Karnataka Minorities Development Corporation ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿಗೆ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಆಂಗ್ಲೋಇಂಡಿಯನ್ ಸಮುದಾಯದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಹೊಸ/ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳಾದ ಎಂಬಿಬಿಎಸ್, ಬಿ.ಇ., ಡೆಂಟಲ್, ಮೆಡಿಕಲ್, ಬಿಡಿಎಸ್, ಆಯುಷ್, ಆರ್ಟಿಟೆಕ್ಚರ್, ಟೆಕ್ನಾಲಜಿ ಕೋರ್ಸ್, ಅಗ್ರಿಕಲ್ಚರ್ ಸೈನ್ಸ್, ವೆರ‍್ನರಿ ಮತ್ತು ಫಾರಂ ಸೈನ್ಸ್ ಕೋರ್ಸುಗಳಿಗೆ ಅರಿವು ಶೈಕ್ಷಣ ಕ ಸಾಲ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
Karnataka Minorities Development Corporation ಆಸಕ್ತರು ಅರ್ಜಿಯನ್ನು ಇಲಾಖೆಯ ವೆಬ್‌ಸೈಟ್ ನಲ್ಲಿ ನೋಡಬಹುದು. ಭರ್ತಿ ಮಾಡಿದ ಅರ್ಜಿಯ ಪ್ರಿಂಟೌಟನ್ನು ತೆಗೆದುಕೊಂಡು ಆದಾಯ ಪ್ರಮಾಣ ಪತ್ರ (೮ ಲಕ್ಷದೊಳಗಿರಬೇಕು), ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ/ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಶುಲ್ಕ ರಸೀದಿ,ಆಧಾರ್‌ಕಾರ್ಡ್, ರೇಷನ್‌ಕಾರ್ಡ್, ವಿಧ್ಯಾರ್ಥಿ/ಪೋಷಕರ ಫೋಟೋ,ಸಿಇಟಿ/ನೀಟ್ ಹಾಲ್‌ಟಿಕೇಟ್‌ಗಳನ್ನು, ನೋಟರಿಯಾಗಿರುವ ನಷ್ಟಪರಿಹಾರ ಬಾಂಡ್, ವಿಧ್ಯಾರ್ಥಿ/ಪೋಷಕರ ಸ್ವಯಂ ಘೋಷಣಾ ಪತ್ರ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಚ್ಯುತ್‌ರಾವ್ ಲೇಔಟ್, 4ನೇ ತಿರುವು, ನಂಜಪ್ಪ ಆಸ್ಪತ್ರೆ ಮುಂಭಾಗ, ಶಿವಮೊಗ್ಗ ಇಲ್ಲಿ ದಿ: 10/07/2023ರೊಳಗಾಗಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ.: 08182- 228262ನ್ನು ಸಂಪರ್ಕಿಸಬಹುದಾಗಿದೆ.