Sunday, December 14, 2025
Sunday, December 14, 2025

Heavy and Medium Industries ಅವಳಿ ನಗರದ ಪ್ರಮುಖ ಉದ್ದಿಮೆಗಳಿಗೆ ಭೇಟಿ, ಎನ್‌ಜಿಎಫ್‌ ಪುನಶ್ಚೇತನಕ್ಕೆ ಸಚಿವ ಎಂಬಿ ಪಾಟೀಲ್ ಒಲವು

Date:

Heavy and Medium Industries ಉದ್ದಿಮೆಗಳ ಸ್ಥಿತಿಗತಿ ತಿಳಿದುಕೊಳ್ಳುವ ಉದ್ದೇಶದಿಂದ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಅವರು ಸೋಮವಾರ ಇಲ್ಲಿನ ಸರಕಾರಿ ಸ್ವಾಮ್ಯದ ಎನ್‌ಜಿಇಎಫ್‌ ಮತ್ತು ಬೇಲೂರು ಕೈಗಾರಿಕಾ ಪ್ರದೇಶ ಹಾಗೂ ಗಾಮನಗಟ್ಟಿ, ಕೈಗಾರಿಕಾ ಪ್ರದೇಶಗಳಲ್ಲಿರುವ ಹಲವು ಉದ್ದಿಮೆಗಳಿಗೆ ಭೇಟಿ ನೀಡಿ, ಪರಿವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಹುಬ್ಬಳ್ಳಿ-ಧಾರವಾಡದ ಉದ್ಯಮಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು. ಜತೆಗೆ ತಾವು ಭೇಟಿ ನೀಡಿದ ಉದ್ಯಮಗಳ ಉತ್ಪಾದನಾ ವಿಧಾನ, ಉತ್ಪನ್ನಗಳ ಮಾಹಿತಿ, ಬಳಸಲ್ಪಡುವ ತಂತ್ರಜ್ಞಾನ, ವಹಿವಾಟು, ರಫ್ತು ಚಟುವಟಿಕೆ ಮತ್ತು ಇವುಗಳ ಬೆಳವಣಿಗೆಗೆ ಇರುವ ಅವಕಾಶ ಇತ್ಯಾದಿಗಳ ಬಗ್ಗೆ ಖುದ್ದಾಗಿ ಕೇಳಿ ತಿಳಿದುಕೊಂಡರು. ಅಲ್ಲದೆ, ಕೆಐಎಡಿಬಿಯಿಂದ ಇಲ್ಲಿ ಆಗಿರುವ ಕೈಗಾರಿಕಾ ನಿವೇಶನಗಳ ವಿತರಣೆ ಮತ್ತು ಅವುಗಳ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ವಿವರಣೆ ಬಯಸಿದರು.
ಮೊದಲಿಗೆ ಗಾಮನಗಟ್ಟಿಯ ಇನ್‌ಫ್ರಾ ಫೈನ್‌ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಭೇಟಿ ನೀಡಿದ ಸಚಿವರು, ಅಲ್ಲಿ ವಿವಿಧ ಹಣ್ಣುಗಳ ತಿರುಳನ್ನು ತೆಗೆದು, ಅದನ್ನೆಲ್ಲ ಅಚ್ಚುಕಟ್ಟಾಗಿ ಅಮೆರಿಕ, ಜಪಾನ್‌ ಮತ್ತು ಯೂರೋಪಿಯನ್‌ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಬಗ್ಗೆ ತಿಳಿದುಕೊಂಡರು. ಜತೆಗೆ ಕಂಪನಿಯು ಕೆಲವೇ ವರ್ಷಗಳಲ್ಲಿ 100 ಕೋಟಿ ರೂ. ಮೊತ್ತದ ರಫ್ತು ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿರುವುದನ್ನು ಕಂಡು ಆಶ್ಚರ್ಯಚಕಿತರಾದರು.
Heavy and Medium Industries ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಾವು, ಪೇರಲೆ, ಅನಾನಸ್ ಇತ್ಯಾದಿ ಹಣ್ಣುಗಳನ್ನು ನೇರವಾಗಿ ರೈತರಿಂದ ಖರೀದಿಸಿ, ಇಂತಹ ಉದ್ದಿಮೆ ಸ್ಥಾಪಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದರಿಂದ ರೈತರಿಗೂ ಆರ್ಥಿಕವಾಗಿ ಲಾಭವಾಗಲಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ಕುಸಿದರೂ ಇಂತಹ ಕಂಪನಿಗಳನ್ನು ನೆಚ್ಚಿಕೊಳ್ಳಬಹುದು. ಇದರಿಂದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯೂ ಆಗಲಿದೆ” ಎಂದು ಮೆಚ್ಚುಗೆ ಸೂಸಿದರು.
ಅಲ್ಲದೆ, ರಾಜ್ಯದಲ್ಲಿ ಕೃಷಿ ಆಧಾರಿತ ಉದ್ಯಮಗಳಿಗೆ ಹೇರಳ ಅವಕಾಶಗಳಿವೆ. ರೈತರು ತಮ್ಮ ಜಮೀನಿನಲ್ಲೇ ಇಂತಹ ಉದ್ದಿಮೆ ಸ್ಥಾಪಿಸಲು ಮುಂದಾದರೆ ಅವರಿಗೆ ಸರಕಾರವು ಅನುಕೂಲ ಒದಗಿಸಲಿದೆ. ಮುಖ್ಯವಾಗಿ, ಕೃಷಿ ಭೂಮಿಯನ್ನು ಕೈಗಾರಿಕೋದ್ದೇಶದ ಬಳಕೆಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಚಿಂತಿಸಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ಬಳಿಕ ಅವರು, ದಿನನಿತ್ಯದ ಬದುಕಿನಲ್ಲಿ ದೀರ್ಘಕಾಲಿಕ ಬಳಕೆಗೆ ಬರುವಂತಹ ಉತ್ಪನ್ನಗಳನ್ನು ತಯಾರಿಸುವ ಏಕಸ್‌ ಉದ್ಯಮಕ್ಕೆ ಭೇಟಿ ನೀಡಿದರು. ಕೆಐಎಡಿಬಿ ಒದಗಿಸಿರುವ 300 ಎಕರೆ ಭೂಮಿಯಲ್ಲಿ ಸ್ವತಃ ಕಂಪನಿಯೇ ಎಸ್‌ಇಜೆಡ್‌ ಅಭಿವೃದ್ಧಿ ಪಡಿಸಿ, ವಿವಿಧ ಉದ್ದಿಮೆಗಳಿಗೆ ಸ್ಥಳಾವಕಾಶ ನೀಡುತ್ತಿರುವುದನ್ನು ಅವರು ವೀಕ್ಷಿಸಿದರು. ಇಲ್ಲಿ ತಯಾರಾಗುವ ಕಾವಲಿ (ತವಾ), ದೊಡ್ಡ ಪಾತ್ರೆಗಳು, ತಟ್ಟೆಗಳು ಇತ್ಯಾದಿಗಳನ್ನು ವೀಕ್ಷಿಸಿದರು.
ಇದಾದಮೇಲೆ, ಇತಿಗಟ್ಟಿಯಲ್ಲಿರುವ ಧಾರವಾಡ ಎಸ್‌ಇಜೆಡ್‌ ವಲಯದ ಮೈಕ್ರೋಫಿನಿಷ್ ವಾಲ್ವ್ಸ್ ಪ್ರೈವೇಟ್‌ ಲಿ., ಕಂಪನಿಗೆ ತೆರಳಿದರು. ಕಂಪನಿಯು ತಯಾರಿಸುವ ಬೃಹತ್‌ ಗಾತ್ರದ, ಔದ್ಯಮಿಕ ಬಳಕೆಗೆ ಬರುವ ವಾಲ್ವ್‌ಗಳ ಬಗ್ಗೆ ಅವರು ಅಲ್ಲಿನ ಉನ್ನತ ಪ್ರತಿನಿಧಿಗಳಿಂದ ಮಾಹಿತಿ ಪಡೆದುಕೊಂಡರು.
ಇಲ್ಲಿಂದ ಅವರ ಆಸಕ್ತಿ ಬೇಲೂರು ಕೈಗಾರಿಕಾ ಪ್ರದೇಶದತ್ತ ಹೊರಳಿತು. ಅಲ್ಲಿ ಅವರು, ಬಿಸ್ಕತ್‌, ಮ್ಯಾಗಿ ಸೇರಿದಂತೆ ಹಲವು ಆಹಾರ ಉತ್ಪನ್ನಗಳ ಪ್ಯಾಕೇಜಿಂಗ್‌ನಲ್ಲಿ ಬಳಸುವ ಉತ್ಕೃಷ್ಟ ದರ್ಜೆಯ ಪ್ಲಾಸ್ಟಿಕ್ ಕಾಗದವನ್ನು ತಯಾರಿಸಲು ಹೆಸರಾಗಿರುವ ಯೂಫ್ಲೆಕ್ಸ್‌ ಕಂಪನಿಗೆ ಅಡಿ ಇಟ್ಟರು. ಅಲ್ಲಿನ ಉತ್ಪಾದನಾ ವಿಧಾನವನ್ನು ವೀಕ್ಷಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಇಂತಹ ಉದ್ದಿಮೆಗಳು ಹೆಚ್ಚಾಗಿ ಬರಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಕೆಐಎಡಿಬಿ ಆಯುಕ್ತ ಮಹೇಶ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು, ಎನ್‌ಜಿಇಎಫ್‌ ಉಪ ಮಹಾವ್ಯವಸ್ಥಾಪಕ ನರೇಗಲ್‌ ಮತ್ತು ಭಾರೀ ಹಾಗೂ ಮಧ್ಯಮ ಕೈಗಾರಕಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿರುವ ಕೈಗಾರಿಕಾ ನಿವೇಶನಗಳ ವಿತರಣೆಯ ಅಂಕಿಅಂಶಗಳು ಮತ್ತು ಹಂಚಿಕೆಯ ನಂತರ ಆಗಿರುವ ಪ್ರಗತಿಯ ಬಗ್ಗೆ ಪರಿಶೀಲಿಸಿ, ವಸ್ತುಸ್ಥಿತಿ ತಿಳಿದುಕೊಂಡರು. ನಿವೇಶನ ಹಂಚಿಕೆಯಾಗಿ ಹತ್ತಾರು ವರ್ಷಗಳು ಕಳೆದಿದ್ದರೂ ಹಲವೆಡೆಗಳಲ್ಲಿ ಯಾವುದೇ ಉದ್ದಿಮೆ ಬಾರದಿರಲು ಕಾರಣಗಳೇನು, ಈ ವಿಳಂಬಕ್ಕೆ ಪರಿಹಾರವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.


ಅಲ್ಲದೆ, “ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಉದ್ಯಮಗಳು ನೆಲೆಯೂರಲು ಏನು ಮಾಡಬೇಕು, ಇವುಗಳ ಭವಿಷ್ಯ ಹೇಗಿರಬೇಕು ಎನ್ನುವುದನ್ನು ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ಮತ್ತು ಉದ್ಯೋಗಸೃಷ್ಟಿ ಇವೆರಡೂ ನಮಗೆ ಮುಖ್ಯವಾಗಿದೆ. ಇದನ್ನು ಸಾಧಿಸಿದರೆ ಮಾತ್ರ ರಾಜ್ಯದ ಆರ್ಥಿಕ ಬೆಳವಣಿಗೆಗೆ ಚೆನ್ನಾಗಿರಲಿದೆ. ಕೈಗಾರಿಕಾ ನಿವೇಶನ ವಿತರಣೆ ಮಾಡಿದರೆ ಇಲಾಖೆಯ ಕೆಲಸ ಮುಗಿದಂತಲ್ಲ. ಆ ಜಾಗದಲ್ಲಿ ಉದ್ದಿಮೆಗಳು ಕ್ಷಿಪ್ರಗತಿಯಲ್ಲಿ ಬಂದು, ಉತ್ಪಾದನೆ ಆರಂಭಿಸಲೇಬೇಕು” ಎಂದು ಅವರು ನಿರ್ದೇಶಿಸಿದರು.
ಎನ್‌ಜಿಇಎಫ್‌ ನೌಕರರ ಸಂಘವು ಕಾರ್ಖಾನೆಯ ಪುನಶ್ಚೇತನದ ಅಗತ್ಯ ಮತ್ತು ವೇತನ ಪರಿಷ್ಕರಣೆ ಕುರಿತು ಸಲ್ಲಿಸಿದ ಮನವಿಯನ್ನು ಅವರು ಇದೇ ಸಂದರ್ಭದಲ್ಲಿ ಸ್ವೀಕರಿಸಿದರು.
ಇಲ್ಲಿ ತಯಾರಾಗುವ ಟ್ರಾನ್ಸ್‌ಫಾರ್ಮರ್‍‌ಗಳನ್ನು ನೂತನ ಸಂಸತ್‌ ಭವನ ಸೇರಿದಂತೆ ರಕ್ಷಣಾ ಇಲಾಖೆ, ಇಸ್ರೋದಂತಹ ಪ್ರಮುಖ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದಕ್ಕೆ ಅಗತ್ಯ ಮಾರುಕಟ್ಟೆ ಸೃಷ್ಟಿಸುವ ತುರ್ತು ನಮ್ಮ ಮುಂದಿದೆ. ಎನ್‌ಜಿಇಎಫ್‌ ಮೇಲೆತ್ತಲು ಸರಕಾರವೂ ಉತ್ಸುಕವಾಗಿದೆ ಎಂದು ಅವರು ನುಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...