Sunday, June 22, 2025
Sunday, June 22, 2025

Department of Youth Empowerment and Sports ಅಪ್ಪಂದಿರ ದಿನ ಮಕ್ಕಳು ಹೆತ್ತವರ ಸಂಭ್ರಮ ಉತ್ಸಾಹ ಇಮ್ಮಡಿಸಿದೆ- ಡಿ.ಎಸ್.ಅರುಣ್

Date:

Department of Youth Empowerment and Sports ವಿಶ್ವ ಅಪ್ಪಂದಿರ ದಿನಾಚರಣೆ ಅಂಗವಾಗಿ, ನಗರದ ನೆಹರು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಕಾರದಲ್ಲಿ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿ ನಿರತರ ಸಂಘ ‘ಆವೋಪ’, ವಾಸವಿ ಮಹಿಳಾ ಸಂಘ ಮತ್ತು ವಾಸವಿ ಯುವಜನ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಪ್ಪ ಮತ್ತು ಮಕ್ಕಳಿಂದ ಗಾಳಿಪಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್ ರವರು ತಮ್ಮ ಪುತ್ರಿ ಸುಪ್ರಿತ ರೊಂದಿಗೆ ಪಾಲ್ಗೊಂಡು ಗಾಳಿಪಟ ಹಾರಿಸುವುದರ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿದರು.

ಸಾರ್ವಜನಿಕವಾಗಿ ಏರ್ಪಡಿಸಲಾಗಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಅಪ್ಪ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

Department of Youth Empowerment and Sports ಈ ಸಂದಭ೯ದಲ್ಲಿ ಮಾತನಾಡಿದ ಅರುಣ್, ಇಂದಿನ ಬಿಡುವಿಲ್ಲದ ಸಮಯದಲ್ಲಿಯೂ ಸಹ ಇಷ್ಟೊಂದು ಮಂದಿ, ತಮ್ಮ ತಮ್ಮ ಮಕ್ಕಳೊಂದಿಗೆ ಭಾಗವಹಿಸಿರುವುದು ನಿಜಕ್ಕೂ ಗಮನಾಹ೯ ಸಂಗತಿ. ಮಕ್ಕಳೊಂದಿಗೆ ಅವರವರ ತಂದೆಯರು ಸಹ ಸಂಭ್ರಮ ಪಡುತ್ತಿರುವುದು, ಉತ್ಸಾಹವನ್ನು ಹೆಚ್ಚಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಉಪಾಧ್ಯಕ್ಷರು ರೋಟರಿ ಮಾಜಿ ಅಧ್ಯಕ್ಷರು ಆದ ಜಿ. ವಿಜಯಕುಮಾರ್ ಅವರು ವಿಶೇಷ ಅತಿಥಿಗಾಗಿ ಭಾಗವಹಿಸಿ, ಎಲ್ಲಾ ಸ್ಪರ್ದಾಳುಗಳಿಗೆ ಶುಭ ಕೋರಿ, ಆರ್ಯವೈಶ್ಯ ಸಮಾಜದವರು ಸಾರ್ವಜನಿಕರಿಗಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅನುಕರಣೀಯ ಎಂದರು.

ಆಯೋಜಕರಾದ ವಾಸವಿ ಮಹಿಳಾ ಸಂಘದ ಅಧ್ಯಕ್ಷರಾದ ರಾಧಿಕಾ ಜಗದೀಶ್,ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಈಶ್ವರ್ ಭೂದಾಳ್ ಹಾಗೂ ಅವೋಪ ಅಧ್ಯಕ್ಷರಾದ ಎಚ್. ಜಿ. ದತ್ತ ಕುಮಾರ್ ಹಾಗೂ ಆರ್ಯ ಸಮಾಜದ ಅನೇಕ ಗಣ್ಯರು ಮತ್ತು ಅನೇಕ ಸಾರ್ವಜನಿಕ ಮುಖಂಡರು ಭಾಗವಹಿಸಿದ್ದರು.

ಅಪ್ಪ ಮಗ ವಿಭಾಗದಲ್ಲಿ ಯುವಜನ ಸೇವಾ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಮತ್ತು ಅದ್ವೈತ್ ಕ್ರಿಯಾಂಶ ಇವರಿಗೆ ಹಾಗೂ ಅತ್ಯಾಕರ್ಷಕ ಗಾಳಿಪಟ ವಿಭಾಗದಲ್ಲಿ ರಾಜೇಶ್ ಮತ್ತು ಸಿಂಧು ಹಾಗೂ ಅತಿ ಎತ್ತರಕ್ಕೆ ಹಾರಿದ ಗಾಳಿಪಟ ವಿಭಾಗದಲ್ಲಿ ಇಸ್ಮಾಯಿಲ್ ಮತ್ತು ಸೈಯದ್ ಪೈಜಾನ್ ಹಾಗೂ ಅತಿ ದೂರಕ್ಕೆ ಹಾರಿದ ಗಾಳಿಪಟ ವಿಭಾಗದಲ್ಲಿ ಸತೀಶ್ ಮತ್ತು ವಿಸ್ಮಿತ್ ಇವರುಗಳಿಗೆ ನಗದು ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...