Red Cross Sanjeevini Blood Bank ಜನಸಂಖ್ಯೆ ಹೆಚ್ಚಾದಂತೆ, ಅಪಘಾತಗಳು, ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಉಂಟಾಗುತ್ತಿದೆ ಎಂದು ವಿಶ್ವರಕ್ತದಾನಿಗಳ ದಿನವನ್ನು ರೆಡ್ ಕ್ರಾಸ್ ರಕ್ತ ಸಂಜೀವಿನಿ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿದ ಶಿವಮೊಗ್ಗ ಭಾವನ ಹಾಗೂ ಸೀನಿಯರ್ ಚೇಂಬರ್ ಅಧ್ಯಕ್ಷೆ ರೇಖಾಮುರುಳೀದರ್ ಮಾತನಾಡುತ್ತಿದ್ದರು.
ಎಲ್ಲಾ ದಾನಗಳಿಗಿಂತ ಇಂದು ರಕ್ತದಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ರಕ್ತದ ಕೊರತೆ ತೀವ್ರವಾಗಿ ಹೆಚ್ಚುತ್ತಿದ್ದು, ಜೀವಕ್ಕೆ ಜೀವ ಕೊಡುವ ರಕ್ತವನ್ನು ಮಹಿಳೆಯರು ಕೊಡಬಹುದು ಎಂದು ತೋರಿಸಿಕೊಟ್ಟು ಜನಸಾಮಾನ್ಯರಿಗೆ ಮಾರ್ಗ ದರ್ಶಕರಾಗಿರುವ ಮಹಿಳೆಯರನ್ನು ಇಂದು ಗುರ್ತಿಸಿ ಗೌರವಿಸಲಾಗಿದೆ. ಇದನ್ನು ಇಂದಿನ ಯುವತಿಯರು ಗಮನಿಸಿ, ರಕ್ತದಾನಕ್ಕೆ ಮುಂಚೋಣಿಗೆ ಬರಬೇಕೆಂದರು.
Red Cross Sanjeevini Blood Bank ಸನ್ಮಾನಿತರ ಪರವಾಗಿ ಮಾತನಾಡಿದ ಪ್ರೋ.ಡಾ.ಅಶ್ವಿನಿ ಗಂಡಸರಿಗೆ ಸರಿ ಸಮನಾಗಿ ಇಂದಿನ ಮಹಿಳೆಯರು ಸ್ವರ್ಧಾಕಣದಲ್ಲಿ ಇದ್ದು ರಕ್ತದಾನದಲ್ಲಿ ಮಾತ್ರ ಸ್ವಲ್ಪ ಹಿಂದುಳಿದ್ದಿದ್ದಾರೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಮತ್ತು ಹೊಸ ಚೈತನ್ಯ ದೊರಕುತ್ತದೆ. ಯುವತಿಯರು ರಕ್ತದಾನ ಮಾಡುವ ಮೂಲಕ ಕೊರತೆಯನ್ನು ನೀಗಿಸಬೇಕೆಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಈ ಸಭೆಯಲ್ಲಿ ಎಂ.ಸುರೇಶ್, ಆರ್.ಗಿರೀಶ್, ಕೆ.ಸಿ.ಬಸವರಾಜ್ ಭಾವನ ಜೇಸಿಯ ಸದಸ್ಯೆಯರು ಇದ್ದರು. ದರಣೇಂದ್ರ ದಿನಕರ್ ಸ್ವಾಗತಿಸಿ, ಜಿ.ವಿಜಯಕುಮಾರ್ ನಿರೂಪಿಸಿ, ಲಕ್ಷ್ಮೀರುದ್ರೇಶ್ ಎಲ್ಲರಿಗೂ ವಂದಿಸಿದರು
Red Cross Sanjeevini Blood Bank ರಕ್ತದ ಕೊರತೆ ತೀವ್ರವಾಗಿದೆ ಮಹಿಳೆಯರು ರಕ್ತದಾನಿಗಳಾಗಿರುವುದು ಶ್ಲಾಘನೀಯ- ರೇಖಾ ಮುರಳೀಧರ್
Date: