CM Siddharamaih ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು,ಅಧಿಕಾರಿಗಳು ರೈತರಿಗೆ ಗುಣಮಟ್ಟದ ಬೀಜ, ಅಗತ್ಯ ರಸಗೊಬ್ಬರದ ಕೊರತೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇನ್ನು ಕಳಪೆ ಬೀಜ, ಬೆಳೆ ನಾಶದ ದೂರುಗಳು ಬಂದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಜನಸಾಮಾನ್ಯರ ಜೊತೆ ಸೌಜನ್ಯದಿಂದ ವರ್ತಿಸಿ, ಮಧ್ಯವರ್ತಿಗಳ ಹಾವಳಿ ಸಂಪೂರ್ಣ ಬಂದ್ ಮಾಡಿ. ಮುಂಗಾರು ಆರಂಭ ಆಗುತ್ತಿದ್ದಂತೆ ಕೃಷಿ ಚಟುವಟಿಕೆ ಚುರುಕಾಗುತ್ತದೆ. ಇದಕ್ಕೆ ತಕ್ಕಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಲೋಪಗಳಾದರೆ ನೀವೇ ಹೊಣೆ ಎಂದು ಅಧಿಕಾರಿಗಳಿಗೆ ಎಚ್ವರಿಕೆ ನೀಡಿದರು.
ಹಾಗೆಯೇ ಫೀಲ್ಡ್ ವರ್ಕ್ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು, ಪೊಲೀಸ್ ಕಮಿಷನರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
CM Siddharamaih ಕೃಷಿ ಕೆಲಸ ಇದ್ದಾಗ ರೈತರನ್ನು ಕಚೇರಿಗಳಿಗೆ ಅಲೆಯುವಂತೆ ಮಾಡಬೇಡಿ. ಬೀಜ, ಗೊಬ್ಬರ, ಕೀಟನಾಶಕ ಅಗತ್ಯ ಪ್ರಮಾಣದಲ್ಲಿ ಶೇಖರಿಸಿ ಇಟ್ಟುಕೊಂಡು ರೈತರಿಗೆ ನೆರವಾಗಿ. ಯಾವುದಕ್ಕೂ ಹಣದ ಕೊರತೆ ಇಲ್ಲ. ನಿಮ್ಮಲ್ಲಿ ಕೊರತೆ ಇದ್ದರೆ ನಮಗೆ ಕೇಳಿ. ನಿಮ್ಮಿಂದ ಏನೇ ಲೋಪ ಆಗಿ ಬೆಳಗಳಿಗೆ ಮತ್ತು ರೈತರಿಗೆ ತೊಂದರೆ ಆದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
ನಾಡಿನ ಜನತೆ ಬದಲಾವಣೆ ಬಯಸಿ ಸರ್ಕಾರವನ್ನು ಬದಲಾಯಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ದಕ್ಷವಾಗಿ, ಚುರುಕಾಗಿ ಕೆಲಸ ಮಾಡಿ. ಹೆಚ್ಚು ಕಡಿಮೆ ಆದರೆ ನಿಮ್ಮಗಳ ಮೇಲೆ ಕ್ರಮ ಜರುಗಿಸುವುದು ಅನಿವಾರ್ಯ ಆಗುತ್ತದೆ. ಕೆಡಿಪಿ ಸಭೆಗಳಿಗೆ ಸಂಪೂರ್ಣ ಫೀಲ್ಡ್ ವರ್ಕ್ ಮಾಡಿದ ವರದಿ ಸಮೇತ ಸಮಗ್ರ ಮಾಹಿತಿಯೊಂದಿಗೆ ಬರಬೇಕು. ಕೈ ಬೀಸಿಕೊಂಡು ಬರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.