Adolescent Attraction ಹದಿಹರೆಯದ ವಯಸ್ಸಿನಲ್ಲಿ ಮೂಡಿಬರುವಂತಹ ಆಕರ್ಷಣೆಗಳು ಕೇವಲ ಕ್ಷಣಿಕ ಸಮಯಕ್ಕೇ ಮಾತ್ರ ಸೀಮಿತವಾಗಿರುತ್ತದೆ. ಅವುಗಳಿಂದ ಹೊರಬರಲು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹೆಚ್ಚು ಕಡೆ ಹೆಚ್ಚು ಗಮನಹರಿಸಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಮಾನಸಿಕ ಆರೋಗ್ಯ ತಜ್ಞ ಡಾ. ಕೆ.ಎಸ್.ವಿನಯ್‌ಕುಮಾರ್ ಹೇಳಿದರು.
ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಡಿಪ್ಲೋಮೋ ಪ್ರಸಕ್ತ ಸಾಲಿನ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ‘ಬದುಕಿನ ಉತ್ತೇಜನ ನೀಡುವ ಕಾರ್ಯಕ್ರಮ’ದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಬದುಕಿನಲ್ಲಿ ಹಲವಾರು ಆಸೆ, ಆಕಾಂಕ್ಷಿಗಳನ್ನು ಹೊಂದಿ ಪ್ರಥಮ ಬಾರಿಗೆ ಕಾಲೇಜಿನ ಮೆಟ್ಟಿ ಲೇರಲಿದ್ದಾರೆ. ಇದರಲ್ಲಿ ಪ್ರೀತಿ, ಪ್ರೇಮ ಹೆಚ್ಚು ಸೆಳೆಯುವುದು ಸಹಜ. ಆದರೆ ಬದುಕಿನ ಜೊತೆ ಎಂದಿಗೂ ಆಟವನ್ನಾಡದೇ ಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದರೆ ಉನ್ನತ ಮಟ್ಟಕ್ಕೆ ಬೆಳೆದು ಸಾಧನೆ ಮಾಡಲು ಅನುಕೂಲ ವಾಗಲಿದೆ ಎಂದರು.
ಯೌವ್ವನಾವಸ್ಥೆಯಲ್ಲಿ ದೇಹದಲ್ಲಿ ಕೆಲ ಬದಲಾವಣೆ, ಯುವಕ-ಯುವತಿಯರ ನಡುವೆ ಆಕರ್ಷಣೆ ಸಹಜ. ಮನಸ್ಸನ್ನು ಅತ್ತ ಹರಿಬಿಡದೇ ಓದಿಗೆ ಮೊದಲ ಆದ್ಯತೆ ನೀಡಿ. ಓದು ಆಸಕ್ತಿದಾಯಕ ಎನಿಸಿದಾಗ ಅಭ್ಯಾಸ ಮಾಡಿ ದರೆ ಮಾತ್ರ ಓದಿದ್ದು ನೆನಪಿನಲ್ಲಿ ಉಳಿಯಲು ಸಾಧ್ಯ ಎಂದರು.
ಓದುತ್ತಿರುವ ಪಠ್ಯ ಬೇಜಾರಾದರೆ ವಿಷಯ ಬದಲಾವಣೆ ಮಾಡಿ. ಪರೀಕ್ಷೆಯಲ್ಲಿ ಕೊಠಡಿಯಲ್ಲಿ ಮನಸ್ಸು ಶಾಂತವಾಗಿದ್ದರೆ ಎಲ್ಲವೂ ನೆನಪಿಗೆ ಬರುತ್ತದೆ. ಯೋಗ ಪ್ರಾಣಾಯಾಮದಿಂದ ಮನಸ್ಸಿನ್ನು ಹತೋಟಿಗೆ ತೆರಲು ಸಾಧ್ಯ. ಯಾವ ವಿದ್ಯಾರ್ಥಿಗೂ ಮರೆವಿನ ಕಾಯಿಲೆ ಇರುವುದಿಲ್ಲ ಸರಿಯಾಗಿ ಅಭ್ಯಾಸ ಮಾಡದೆ ಮರೆತೆ ಎಂದು ಹೇಳುವುದು ನೆನಪವಾಗಬಾರದು ಎಂದು ಕಿವಿಮಾತು ಹೇಳಿದರು.
ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಟಿ.ಜಯದೇವ್ ಮಾತನಾಡಿ ಕಾಲೇಜಿನಲ್ಲಿ ಓದಿನ ಆಸಕ್ತಿ ಹೊಂದಿರು ವವರಿಗೆ ಎಲ್ಲಾ ಸೌಕರ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಅತಿಹೆಚ್ಚು ಉನ್ನತ ಸ್ಥಾನಕ್ಕೇರುವ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು ಎಂದರು.
Adolescent Attraction ಇದೇ ವೇಳೆ ಡಿಪ್ಲೋಮೋದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜಿನ ತಮ್ಮ ಅನುಭವವನ್ನು ಹಂಚಿಕೊಂಡರು. ನಂತರ ಡಿಪ್ಲೋಮೋದಲ್ಲಿ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್ ಹಾಗೂ ಕ್ರೀಡೆಯಲ್ಲಿ ಉತ್ತಮ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ ವಿಭಾಗದ ಪ್ರಾಂಶುಪಾಲ ಸಚ್ಚಿನ್, ಸಿಬ್ಬಂದಿ ಸಾಯಿನಂದನ್ ಮತ್ತಿತರರು ಹಾಜರಿದ್ದರು.