Sunday, December 14, 2025
Sunday, December 14, 2025

Homestays in Chikmagalur ಹೋಂ ಸ್ಟೇ ಪರವಾನಗಿಯನ್ನ ಹಿಂದಿನ ಪದ್ಧತಿಯಂತೇ ಮುಂದುವರೆಸಲುಮನವಿ

Date:

Homestays in Chikmagalur ಚಿಕ್ಕಮಗಳೂರು, ಹೋಂ ಸ್ಟೇ ಕಟ್ಟಡಗಳ ಪರವಾನಗಿಯನ್ನು ಹಿಂದಿನ ಪದ್ಧತಿಯ ಪ್ರಕಾರ ಮಾಲೀಕರಿಂದ ನಮೂನೆ 11 ಬಿ ಯನ್ನು ತೆಗೆದುಕೊಂಡು ಹೋಂ ಸ್ಟೇ ಪರವಾನಗಿಯನ್ನು ನವೀಕರಿಸಿಕೊಡಬೇಕು ಎಂದು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಈ ವೇಳೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್.ತೇಜಸ್ವಿ ಹೋಂಸ್ಟೇ ಕಟ್ಟಡಗಳಿಗೆ ಪಂಚಾ ಯತಿ ವತಿಯಿದ ತೆರಿಗೆ ಇಡೀ ಜಿಲ್ಲೆಯಲ್ಲಿ ಎಲ್ಲಾ ಹೋಂಸ್ಟೇ ಕಟ್ಟಡಗಳಿಗೆ ಏಕರೂಪ ತೆರಿಗೆಯಾಗಿ ವಿಧಿಸಬೇಕು, ಪರವಾನಗಿಯ ನವೀಕರಣದ ವಿಧಾನವನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಿದರು.

ಹೋಂಸ್ಟೇಗಳಿಗೆ ಮೂಲ ಸೌಕರ್ಯಗಳಾದ ಉತ್ತಮ ರಸ್ತೆಗಳು, ತಡೆರಹಿತ ವಿದ್ಯುಚ್ಚಕ್ತಿ ಹಾಗೂ ನೀರಿನ ಸರಬರಾಜು ಒದಗಿಸಬೇಕು. ವ್ಯವಸಾಯೇತರ ಚಟುವಟಿಕೆ ಎಂದು ಪರಿಗಣಿಸಿ ಮತ್ತು ಹೋಂಸ್ಟೇಗಳನ್ನು ಅನ್ಯಕ್ರಾಂತ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.

Homestays in Chikmagalur ಲಕ್ಜುರಿ ಟಾಕ್ಸ್ನಿಂದ ವಿನಾಯಿತಿ ಮತ್ತು ವಿದ್ಯುಚ್ಚಕ್ತಿ ಬಿಲ್ಲನ್ನು ಗೃಹ ಬಳಕೆ ದರದಲ್ಲಿ ಕಟ್ಟಬೇಕೆಂದು ಯೋಜನೆ ಯುನ್ನು ರೂಪಿಸಲಾಗಿರುತ್ತದೆ. ಆದ್ದರಿಂದ, ಸರ್ಕಾರದ ಸುತ್ತೋಲೆಯ ಪ್ರಕಾರ ಹೋಂಸ್ಟೇ ಘಟಕವನ್ನು ವ್ಯವಸಾಯೇತರ ಚಟುವಟಿಕೆ ಎಂದು ಪರಿಗಣಿಸಬೇಕು ಎಂದು ಹೇಳಿದರು.

ಈ ಸುತ್ತೋಲೆಗಳ ಪ್ರಕಾರ ಹೋಂಸ್ಟೇ ಮಾಲೀಕರು ಅನೇಕ ವರ್ಷಗಳಿಂದ ನಡೆಸುತ್ತಿದೆ. ಸದರಿ ಪರವಾನಗಿ ಗಳು ಈಗಾಗಲೇ ನಾಲ್ಕು ಬಾರಿ ನವೀಕರಣವಾಗಿತ್ತದೆ. ಆದರೆ ಕೆಲವು ಹೋಂಸ್ಟೇಗಳ ಪರವಾನಗಿ ನವೀಕರಣಕ್ಕೆ ಸಲ್ಲಿಸಿದ್ದು ಜಿಲ್ಲಾಧಿಕಾರಿ ಕಚೇರಿಯು ಪರವಾನಗಿಗಳಣ್ನು ನವೀಕರಿಸಬೇಕಾದರೆ ಹೋಂಸ್ಟೇ ಜಾಗವನ್ನು ಕಡ್ಡಾಯ ವಾಗಿ ಅನ್ಯಕ್ರಾಂತ ಮಾಡಬೇಕು ಸೂಚಿಸಿರುವ ಪರಿಣಾಮ ಸಮಸ್ಯೆಯಾಗಿದೆ ಎಂದರು.

ಆದ್ದರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದೇನೆಂದರೆ ಹೋಂಸ್ಟೇ ಕಟ್ಟಡಗಳ ಪರವಾನಗಿಯನ್ನು ಹಿಂದಿನ ಪದ್ಧತಿಯ ಪ್ರಕಾರ ಮಾಲೀಕರಿಂದ ನಮೂನೆ 11ಬಿ ಯನ್ನು ತೆಗೆದುಕೊಂಡು ಪರವಾನಗಿಯನ್ನು ನವೀಕರಿಸಿಕೊಡ ಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲಲಿ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಪಿ.ಪ್ರವೀಣ್, ಕಾರ್ಯದರ್ಶಿ ಅನ್ಸರ್ ಜೋಹುರ್, ಮುಖ್ಯಸ್ಥರಾದ ಹೊಲದಗದ್ದೆ ಗಿರೀಶ್, ಅಕ್ಷತ ಪ್ರಸನ್ನ, ಔರಂಗ್, ಸಚ್ಚಿನ್‌ರಾಜ್, ವರುಣ್, ವೇಣು, ಸಂದೇಶಗೌಡ, ಯು.ಪಿ.ಮನು, ತೇಜಸ್, ಜಗದೀಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Visvesvaraya Technological University ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಾಗಾರ

Visvesvaraya Technological University ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ "ಜ್ಞಾನ...

B.Y. Raghavendra ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಬಿ.ವೈ.ರಾಘವೇಂದ್ರ ಮನವಿ

B.Y. Raghavendra ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಸನ್ಮಾನ್ಯ ಡಾ....

CM Siddharamaih ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಭೆ

CM Siddharamaih ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ...