Friday, June 19, 2026
Friday, June 19, 2026

Mangalore International Airport ಏರ್ ಇಂಡಿಯಾದಿಂದ ಎರಡನೇ ದೈನಂದಿನ ವಿಮಾನ ಹಾರಾಟ ಪ್ರಾರಂಭ

Date:

Mangalore International Airport ಏರ್ ಇಂಡಿಯಾ ವಿಮಾನ‌ಯಾನ ಸಂಸ್ಥೆಯು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಎರಡನೇ ದೈನಂದಿನ ವಿಮಾನ ಯಾನವನ್ನು ಪ್ರಾರಂಭಿಸಿದೆ.

ಮೇ 22 ರಂದು ಇಂಡಿಗೊ ಮುಂಬೈ-ಮಂಗಳೂರು ವಲಯದಲ್ಲಿ ಮೂರನೇ ದೈನಂದಿನ ವಿಮಾನವನ್ನು ಪ್ರಾರಂಭಿಸಿದ ನಂತರ ಈ ವಿಮಾನ ಸಂಚಾರ ಆರಂಭವಾಗಿದೆ.

ಎರಡು ವಿಮಾನಯಾನ ಸಂಸ್ಥೆಗಳು ಈ ಹೆಚ್ಚು ಜನ ಪ್ರಯಾಣಿಸುವ ವಲಯದಲ್ಲಿ ಐದು ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತವೆ.

Mangalore International Airport ಇಂಡಿಯಾ ವಿಮಾನ 1679 ಮುಂಬೈನಿಂದ ಮಧ್ಯಾಹ್ನ 12.40ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಮಂಗಳೂರು ತಲುಪಲಿದೆ. ಎಐ 1680 ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಸಂಜೆ 4.35ಕ್ಕೆ ಮುಂಬೈ ತಲುಪಲಿದೆ. ಮತ್ತೊಂದು ಏರ್ ಇಂಡಿಯಾ ವಿಮಾನ ಎಐ 679 ಮುಂಬೈನಿಂದ ಬೆಳಿಗ್ಗೆ 5.45 ಕ್ಕೆ ಹೊರಟು ಬೆಳಗ್ಗೆ 7.20 ಕ್ಕೆ ಮಂಗಳೂರು ತಲುಪಲಿದೆ.

ಎಐ 680 ವಿಮಾನವು ಮಂಗಳೂರಿನಿಂದ ಬೆಳಿಗ್ಗೆ 7.55 ಕ್ಕೆ ಹೊರಟು ಮುಂಬೈಗೆ ಬೆಳಗ್ಗೆ 9.35 ಕ್ಕೆ ತಲುಪುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...