ತದೆ.
ಹಾಗಿದ್ದಾಗ ನದಿಯಲ್ಲಿ 2 ಟಿ ಎಂಸಿ ಡೆಡ್‌ಸ್ಟೋರೇಜ್ ನೀರನ್ನು ಕುಡಿಯಲು ಮಾತ್ರ ಬಳಸಬೇಕಾಗುತ್ತದೆ’ ಎಂದು ವಿಜಯನಗರ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ತಿಳಿಸಿದ್ದಾರೆ.
ಈ ಬಾರಿ ಹಿಂಗಾರು ಮಳೆ ಅಬ್ಬರಿಸುತ್ತಿದ್ದು, ರಾಜ್ಯದೆಲ್ಲೆಡೆ ವರುಣನಾರ್ಭಟ ಜೋರಾಗಿದೆ. ಕೆಲವು ಕಡೆ ಅವಾಂತರವನ್ನೇ ಸೃಷ್ಟಿಸಿದೆ, ಇನ್ನೂ ಸೃಷ್ಟಿಸುತ್ತಿದೆ. ಆದರೆ, ಈ ಮಧ್ಯೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ.
Tungabhadra Reservoir ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯವು ಬಹುತೇಕ ಖಾಲಿಯಾಗಿ ರೈತರು ಕಣ್ಣೀರು ಇಡುವಂತಾಗಿದೆ ಒಂದು ವೇಳೆ ಮಳೆ ಕಡಿಮೆಯಾಗಿ, ಇನ್ನೂ ಸ್ವಲ್ಪ ದಿನ ವಿಳಂಬವಾದರೆ ಕಥೆ ಏನು? ಎಂಬ ಭಯದಲ್ಲಿ ರೈತರು ಇದ್ದಾರೆ.
101 ಟಿಎಂಸಿ ಶೇಖರಣಾ ಸಾಮರ್ಥ್ಯವಿರುವ ತುಂಗಾ ಭದ್ರಾ ಜಲಾಶಯವು 28000 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ತುಂಗಭದ್ರಾ ಅಣೆಕಟ್ಟು ಸುಮಾರು 49.5 ಮೀಟರ್ ಎತ್ತರವಿದ್ದು ಮತ್ತು ಸುಮಾರು 33 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿದೆ. ಅಲ್ಲದೆ, ಇದರ ಮೂಲಕ ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಈ ಬಾರಿ ಮಳೆಬಾರದೆ ಇದ್ದರೆ ಈ ವರ್ಷ ಈ ಭಾಗದಿಂದ ಭತ್ತ, ಬಾಳೆ ಮತ್ತು ಕಬ್ಬಿನ ಬೇಳೆಗೆ ಬಾರಿ ಹೊಡೆತ ಬಿಳುತ್ತದೆ. ಕಾದು ನೋಡ ಬೇಕಾಗಿದೆ, ಭಾಗೀರಥಿ ಸಮೀಪಿಸುತ್ತಿದ್ದಾಳೆ ಮಂತ್ರಾಲಯದ ಕಾಮಧೇನು ಕಲ್ಪ ವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಸಹ ಸಮೀಪದಲ್ಲಿ ಇರುವುದರಿಂದ ತುಂಗಭದ್ರಾ ಉಕ್ಕಿ ಹರಿಯುತ್ತಾಳೆ ಎಂಬುವ ಭರವಸೆ ಇಲ್ಲಿಯ ಭಕ್ತರದಾಗಿದೆ.
ಮುರುಳಿಧರ್ ನಾಡಿಗೇರ್ .