Saturday, June 21, 2025
Saturday, June 21, 2025

Rotary Club Shivamogga ಮನೋ ನಿಯಂತ್ರಣ ಜೀವನದಲ್ಲಿ ಮುಖ್ಯ- ಜಿ.ಎಸ್.ನಟೇಶ್

Date:

Rotary Club Shivamogga ಮಾನಸಿಕ ಉದ್ವೇಗಕ್ಕೆ ಒಳಗಾಗದೇ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವ ಮಾರ್ಗವನ್ನು ಡಿ. ವಿ. ಜಿ ಅವರ ಮಂಕುತಿಮ್ಮನ ಕಗ್ಗದ ಪದ್ಯಗಳಲ್ಲಿ ಉದಾಹರಿಸಿದ್ದಾರೆ. ಮನೋನಿಯಂತ್ರಣ ಜೀವನದಲ್ಲಿ ಮುಖ್ಯ ಎಂದು ವಾಗ್ಮಿ ಜಿ.ಎಸ್.ನಟೇಶ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ಹಾಗೂ ಎಫ್‌ಪಿಎಐ ಶಿವಮೊಗ್ಗ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಜೀವನ ಮೌಲ್ಯ” ವಿಷಯ ಕುರಿತು ಮಾತನಾಡಿ,
ಕೊಳದ ಜಲವನ್ನು ಜನರು ವಿವಿಧ ಕೆಲಸ ಕಾರ್ಯಗಳಿಗೆ ಉಪಯೋಗಿಸುತ್ತಾರೆ. ಆಗ ಅದು ರಾಡಿಯಾಗುವುದು ಸಹಜ. ಆದರೆ ಅದು ಸ್ವಲ್ಪ ಸಮಯದ ನಂತರ ತಿಳಿಯಾಗುವಂತೆ, ಪ್ರೀತಿ, ದ್ವೇಷ, ಅಸೂಯೆ, ಸಿಟ್ಟು ಎಲ್ಲಾ ಭಾವನೆಗಳಿಂದ ಮನಸ್ಸು ಕಲುಷಿತ ಗೊಳ್ಳತ್ತದೆ. ಆಗ ಈ ಎಲ್ಲದರಿಂದ ಸ್ವಲ್ಪ ಸಮಯ ದೂರವಿದ್ದು ಸಮಾಧಾನ ಪಡೆಯಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಸರ್ಜಾ ಜಗದೀಶ್ ಮಾತನಾಡಿ, ಕಾರಾಗೃಹದಿಂದ ಬಿಡುಗಡೆಯಾದ ನಂತರ ಸಮಾಜದ ಮುಖ್ಯ ವಾಹಿನಿಗೆ ಬಂದು ದೇಶದ ಉತ್ತಮ ಪ್ರಜೆಗಳಾಗಿ ಬದುಕಬೇಕೆಂದು ತಿಳಿಸಿದರು.
ಜೈಲ್ ಸೂಪರಿಂಟೆಂಡೆಂಟ್ ಹೇಮಲತಾ ಮಾತನಾಡಿ, ರೋಟರಿ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ. ಇನ್ನು ಮುಂದೆಯೂ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ಹಾಗೂ ಎಫ್‌ಪಿಎಐ ಶಿವಮೊಗ್ಗ ವತಿಯಿಂದ ಶಿವಮೊಗ್ಗ ಜಿಲ್ಲಾ ಕಾರಾಗೃಹದ ಜೈಲಿನ ಮಹಿಳಾ ಖೈದಿಗಳಿಗೆ ಸ್ಟೀಲ್ ನೀರಿನ ಬಾಟಲ್ ವಿತರಿಸಲಾಯಿತು.

Rotary Club Shivamogga ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ಬಸವರಾಜ್, ಮಿತ್ರ, ಅನಿಲ್ ತುಂಬಾಳ್, ಶಿವಕುಮಾರ್, ವಾರಿಜಾ ಜಗದೀಶ್ ಮತ್ತು ಎಫ್‌ಪಿಎಐ ಅಧ್ಯಕ್ಷ ಅಶೋಕ್ ಕುಮಾರ್ ಮತ್ತು ಕಾರಾಗೃಹದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...