Wednesday, July 9, 2025
Wednesday, July 9, 2025

Makonahalli Cooperative Bank ಮಾಕೋನಹಳ್ಳಿ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಸಂದೀಪ್ ನಂದಿಪುರ ಆಯ್ಕೆ

Date:

Makonahalli Cooperative Bank ಮೂಡಿಗೆರೆ, ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ವಿ.ಸಂದೀಪ್ ನಂದೀಪುರ ಹಾಗೂ ಉಪಾಧ್ಯಕ್ಷರಾಗಿ ವಾಜೀದ್ ಅಹ್ಮದ್ ಅವರು ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳ ಪೈಕಿ 7 ಮತಗಳನ್ನು ಎನ್.ವಿ. ಸಂದೀಪ್‌ನAದೀಪುರ ಹಾಗೂ ವಾಜೀದ್ ಅಹ್ಮದ್ ಪಡೆದುಕೊಂಡ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗುರುಮೂರ್ತಿರವರು ಅಧಿಕೃತವಾಗಿ ಆಯ್ಕೆಯನ್ನು ಶುಕ್ರವಾರ ಘೋಷಿಸಿದರು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಎನ್.ವಿ.ಸಂದೀಪ್ ನಂದೀಪುರ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರ ಪಡೆದುಕೊಳ್ಳುವ ಮೂಲಕ ರೈತರಿಗೆ ಅನುಕೂಲವಾಗುವಂತಹ ವ್ಯಾಪಾರ, ವಾಹನ ಹಾಗೂ ಸ್ವಂತ ಬಂಡವಾಳ ಸಾಲವನ್ನು ವಿತರಿಸಿ ಸಂಘದ ಬೆಳವಣಿಗೆಗೆ ಸಹಕರಿಸಲಾಗುವುದು ಎಂದರು.

ಸಂಘದ ನೂತನ ಕಟ್ಟಡ ನಿರ್ಮಾಣ ಸಂಬಂಧ ಈ ಹಿಂದೆ ಒಂದು ಹಂತದ ಕಾಮಗಾರಿಯನ್ನು ಪೂರೈಸಲಾಗಿದೆ. ಉಳಿದ ಕಟ್ಟಡದ ಕಾಮಗಾರಿಗೆ ತಮ್ಮ ಅವಧಿಯಲ್ಲಿ ಶ್ರಮವಹಿಸುವ ಮೂಲಕ ಪೂರ್ಣ ಗೊಳಿಸುವ ಕಾರ್ಯಕ್ಕೆ ಮುಂದಾಗಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ಸದಸ್ಯರ ಸರ್ವಮತ ದೊಂದಿಗೆ ಸಂಘದ ಅಭೀವೃದ್ದಿಗೆ ಶ್ರಮಿವಹಿಸಲಾಗುವುದು ಎಂದು ಭರವಸೆ ನೀಡಿದರು.

ನೂತನ ಉಪಾಧ್ಯಕ್ಷ ವಾಜೀದ್ ಅಹ್ಮದ್ ಮಾತನಾಡಿ ತನ್ನ ಆಯ್ಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕ ರಿಸಿದ ಸಂಘದ ನಿರ್ದೇಶಕರು ಹಾಗೂ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್‌ಅಜಿತ್‌ಕುಮಾರ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂದೀಪ್ ಅವರ ಸ್ವಗೃಹಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.

Makonahalli Cooperative Bank ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಜಿ.ಯು.ಚಂದ್ರೇಗೌಡ, ಇಕ್ಬಾಲ್ ಅಹ್ಮದ್, ಐ.ಯು.ನಂಜೇ ಗೌಡ, ಪಿ.ಎಸ್.ಜಯರಾಮ್, ಬಿ.ಟಿ.ಮಂಜುಳಾ, ಕಾರ್ಯದರ್ಶಿ ಕೆ.ಜೆ.ಅಜಿತ್, ಸೂಪರ್‌ವೈಸರ್ ನಿತಿನ್ ಪಟೇಲ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ನವದೆಹಲಿಯಲ್ಲಿ”ಸಿಎಂ”ಸಿದ್ಧರಾಮಯ್ಯ ಅವರಿಂದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಭೇಟಿ

CM Siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಇಂದು ರಕ್ಷಣಾ ಸಚಿವ...

Rotary Club ರೋಟರಿ ಕ್ಲಬ್ ರಿವರ್ ಸೈಡ್ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಸನ್ಮಾನ

Rotary Club 24 ವರ್ಷಗಳಿಂದ ನಿರಂತರವಾಗಿ ಮನುಕುಲದ ಸೇವೆಯಲ್ಲಿ ಹಾಗೂ ಸಮಾಜಮುಖಿ...

Sitaramchandra Temple ಭಗವದ್ಗೀತೆಯ ಜ್ಞಾನದಿಂದ ಸಮಾಜದಲ್ಲಿ ಶಾಂತಿ & ಮಾನವೀಯತೆ ಸ್ಥಾಪನೆ- ಅಶೋಕ ಭಟ್

Sitaramchandra Temple ಭಗವದ್ಗೀತಾ ಜ್ಞಾನವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸರ್ವರೂ ಸಮಾನರಾಗಿ ಸಮಾಜದಲ್ಲಿ...

Congress Karnataka ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಇ.ಎನ್.ರಮೇಶ್

Congress Karnataka ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ...