Saturday, June 21, 2025
Saturday, June 21, 2025

Kimmane Rathnakar ಶಿವಮೊಗ್ಗದಲ್ಲಿ ಜುಲೈ 3 ರಂದು ಕಿಮ್ಮನೆ ಸತ್ಯಾಗ್ರಹ

Date:

Kimmane Rathnakar ನಾವು ಘೋಷಿಸಿರುವ ಗ್ಯಾರಂಟಿಗಳು ಒಂದೆರಡು ದಿನ ಅಥವಾ 24 ಗಂಟೆಗಳಲ್ಲಿ ಆಗುವಂತಹ ಕೆಲಸ ಅಲ್ಲ. ರಾಜ್ಯದ ಸುಮಾರು 3 ಕೋಟಿಗೂ ಅಧಿಕ ಜನರಿಗೆ ಈ ಯೋಜನೆ ತಲುಪಬೇಕಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದು ಕೇಂದ್ರದ 5 ಕೆಜಿ ಸೇರಿಸಿ ಅದನ್ನು ಬಿಟ್ಟು ನಾವು ಹೇಳಿಲ್ಲ. ನಮ್ಮ ಸರ್ಕಾರ ಇದ್ದಾಗ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆವು. ಅದರಲ್ಲೂ ಕೂಡ ಕೇಂದ್ರದ 5 ಕೆಜಿ ಅಕ್ಕಿ ಇತ್ತು ಎಂದು ಕಿಮ್ಮನೆ ರತ್ನಾಕರ್ ಅವರು ಹೇಳಿದರು.

ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಸರ್ಕಾರಿ ಆಸ್ಪತ್ರೆಗಳಲ್ಲಿ 108 ಆಂಬುಲೆನ್ಸ್ ಇತ್ತು. ಅದರಲ್ಲಿ ಬಿಜೆಪಿಯವರು ಮುಖ್ಯಮಂತ್ರಿ ಹಾಗೂ ಆರೋಗ್ಯ ಮಂತ್ರಿಯವರ ಫೋಟೋ ಹಾಕಿದ್ದರು. ಆದರೆ ಆ ಯೋಜನೆ ತಂದಿದ್ದು ಕೇಂದ್ರ ಸರ್ಕಾರ ಅಂದ್ರೆ ನಮ್ಮ ಯುಪಿಎ ಸರ್ಕಾರವೇ ಹೊರತು ಇಲ್ಲಿನ ಬಿಜೆಪಿ ಸರ್ಕಾರ ಅಲ್ಲ. ಆದರೂ ಬಿಜೆಪಿಯವರು ತಮ್ಮ ಫೋಟೋಗಳನ್ನು ಹಾಕಿಕೊಂಡಿದ್ದರು ಆಗ ನಾವೇನಾದರೂ ಪ್ರತಿಭಟನೆ ಮಾಡಿದ್ದೇವ ಎಂದು ಪ್ರಶ್ನಿಸಿದರು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ ಹಲವಾರು ಭರವಸೆಗಳನ್ನು ನೀಡಿತ್ತು. ಅದರಲ್ಲಿ ಬಹು ಮುಖ್ಯವಾಗಿ ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದ ಕಪ್ಪು ಹಣವನ್ನು 90 ದಿನದ ಒಳಗೆ ತಂದು ಪ್ರತಿ ಭಾರತದ ಪ್ರಜೆಗಳ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುವ ಸುಳ್ಳು ಭರವಸೆಯನ್ನ ಕೊಟ್ಟಿದ್ದರು. ಆದರೆ, ಅದು ಯಾವುದನ್ನು ಕೂಡ ಈಡೇರಿಸಲಿಲ್ಲ. ಬರೀ 24 ಗಂಟೆಯ ಒಳಗಾಗಿ ಕಾಂಗ್ರೆಸ್ ಸರ್ಕಾರ ಈಡೇರಿಸದಿದ್ದರೆ ಪ್ರತಿಭಟನೆಗೆ ಕೂರುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಬಿಜೆಪಿಯವರು ಕೊಟ್ಟ ಭರವಸೆಯನ್ನು ಈಡೇರಿಸಲಿ ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಕೊಟ್ಟ ಭರವಸೆಯನ್ನು ಅನುಷ್ಠಾನ ಮಾಡಲು ಆಗದಿದ್ದರೆ ದೇಶದ ಜನರ ಬಳಿ ಪ್ರಧಾನಿ ಮೋದಿಯವರು ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲೂ ಬಿಜೆಪಿ ಸರ್ಕಾರ ಹಲವಾರು ಆಶ್ವಾಸನೆಗಳನ್ನು ನೀಡಿತ್ತು. ಮಹಿಳೆಯರಿಗೆ 3 ಗ್ರಾಂ ಚಿನ್ನ ಕೊಡುತ್ತೇವೆ ಎಂದಿದ್ದರು. ಆದರೆ ಇವರು ಮಾಡಿದ್ದು ಬಗರ್ ಹುಕ್ಕುಂ ಸರ್ಕಾರ, ಆಶ್ವಾಸನೆ ಮಾಡಿದವರೇ ಬೇರೆ ಭಾಷಣ ಬಿಗಿದವರೇ ಬೇರೆ. ಅನುಷ್ಠಾನ ಮಾಡಿದವರಿಗೆ ಬ್ರೈನ್ ಟ್ಯೂಮರ್ ಬಂದು ಮರೆತು ಹೋಯ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡವರಿಗೆ ಅಕ್ಕಿಯನ್ನು ಕೊಡಬೇಕಾಗಿದೆ. ಕೇಂದ್ರ ಸರ್ಕಾರವೇ. ಇಲ್ಲಿಯವರೆಗೂ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿದೆ . ಯುಪಿಎ ಸರ್ಕಾರ ಆಗಿರಬಹುದು ಅಥವಾ ಈಗಿನ ಬಿಜೆಪಿ ಸರ್ಕಾರವೇ ಆಗಿರಬಹುದು. ಆದರೆ ಅಕ್ಕಿಯನ್ನು ಕೊಟ್ಟಿದ್ದು ನಾವೇ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಏನು ಮನೆಯಿಂದ ತಂದು ಕೊಟ್ಟಿದ್ದ? ಬಿಜೆಪಿಯವರದೇ ಅಕ್ಕಿ ಆಗಿದ್ದೆ ಆದರೆ ನಮಗೆ ಅದರ ಅಗತ್ಯ ಬೇಡ ಎಂದರು.

ಬಿ.ಎಸ್ ಯಡಿಯೂರಪ್ಪನವರು ಅಥವಾ ಬಿ.ವೈ ರಾಘವೇಂದ್ರ ಅವರೇ ಆಗಲಿ, ನಾನಿದ್ದಂತಹ 10 ವರ್ಷಗಳ ಕಾಲ ತೀರ್ಥಹಳ್ಳಿ ಕ್ಷೇತ್ರಕ್ಕೆ ಪೂರ್ಣ ಸಹಕಾರವನ್ನು ಕೊಟ್ಟಿದ್ದಾರೆ. ಅದರ ಬಗ್ಗೆ ನನಗೆ ಗೌರವವಿದೆ. ಆದರೆ ಯಡಿಯೂರಪ್ಪನವರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಅವರು ಕೊಟ್ಟಂತಹ ಆಶ್ವಾಸನೆಗಳನ್ನ ಈಡೇರಿಸಲಿ ಮಹಿಳೆಯರಿಗೆ ಬಂಗಾರ ಕೊಡುತ್ತೇನೆ, ಮದುವೆಗೆ 25.000 ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರಲ್ಲ ಅದಕ್ಕೆ ಕ್ಷಮೆ ಕೇಳಬೇಕು ಕಾಂಗ್ರೆಸ್ ಅನುಷ್ಠಾನ ಮಾಡಿದ್ದಕ್ಕೆ ಪ್ರಶ್ನೆ ಮಾಡುವುದಾದರೆ ಇವರ ವಿರುದ್ಧ ನಾನು ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದರು.

Kimmane Rathnakar ಜುಲೈ 3 ರಂದು ಬೆಳಗ್ಗೆ 9 : 30 ರಿಂದ ಸಂಜೆ 5:30ರ ವರೆಗೆ ಶಿವಮೊಗ್ಗದ ಗಾಂಧಿ ಪ್ರತಿಮೆ ಎದುರು ನಾನು ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ. ಇದರಲ್ಲಿ ತಾಲೂಕು ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾ ಎಲ್ಲರೂ ಕೂಡ ಭಾಗಿಯಾಗಲಿದ್ದಾರೆ . ರಾಜ್ಯ ಬಿಜೆಪಿ ಸರ್ಕಾರ ಕೊಟ್ಟ ಆಶ್ವಾಸನೆಗಳಲ್ಲಿ ವಿಫಲವಾಗಿದ್ದಕ್ಕೆ ಹಾಗೂ ಕೇಂದ್ರ ಸರ್ಕಾರ ಕೊಟ್ಟ ಆಶ್ವಾಸನೆಗಳಲ್ಲಿ ವಿಫಲವಾಗಿದ್ದಕ್ಕೆ ಈ ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ. ಬಿಜೆಪಿಯವರು ಕೊಟ್ಟಂತಹ ಆಶ್ವಾಸನೆಗಳನ್ನು ಈಡೇರಿಸಿ ನಮ್ಮ ಸರ್ಕಾರದ ಆಶ್ವಾಸನೆಗಳಿಗೆ ತಕರಾರು ಮಾಡಲಿ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...