Friday, November 22, 2024
Friday, November 22, 2024

KLive Special Article ಮನಸ್ಸಿನಿಂದ ಮನಸ್ಸಿಗೆ

Date:

ಒರಿಸ್ಸಾದ ರೈಲು ದುರಂತ,
ಅಂದು ಇಂದು ಮುಂದು………..

KLive Special Article ಜಗತ್ತನ್ನು ಸದಾ ಕಾಡುವ ಪ್ರಾಕೃತಿಕ ಮತ್ತು ತಾಂತ್ರಿಕ ಅವಘಡಗಳು. ಬದುಕಿನ ಅನಿವಾರ್ಯ ಆಕಸ್ಮಿಕ ಅನಾಹುತಗಳು……

ವಿಶ್ವದ ಯಾವ ದೇಶಗಳು ಇದರಿಂದ ಮುಕ್ತವಾಗಿಲ್ಲ. ಬಿಸಿಲು ಮಳೆ ಬಿರುಗಾಳಿ ಶೀತಗಾಳಿ ಚಂಡಮಾರುತ ಭೂಕಂಪ ಪ್ರವಾಹ ಬರ ಜ್ವಾಲಾಮುಖಿ ಹಿಮ ಕುಸಿತ ಮೇಘ ಸ್ಪೋಟ ಕಾಳ್ಗಿಚ್ಚು ಭೂಕುಸಿತ ಹೀಗೆ ಇನ್ನೂ ಕೆಲವು ಪ್ರಾಕೃತಿಕ ಅನಾಹುತಗಳು ಜೀವ ಜಗತ್ತು ಅನುಭವಿಸಬೇಕಾದ ಅನಿವಾರ್ಯ ಆಪತ್ತುಗಳು.

ಇದನ್ನು ಹೊರತುಪಡಿಸಿ ಸ್ವಯಂಕೃತಾಪರಾಧದಿಂದ ಜೀವಲೋಕ ನರಳುವುದು ಯುದ್ದ ಹೊಡೆದಾಟ ಅಪಘಾತ ಅನಾರೋಗ್ಯ ಆತ್ಮಹತ್ಯೆ ಬಾಂಬು ಬಂದೂಕು ಅಣು ವಿಕಿರಣಗಳು ವಿಷ ಪ್ರಾಷನ ಕೊಲೆ ಕೋಮು ಗಲಭೆಗಳು ಭಯೋತ್ಪಾದನೆ ಮುಂತಾದವು ಸೇರುತ್ತದೆ. ಇದರಲ್ಲಿ ಒಂದಷ್ಟು ತಾಂತ್ರಿಕ ದೋಷಗಳು ಮತ್ತೊಂದಿಷ್ಟು ನಿರ್ಲಕ್ಷ್ಯಗಳು ಕೆಲವು ವಿದ್ವಂಸಕ ಕೃತ್ಯಗಳು ಸೇರಿರುತ್ತದೆ.

ಅಪಘಾತಗಳನ್ನು – ಆಕಸ್ಮಿಕಗಳನ್ನು ತಡೆಯಲು ತಂತ್ರಜ್ಞಾನ ಉಪಯೋಗಿಸಿಕೊಂಡು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಆದರೂ ಅದರಿಂದ ಸಂಪೂರ್ಣ ಮುಕ್ತರಾಗಲು ಸಾಧ್ಯವಾಗಿಲ್ಲ.

ರಷ್ಯಾದ ಚರ್ನೋಬಿಲ್ ಅಣು ದುರಂತ, ಭೋಪಾಲ್ ಕಾರ್ಬೈಡ್ ಗ್ಯಾಸ್ ದುರಂತ, ಅನೇಕ ವಿಮಾನ ರೈಲು ಬಸ್ಸು ಗಣಿ ದುರಂತಗಳು ಈಗಲೂ ವಿಶ್ವದ ಮೂಲೆ ಮೂಲೆಗಳಿಂದ ಸುದ್ದಿಯಾಗುತ್ತಲೇ ಇದೆ.

ಇತ್ತೀಚಿನ ಒರಿಸ್ಸಾದ ರೈಲು ದುರಂತ ಸಾಕಷ್ಟು ನೋವು ನೀಡಿದ ಘಟನೆ. ಹಾಗೆಯೇ ಉಕ್ರೇನ್ ಜಲಾಶಯ ಸ್ಪೋಟ ಸಹ ಅತ್ಯಂತ ಗಂಭೀರ ದುರ್ಘಟನೆ.

ವಿಧ್ವಂಸಕ ಮತ್ತು ನಿರ್ಲಕ್ಷ್ಯದ ಕೃತ್ಯಗಳನ್ನು ಹೊರತುಪಡಿಸಿದ ಎಲ್ಲಾ ಅಪಘಾತಗಳನ್ನು ಸಹಜ ಘಟನೆಗಳು ಮತ್ತು ಸ್ವಾಭಾವಿಕ ಸಾವುಗಳು ಎಂದೇ ನಾವು ಮನಸ್ಸಿಗೆ ಒಪ್ಪಿಸಬೇಕು. ಏಕೆಂದರೆ ಅದರ ನಿಯಂತ್ರಣ ನಮ್ಮ ಕೈ ಮೀರಿರುತ್ತದೆ.

ಬದುಕೊಂದು ಚಲಿಸುವ ನಿರಂತರ ಪ್ರಕ್ರಿಯೆ. ‌ಸುಮ್ಮನೆ ನಿಂತ ನೆಲೆಯಲ್ಲಿಯೇ ನಿಲ್ಲಲು ಸಾಧ್ಯವಿಲ್ಲ. ಮುಂದುವರಿಯುತ್ತಲೇ ಇರಬೇಕು. ಹಾಗೆ ಮುಂದುವರಿಯ ಬೇಕಾದರೆ ಸವಾಲುಗಳನ್ನು ಎದುರಿಸುವುದು ಅನಿವಾರ್ಯ. ಆ ಸವಾಲುಗಳಲ್ಲಿ ಅಪಘಾತಗಳು ಸಹ ಒಂದು ಭಾಗ.

” ನಡೆಯುವವರು ಎಡವದೆ ಕುಳಿತಿರುವವರು ಎಡವುವರೇ ” ಎಂಬ ಮಾತಿನಂತೆ ಚಲನೆಯಲ್ಲಿ ಅಪಘಾತಗಳು ಸಹಜ. ಅಪಘಾತಗಳು ಆಗುತ್ತವೆ ಎಂದು ಮನೆಯೊಳಗೇ ಕುಳಿತಿರಲು ಸಾಧ್ಯವಿಲ್ಲ. ಸಾಧ್ಯವಿರುವ ಎಚ್ಚರಿಕೆಯೊಂದಿಗೆ ಮುಂದುವರಿಯಲೇ ಬೇಕು.

ಒರಿಸ್ಸಾದ ರೈಲು ದುರಂತದಲ್ಲಿ ಸುಮಾರು ‌300 ಜನರು ತೀರಿಕೊಂಡು ಸಾವಿರ ಜನರು ಗಾಯಗೊಂಡ‌ ಸಂದರ್ಭದಲ್ಲಿ ಮನಸ್ಸು ತುಂಬಾ ಘಾಸಿಗೊಂಡಾಗ ಸಾಮಾನ್ಯ ಜನರಾದ ನಮ್ಮ ಪ್ರತಿಕ್ರಿಯೆ ಹೇಗೆ ಮತ್ತು ಆ ಸನ್ನಿವೇಶದಲ್ಲಿ ನಾವು ಮಾಡಬಹುದಾದದ್ದು ಏನು ಎಂದು ಯೋಚಿಸಿದಾಗ ಸ್ವಲ್ಪ ಮಾನವೀಯ ಸ್ಪಂದನೆ ಅಥವಾ ಅವಕಾಶ ಇರುವವರು ನೊಂದವರಿಗೆ ಸ್ವಲ್ಪ ಆರ್ಥಿಕ ಸಹಾಯ ಮಾಡುವುದು ಬಿಟ್ಟರೆ ಹೆಚ್ಚಿನ ಹೊಣೆಗಾರಿಕೆ ನಿರ್ವಹಿಸಲು ಸಾಧ್ಯವಿಲ್ಲ ಎನಿಸಿತು.

KLive Special Article ಕಾರಣ ಅಪಘಾತಗಳು ಕೂಡಾ ಈ ಸಮಾಜದಲ್ಲಿ ಅನಿವಾರ್ಯ ಆಕಸ್ಮಿಕಗಳು ಎಂದೇ ಭಾವಿಸಬೇಕು. ಏಕೆಂದರೆ ಬದುಕಿನ ಚಲನೆಯಲ್ಲಿ ತಂತ್ರಜ್ಞಾನದ ಅವಲಂಬನೆಯಿಂದ ಅನುಭವಿಸುವುದು ಕೇವಲ ಸುಖ – ಆರಾಮ ಮಾತ್ರವಾಗಿರದೆ ಅದರ ಕಷ್ಟ – ನೋವುಗಳನ್ನು ಸ್ವೀಕರಿಸಬೇಕು. ನಿರ್ಲಕ್ಷ್ಯ ತಾಂತ್ರಿಕ ದೋಷ ವಿದ್ವಂಸಕ ಕೃತ್ಯಗಳಿದ್ದಲ್ಲಿ ಅದನ್ನು ಎಚ್ಚರಿಕೆಯಿಂದ ಸರಿಪಡಿಸಿಕೊಂಡು ಮುಂದುವರಿಯಲೇ ಬೇಕು. ಸಂಪೂರ್ಣ ನಿಯಂತ್ರಣ ಅಸಾಧ್ಯ.

ರೈಲು ಬಸ್ಸು ವಿಮಾನ ಕಾರು ದ್ವಿಚಕ್ರ ವಾಹನ ಪ್ರಯಾಣದಲ್ಲಿ ಅಷ್ಟೇ ಏಕೆ ರಸ್ತೆಯಲ್ಲಿ ನಡೆದಾಡುವಾಗ ಸಹ ಇತರ ವಾಹನ ಅನಿರೀಕ್ಷಿತವಾಗಿ ಬಂದು ನಮಗೆ ಘಾಸಿ ಮಾಡಿದರೆ ನಾವು ಮಾಡಬಹುದಾದದ್ದು ಏನೂ ಇಲ್ಲ.

ಇಡೀ ವಿಶ್ವದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಅಪಘಾತಗಳಲ್ಲಿ ಸಾಯುತ್ತಾರೆ. ಕೆಲವೊಮ್ಮೆ ಸಾವಿನ ಸಂಖ್ಯೆಗಳಲ್ಲಿ ಮತ್ತು ಅಪಘಾತಗಳ ತೀವ್ರತೆಯಲ್ಲಿ ಒಂದಷ್ಟು ವ್ಯತ್ಯಾಸವಾಗಬಹುದೇ ಹೊರತು ಅದು ಆಧುನಿಕ ಜಗತ್ತಿನ ಅನಿವಾರ್ಯ ಆಕಸ್ಮಿಕ……..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.


ವಿ.ಲೇ : ವಿವೇಕಾನಂದ ಎಚ್.ಕೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...