JCI Shivamogga Vivek ಇಂದು ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಶಿವಮೊಗ್ಗದ ಅಶ್ವಥ್ ನಗರದ ಸ್ವಾಮಿ ವಿವೇಕಾನಂದ ಪಾರ್ಕ್, ಜೆ.ಸಿ ಶಿವಮೊಗ್ಗ, ವಿವೇಕ್ ಫೌಂಡೇಶನ್ ಹಾಗೂ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದರು.
JCI Shivamogga Vivek ಈ ಸಂದರ್ಭದಲ್ಲಿ ಸಂಸದರಾದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು ಮತ್ತು ಡಿ.ಎಸ್ ಅರುಣ್, ಮಾಜಿ ಸೂಡ ಅಧ್ಯಕ್ಷರಾದಂತಹ ಜ್ಯೋತಿಪ್ರಕಾಶ್ ಮತ್ತು ನಾಗರಾಜ, ಮಹಾನಗರ ಪಾಲಿಕೆಯ ಸದಸ್ಯರಾದಂತಹ ವಿಶ್ವಾಸ್, ಬಿಜೆಪಿ ಮುಖಂಡರಾದ ಡಾ. ಧನಂಜಯ್ ಸರ್ಜಿ, ಪರಿಸರ ನಾಗರಾಜ್ ಹಾಗೂ ಹರ್ಷ ಕಾಮತ್ ಉಪಸ್ಥಿತರಿದ್ದರು.
