Tuesday, August 25, 2026
Tuesday, August 25, 2026

Indian Medical Association ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಐಎಂಎ ತಂಡದ ಭೇಟಿ

Date:

Indian Medical Association ಐಎಂಎ ಶಿವಮೊಗ್ಗದ ಸುಮಾರು 35 ಸದಸ್ಯರು ಮತ್ತು ಪದಾಧಿಕಾರಿಗಳು ಮಾಚೇನಹಳ್ಳಿಯ ಶುಶ್ರುತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ ನಿರ್ವಹಿಸುತ್ತಿರುವ ಬೈಯೋಮೆಡಿಕಲ್ ತ್ಯಾಜ್ಯ ಸೌಲಭ್ಯಕ್ಕೆ ಭೇಟಿ ನೀಡಿದರು.

ಇದು 20 ವರ್ಷಗಳಿಂದ ಯಶಸ್ವಿಯಾಗಿ ಚಾಲನೆಯಲ್ಲಿರುವ ಆಸ್ಪತ್ರೆ ತ್ಯಾಜ್ಯ ವಿಲೇವಾರಿ , ಸಂಸ್ಕರಣೆ,ಪ್ರತ್ಯೇಕತೆ ಮತ್ತು ಚಿಕಿತ್ಸಾ ಸೌಲಭ್ಯದ ಸಂಸ್ಥೆಯಾಗಿದ್ದು ಇಡೀ ದೇಶದಲ್ಲಿ ವೈದ್ಯರೇ ಹುಟ್ಟುಹಾಕಿ ನಡೆಸುತ್ತಿರುವ ಬೆರಳೆಣಿಕೆಯ ಸಂಸ್ಥೆಗಳಲ್ಲೊಂದಾಗಿದೆ.

ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆಯನ್ನು ಶುಶ್ರುತ ಸಮಿತಿಯ ಅಧ್ಯಕ್ಷರಾದ ಡಾ. ಪ್ರಶಾಂತ್ ಇಸ್ಲೂರ್, ಕಾರ್ಯದರ್ಶಿ ಡಾ. ಗಿರೀಶ್ ಮತ್ತು ಡಾ. ವಿನಿತ್ ಆನಂದ್ ಅವರು ವಿವರವಾಗಿ ಎಲ್ಲ ಐಎಂಎ ಸದಸ್ಯರಿಗೆ ತಿಳಿಸಿದರು.

Indian Medical Association ತ್ಯಾಜ್ಯವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರ್ವಹಣೆ ಮತ್ತು ಬೇಕಾದಲ್ಲಿ ಸಂಸ್ಕರಿಸಿದ ನೀರು ಹಾಗು ಪ್ಲಾಸ್ಟಿಕ್ ಮರುಬಳಕೆಯ ಪ್ರಕ್ರಿಯೆಯು ಬಹಳ ಚೆನ್ನಾಗಿ ಮೂಡಿಬರುತ್ತಿದ್ದು , ಸದಸ್ಯರಿಂದ ಮೆಚ್ಚುಗೆ ಪಡೆಯಿತು.

ಈ ಉಪಯುಕ್ತ ಚಟುವಟಿಕೆಯಲ್ಲಿ ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ , ಕಾರ್ಯದರ್ಶಿ ಡಾ . ರಕ್ಷಾ ರಾವ್ , ಉಪಾಧ್ಯಕ್ಷರಾದ ಡಾ.ರವೀಶ್ ,ಡಾ . ಶಂಭುಲಿಂಗ ಹಾಗು ಹಿರಿಯ ಕಿರಿಯ ಸದಸ್ಯರು ಭಾಗಿಯಾಗಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...