Sunday, August 2, 2026
Sunday, August 2, 2026

Indian Medical Association ಪರಿಶ್ರಮದಿಂದ ಗುರಿ ಮುಟ್ಟುವುದು ಖಂಡಿತ- ಡಾ.ಶಿವಾನಂದ ಕುಬ್ಸದ್

Date:

Indian Medical Association ಪರಿಶ್ರಮದಿಂದ ಗುರಿ ಮುಟ್ಟುವುದು ಖಂಡಿತ- ಡಾ.ಶಿವಾನಂದ ಕುಬ್ಸದ್ಐ ಎಂಎ ಕರ್ನಾಟಕದ ಕನ್ನಡ ವೈದ್ಯ ಬರಹಗಾರರ ಸಮಿತಿ, ಐಎಂಎ, ಶಿವಮೊಗ್ಗ, ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜು, ಜ್ಞಾನ ವಿಜ್ಞಾನ ಸಮಿತಿ ಮತ್ತು ಕ್ಷೇಮ ಟ್ರಸ್ಟ್, ಶಿವಮೊಗ್ಗದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಡಿವಿಎಸ್ ಕಾರ್ಯದರ್ಶಿ ಶ್ರೀ ರಾಜಶೇಖರ್ ಅವರು ಉದ್ಘಾಟಿಸಿದರು. ಡಾ ಶಿವಾನಂದ ಕುಬಸದ ಅವರು “ಫಲಿತಾಂಶ ಎಂಬ ಬೋನಸ್” ಕುರಿತು ಮಾತನಾಡಿದರು.

Indian Medical Association ವಿದ್ಯಾರ್ಥಿ ಜೀವನದಲ್ಲಿ ದಿನನಿತ್ಯ ನಾವು ಪಾಲಿಸುವಂತ ಪ್ರಕ್ರಿಯೆ ಸರಿಯಾಗಿದ್ದರೆ, ಕಡೆಯಲ್ಲಿ ಫಲಿತಾಂಶ ಎಂಬ ಬೋನಸ್ ಬಂದೇಬರುತ್ತದೆ. ಕೃತಿಯಲ್ಲಿ ಸಂಸ್ಕೃತಿ ಇರಬೇಕು. ಗುರಿ ಸ್ಪಷ್ಟವಿರಬೇಕು. ಪರಿಶ್ರಮ ಪಟ್ಟರೆ ಗುರಿ ಮುಟ್ಟುವುದು ಖಚಿತ. ಪರೀಕ್ಷೆಯಲ್ಲಿ ಯಶಸ್ವಿಯಾಗುವುದಷ್ಟೇ ಅಲ್ಲ, ಜೀವನದಲ್ಲಿ ಯಶಸ್ಸು ಗಳಿಸುವುದೂ ಮುಖ್ಯ ಎಂದು ಹೇಳಿದರು.

ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅವರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇಮ ಟ್ರಸ್ಟ್ ಅಧ್ಯಕ್ಷರಾದ ಡಾ ಕೆ ಆರ್ ಶ್ರೀಧರ್ ವಹಿಸಿದ್ದರು.

ಪ್ರೊಫೆಸರ್ ಸತ್ಯನಾರಾಯಣ, ಶ್ರೀಮತಿ ಲಕ್ಷ್ಮೀದೇವಿ, ಡಾ ರಕ್ಷಾ ರಾವ್, ಡಾ ಕೆಎಸ್ ಶುಭ್ರತಾ ಮತ್ತು ಡಾ ವಿನಯಾ ಶ್ರೀನಿವಾಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...