Institute of Medical Education ದೇಶದ ಎಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ‘ಎನ್‌ಇಇಟಿ- ಯುಜಿ’ ಮೆರಿಟ್ ಪಟ್ಟಿ ಆಧರಿಸಿ ಏಕರೂಪ ಕೌನ್ಸೆಲಿಂಗ್ ಆಯೋಜಿಸುವ ವಿಷಯವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ತನ್ನ ಹೊಸ ನಿಯಮಾವಳಿಯಲ್ಲಿ ಪ್ರಸ್ತಾಪಿಸಿದೆ.
ಈ ಕುರಿತು ಎನ್‌ಎಂಸಿ ಜೂನ್ 2ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಎನ್‌ಎಂಸಿ ಒದಗಿಸಿದ ಸೀಟ್ ಮ್ಯಾಟ್ರಿಕ್ಸ್ ಆಧರಿಸಿಯೇ ಈ ಕೌನ್ಸೆಲಿಂಗ್ ಇರುತ್ತದೆ. ಅಗತ್ಯವಿದ್ದಲ್ಲಿ ಕೌನ್ಸೆಲಿಂಗ್ ಹಲವು ಸುತ್ತುಗಳನ್ನು ಹೊಂದಿರಬಹುದು ಎಂದು ಅದು ತಿಳಿಸಿದೆ.
ಈ ಹೊಸ ನಿಯಮಗಳನ್ನು ವೈದ್ಯಕೀಯ ಪದವಿ ಶಿಕ್ಷಣ ನಿಯಮಗಳು (ಜಿಎಂಇಆರ್- 2023) ಎಂದು ಕರೆಯಲಾಗಿದೆ.
Institute of Medical Education ವೈದ್ಯಕೀಯ ಪದವಿ ಶಿಕ್ಷಣ ಮಂಡಳಿಯು (ಯುಜಿಎಂಇಬಿ) ಸಾಮಾನ್ಯ
ಕೌನ್ಸೆಲಿಂಗ್‌ನ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ.
ಸರ್ಕಾರ ನೇಮಿಸುವ ಪ್ರಾಧಿಕಾರವು ಈ ಮಾರ್ಗಸೂಚಿಗಳ ಅನ್ವಯವೇ ಕೌನ್ಸೆಲಿಂಗ್ ನಡೆಸುತ್ತದೆ. ಯಾವುದೇ ವೈದ್ಯಕೀಯ ಸಂಸ್ಥೆಗಳು ಈ ನಿಯಮಗಳಿಗೆ ವಿರುದ್ಧವಾ ವೈದ್ಯಕೀಯ ಪದವಿ ಶಿಕ್ಷಣ ಕೋರ್ಸ್‌ಗೆ ಪ್ರವೇಶಾತಿ ನೀಡುವಂತಿಲ್ಲ ಎಂದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.