Saturday, December 6, 2025
Saturday, December 6, 2025

Boating Excursion at Sakrebailu Elephant Camp ಈಗ ಆನೆಬಿಡಾರದಲ್ಲಿ ಬೋಟಿಂಗ್ ವಿಹಾರ ಸೇರ್ಪಡೆ

Date:

Boating Excursion at Sakrebailu Elephant Camp ಶಿವಮೊಗ್ಗ ಜಿಲ್ಲೆ ಐತಿಹಾಸಿಕ ಸ್ಥಳ. ಮಲೆನಾಡಿನ ನಿಸರ್ಗ ಸೌಂದರ್ಯದಲ್ಲಿ ತುಂಬಿ ತುಳುಕುತ್ತಿದೆ. ಮಲೆನಾಡಿನ ಹೆಬ್ಬಾಗಿಲಂತಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅವುಗಳು ಪ್ರವಾಸಿಗರನ್ನ ಸದಾ ತನ್ನತ್ತ ಸೆಳೆಯುತ್ತಲೇ ಇವೆ… ಇಲ್ಲಿನ ಪ್ರಕೃತಿ ಸೊಬಗು ಎಂಥವರನ್ನು ಕೂಡ ತನ್ನತ್ತ ಸೆಳೆದುಬಿಡುತ್ತದೆ…

ಶಿವಮೊಗ್ಗ ಜಿಲ್ಲೆಯ ಅನೇಕ ಪ್ರವಾಸಿ ತಾಣಗಳಲ್ಲಿ ಒಂದಲ್ಲ ಒಂದು ಆಕರ್ಷಣೆಗಳು ಸೇರ್ಪಡೆ ಯಾಗುತ್ತಿವೆ.. ಈ ನಿಟ್ಟಿನಲ್ಲಿ ಸಕ್ರೆ ಬೈಲು ಆನೆ ಬಿಡಾರದಲ್ಲಿ ಒಂದು ವಿಶಿಷ್ಟ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೌದು… ಈ ಸ್ಥಳಕ್ಕೆ ಇನ್ನಷ್ಟು ಪ್ರವಾಸಿಗರನ್ನ ಆಕರ್ಷಿಸಲು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಇದರ ವತಿಯಿಂದ ನೂತನವಾಗಿ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ತುಂಗಾ ಆಣೆಕಟ್ಟಿನ ಹಿನ್ನೀರಿನಲ್ಲಿ ನೀವು ಬೋಟಿಂಗ್ ವಿಹಾರ ಅನಂದಿಸಬಹುದಾಗಿದೆ. ಪ್ರವಾಸಿಗರು ಸಕ್ರೆ ಬೈಲು ಆನೆ ಬಿಡಾರವನ್ನು ವೀಕ್ಷಿಸಲು ಬಂದಾಗ, ಮತ್ತಷ್ಟು ಮನಸ್ಸಿಗೆ ಮುದ ನೀಡಲು ಈ ಸೌಕರ್ಯ ಇದೆ.

Boating Excursion at Sakrebailu Elephant Camp ಜಲ ಕ್ರೀಡೆ ಆಟಗಾರರಿಗೆ ಈ ಪ್ಲೇಸ್ ತುಂಬಾ ಇಷ್ಟವಾಗುತ್ತದೆ. ಬೋಟಿಂಗ್ ನಲ್ಲಿ ವಿಹರಿಸುತ್ತಾ ಸುತ್ತಲೂ ನೋಡಿದರೆ ನಿಸರ್ಗದ ಚೆಲುವು ಅತ್ಯಂತ ಮನಮೋಹಕವಾಗಿರುತ್ತದೆ…

ನೀವು ಸಕ್ರೆಬೈಲು ಆನೆ ಬಿಡಾರಕ್ಕೆ ಹೋದಾಗ ಮರೆಯದೆ ಈ ಬೋಟಿಂಗ್ ನಲ್ಲಿ ತೆರಳಿ ನಿಸರ್ಗದ ಚಲುವನ್ನು ಕಣ್ತುಂಬಿಕೊಳ್ಳಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...