Indian Medical Association ಐಎಂಎ ಶಿವಮೊಗ್ಗದ ಸುಮಾರು 35 ಸದಸ್ಯರು ಮತ್ತು ಪದಾಧಿಕಾರಿಗಳು ಮಾಚೇನಹಳ್ಳಿಯ ಶುಶ್ರುತ ಬಯೋ-ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್ ಸೊಸೈಟಿ ನಿರ್ವಹಿಸುತ್ತಿರುವ ಬೈಯೋಮೆಡಿಕಲ್ ತ್ಯಾಜ್ಯ ಸೌಲಭ್ಯಕ್ಕೆ ಭೇಟಿ ನೀಡಿದರು.
ಇದು 20 ವರ್ಷಗಳಿಂದ ಯಶಸ್ವಿಯಾಗಿ ಚಾಲನೆಯಲ್ಲಿರುವ ಆಸ್ಪತ್ರೆ ತ್ಯಾಜ್ಯ ವಿಲೇವಾರಿ , ಸಂಸ್ಕರಣೆ,ಪ್ರತ್ಯೇಕತೆ ಮತ್ತು ಚಿಕಿತ್ಸಾ ಸೌಲಭ್ಯದ ಸಂಸ್ಥೆಯಾಗಿದ್ದು ಇಡೀ ದೇಶದಲ್ಲಿ ವೈದ್ಯರೇ ಹುಟ್ಟುಹಾಕಿ ನಡೆಸುತ್ತಿರುವ ಬೆರಳೆಣಿಕೆಯ ಸಂಸ್ಥೆಗಳಲ್ಲೊಂದಾಗಿದೆ.
ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆಯನ್ನು ಶುಶ್ರುತ ಸಮಿತಿಯ ಅಧ್ಯಕ್ಷರಾದ ಡಾ. ಪ್ರಶಾಂತ್ ಇಸ್ಲೂರ್, ಕಾರ್ಯದರ್ಶಿ ಡಾ. ಗಿರೀಶ್ ಮತ್ತು ಡಾ. ವಿನಿತ್ ಆನಂದ್ ಅವರು ವಿವರವಾಗಿ ಎಲ್ಲ ಐಎಂಎ ಸದಸ್ಯರಿಗೆ ತಿಳಿಸಿದರು.
Indian Medical Association ತ್ಯಾಜ್ಯವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರ್ವಹಣೆ ಮತ್ತು ಬೇಕಾದಲ್ಲಿ ಸಂಸ್ಕರಿಸಿದ ನೀರು ಹಾಗು ಪ್ಲಾಸ್ಟಿಕ್ ಮರುಬಳಕೆಯ ಪ್ರಕ್ರಿಯೆಯು ಬಹಳ ಚೆನ್ನಾಗಿ ಮೂಡಿಬರುತ್ತಿದ್ದು , ಸದಸ್ಯರಿಂದ ಮೆಚ್ಚುಗೆ ಪಡೆಯಿತು.
ಈ ಉಪಯುಕ್ತ ಚಟುವಟಿಕೆಯಲ್ಲಿ ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ , ಕಾರ್ಯದರ್ಶಿ ಡಾ . ರಕ್ಷಾ ರಾವ್ , ಉಪಾಧ್ಯಕ್ಷರಾದ ಡಾ.ರವೀಶ್ ,ಡಾ . ಶಂಭುಲಿಂಗ ಹಾಗು ಹಿರಿಯ ಕಿರಿಯ ಸದಸ್ಯರು ಭಾಗಿಯಾಗಿದ್ದರು .