Monday, December 15, 2025
Monday, December 15, 2025

Bapuji Institute of Hi-Tech Education ಶಿಸ್ತು, ಸಮಯಪಾಲನೆ, ಸಮಾಜ ಗೌರವಿದ್ದವರೇ ಯಶಸ್ವಿ ಉದ್ಯಮಿ- ಯೋಗೇಶ್

Date:

Bapuji Institute of Hi-Tech Education ಎಲ್ಲರೂ ನೌಕರಿಯನ್ನೇ ಅರಸಿಕೊಂಡು ಹೋದರೆ ಆಹಾರವನ್ನು ಬೆಳೆದು ಕೊಡುವವರೇ ಇಲ್ಲವಾಗುತ್ತಾರೆ. ಈ ಸಂದಿಗ್ಧದಲ್ಲಿ ಬೃಹತ್ ಸಂಸ್ಥೆಗಳು ಪ್ರಸ್ತುತ ಕೃಷಿ ಕ್ಷೇತ್ರವನ್ನು ಪ್ರವೇಶಿಸಲು ತವಕಿಸುತ್ತಿವೆ ಎಂದು ಎಚ್ ಡಿ ಎಫ್ ಸಿ ಬ್ಯಾಂಕಿನ ಉಪಾಧ್ಯಕ್ಷ ಯೋಗೇಶ ಕೆ ಆರ್ ಹೇಳಿದರು.

ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ವಾಣಿಜ್ಯ ವಿಭಾಗದ 2020-23ರ ಸಾಲಿನ ವಿದ್ಯಾರ್ಥಿಗಳಿಗೆ ವಿದಾಯ ಹೇಳುವ "ಬೀಐಹ್ಯಾವ್-2ಕೆ23"  ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು .ಎಷ್ಟೇ ವಿದ್ಯಾವಂತರಾದರೂ ಕೃಷಿ ಕ್ಷೇತ್ರದ ಅನುಭವ ಅತ್ಯವಶ್ಯ, ಅದು ಪ್ರಕೃತಿಯೊಂದಿಗೆ ಬೆರೆತು ಬಾಳುವ ಬದುಕನ್ನು ತಿಳಿಸುತ್ತದೆ. ಎಂದರಲ್ಲದೆ ತಂತ್ರಜ್ಞಾನದ ತೀವ್ರಗತಿಯ ವೃದ್ಧಿಯು ಕೆಲಸದ ವಿಧಾನಗಳಲ್ಲೂ ಬದಲಾವಣೆಯನ್ನು ಉಂಟುಮಾಡುತ್ತಿದೆ. ಇದು ಮಾರುಕಟ್ಟೆಯ ವ್ಯವಸ್ಥೆಯಲ್ಲೂ ಬಳಕೆದಾರರ ಅಭಿರುಚಿಯಲ್ಲೂ ತೀವ್ರ ಬದಲಾವಣೆಯನ್ನು ತರುತ್ತಿದೆ. ಇವುಗಳ ಅರಿವು ಅನುಷ್ಠಾನ ದೊಂದಿಗೆ ಶಿಸ್ತು,ಸಮಯ ಪಾಲನೆ,ಸಮಾಜ ಗೌರವ ಇದ್ದವರು ಮಾತ್ರ ಯಶಸ್ವಿ ಉದ್ಯೋಗಿಗಳಾಗಲು ಸಾಧ್ಯ ಎಂದರು.     

 ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದರವರು  ಪ್ರಾಸ್ತಾವಿಕ ನುಡಿಗಳೊಂದಿಗೆ  ಸ್ವಾಗತ ಕೋರುತ್ತಾ ವಾಣಿಜ್ಯೋದ್ಯಮಗಳು ಆರ್ಥಿಕಾಭಿವೃದ್ಧಿಯ ಬೆನ್ನೆಲುಬುಗಳು ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಅವಶ್ಯ ಎಂದರು.          

ಅಧ್ಯಕ್ಷ ಸ್ಥಾನದಿಂದ ಮಾತಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ವೀರಪ್ಪನವರು ಬಿಕಾಂ ಪದವಿಗೆ ಬೇಡಿಕೆ ಹೆಚ್ಚುತ್ತಿದೆ, ಪರೀಕ್ಷೆಯನ್ನು ಶ್ರದ್ಧೆಯಿಂದ ಸಂತೋಷದಿಂದ ಎದುರಿಸಿ ಪದವಿಯ ನಂತರ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳಿರಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.     

Bapuji Institute of Hi-Tech Education ಹರ್ಷಿತ ಮತ್ತು ಸ್ಪೂರ್ತಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪ್ರಜ್ಞಾ ಹಾಡಿದರೆ ಅತಿಥಿಗಳ ಪರಿಚಯವನ್ನು ವೈಷ್ಣವಿ,  ಐಶ್ವರ್ಯ, ಸೈಯದ್  ಅರ್ಮಾನ್,  ಮೊಹಮ್ಮದ್ ಅದಿಲ್, ಅರ್ಚನಾ ಮಾಡಿದರು.

ವಂದನೆಗಳನ್ನು ಪವನ್ ಬಿ ಸಮರ್ಪಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ನೀಡಲಾಯಿತು.

ವರದಿ ಕೃಪೆ: ಎಚ್.ಬಿ.ಮಂಜುನಾಥ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...