Congress Karnataka ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಹಿಳೆಯರಿಗೆ ಉಚಿತ ಪ್ರಯಾಣ, ಬಿಪಿಎಲ್ ಕುಟುಂಬಗಳಿಗೆ ಅನ್ನಭಾಗ್ಯ, ಗೃಹಜ್ಯೋತಿ, ಗೃಹ ಲಕ್ಷ್ಮೀ, ಯುವನಿಧಿ ಯೋಜನೆಯನ್ನು ಜಾರಿಗೆ ತರುವುದಾಗಿ ಗ್ಯಾರಂಟಿ ನೀಡಿದ್ದ ಕಾಂಗ್ರೆಸ್ ಪಕ್ಷ ಎಲ್ಲ ಯೋಜನೆಗಳನ್ನು ಜಾರಿ ಮಾಡುವುದಾಗಿ ಘೋಷಿಸಿದೆ.
ಜೂನ್ 11ರಿಂದ ಸರಕಾರಿ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣ ಪ್ರಾರಂಭವಾಗಲಿವೆ.
ಇದರಿಂದ ಖಾಸಗಿ ಟ್ಯಾಕ್ಸಿಗಳ ಮಾಲೀಕರು ಮತ್ತು ಚಾಲಕರಿಗೆ ತೊಂದರೆಯಾಗಲಿದೆ.
ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಕಂಪನಿಗಳು, ಸಂಸ್ಥೆಗಳಿವೆ. ಇವುಗಳಲ್ಲಿ ಹೆಚ್ಚಿನ ಪಾಲು ಗಾರ್ಮೆಂಟ್ಸ್‌ಗಳಾಗಿವೆ. ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವವರು ಬಹುಪಾಲು ಮಹಿಳೆಯರೆ ಆಗಿದ್ದಾರೆ.
ಕೆಲಸದ ಸಮಯಕ್ಕೆ ಸರಿಯಾಗಿ ತಲುಪಲು ಹೆಚ್ಚಿನ ಮಹಿಳೆಯರು ಇದೆ ಖಾಸಗಿ ಟ್ಯಾಕ್ಸಿಗಳನ್ನು ಬಳಸುತ್ತಾರೆ. ಶಕ್ತಿ ಯೋಜನೆ ಜಾರಿ ಆಗುತ್ತಿರುವುದರಿಂದ ಎಲ್ಲಾ ಮಹಿಳೆಯರು ಉಚಿತ ಪ್ರಯಾಣದ ಸರಕಾರಿ ಬಸ್‌ಗಳನ್ನು ಹತ್ತುತ್ತಾರೆಯೆ ಹೊರತು ಟ್ಯಾಕ್ಸಿ ಏರುವುದಿಲ್ಲ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಟ್ಯಾಕ್ಸಿಗಳ ಮಾಲೀಕರು ಮತ್ತು ಚಾಲಕರು ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.
Congress Karnataka ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಸಂಚರಿಸಲು ಒಟ್ಟು 97 ಟ್ಯಾಕ್ಸಿಗಳು ಅನುಮತಿ ಪಡೆದಿವೆ. ಆದರೆ ಸದ್ಯಕ್ಕೆ 60 ಕ್ಕಿಂತ ಕಡಿಮೆ ಟ್ಯಾಕ್ಸಿಗಳು ಮಾತ್ರ ಓಡಾಡುತ್ತಿವೆ. ಕೆಲವು ಟ್ಯಾಕ್ಸಿಗಳು ಕೊರೊನಾ ಕಾಲದಲ್ಲಿ ಆರ್ಥಿಕ ಸಂಕಷ್ಟ ಎದುರಿಸಲಾರದೆ ನಿಲುಗಡೆಯಾದರೆ, ಕೆಲವು ಡಿಸೇಲ್ ಹೆಚ್ಚಳದ ಹೊರೆ ಹೊರಲಾರದೆ ರಸ್ತೆಗೆ ಇಳಿದಿಲ್ಲ. ಟ್ಯಾಕ್ಸಿ ಓಡಿಸುತ್ತಿದ್ದ ಹಲವರು ಜೀವನ ನಡೆಸಲು ಬೇರೆ ಕೆಲಸ ಹುಡುಕಿಕೊಂಡಿದ್ದಾರೆ.
ಶಿವಮೊಗ್ಗದಿಂದ ಭದ್ರಾವತಿಗೆ ಟ್ಯಾಕ್ಸಿಯಲ್ಲಿ ಒಂದು ಟ್ರಿಪ್‌ನಲ್ಲಿ 10 ಜನರನ್ನು ಕರೆದೊಯ್ಯಲಾಗುತ್ತದೆ. ಈ ಮಾರ್ಗದಲ್ಲಿ ಒಂದು ಟ್ರಿಪ್ ಸಂಚಾರ ಮಾಡಲು ಟ್ಯಾಕ್ಸಿಗೆ ೪ಯ04 ಲೀ. ಡಿಸೇಲ್ ಬೇಕಾಗುತ್ತದೆ. ಪ್ರತಿ ಪ್ರಯಾಣಿಕನಿಗೆ 25ರೂ. ದರ ವಿಸಲಾಗುತ್ತದೆ. ಮಾರ್ಗ ಮಧ್ಯದಲ್ಲಿ ಮಲವಗೊಪ್ಪ, ನಿದಿಗೆ, ಬಿದರೆ, ಮಾಚೇನಹಳ್ಳಿ, ಶಿಮುಲ್ ಡೈರಿ ಬಳಿ ಇಳಿದುಕೊಳ್ಳುವವರಿಗೆ ಕಡಿಮೆ ದರ ಮೀಸಲಾಗುತ್ತದೆ. ಇದರಿಂದ ಹೆಚ್ಚಿನ ಪಾಲು ನಮಗೆ ನಷ್ಟವಾಗುತ್ತದೆ ಎನ್ನುತ್ತಾರೆ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು.
ಗಾರ್ಮೆಂಟ್ಸ್‌ಗಳಿಗೆ ತೆರಳುವ ಮಹಿಳೆಯರೆ ಟ್ಯಾಕ್ಸಿಗಳಿಗೆ ಆಧಾರವಾಗಿದ್ದಾರೆ. ರಾಜ್ಯ ಸರಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಘೋಷಿಸಿರುವಾಗ ದುಡ್ಡು ಕೊಟ್ಟು ಟ್ಯಾಕ್ಸಿಯಲ್ಲಿ ಹೋಗಲು ಮಹಿಳೆಯರು ಮುಂದೆ ಬರುವುದು ದೂರದ ಮಾತು. ಇದರಿಂದ ಟ್ಯಾಕ್ಸಿಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಮಾಲೀಕರು ಮತ್ತು ಚಾಲಕರು ಸಂಕಷ್ಟ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಂತೆ ಆಗಿದೆ.
ಬರುವ ಸ್ವಲ್ಪ ಆದಾಯದಲ್ಲಿ ಜೀವನ ನಡೆಸಲು ಕಷ್ಟಪಡುತ್ತಿರುವ ಟ್ಯಾಕ್ಸಿಗಳ ಮಾಲೀಕರು ಮತ್ತು ಚಾಲಕರು ರಸ್ತೆ ತೆರಿಗೆ, ವಾಹನ ವಿಮೆ ಹೊರೆಯನ್ನು ಹೊರಬೇಕಿದೆ. ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಸರಕಾರ ಖಾಸಗಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಜೀವನದ ಬಗ್ಗೆಯೂ ಯೋಚಿಸಬೇಕಿದೆ.
ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಮಹಿಳೆಯರಿಗೆ ಕಲ್ಪಿಸಿರುವುದು ಸ್ವಾಗತಾರ್ಹ.
ಆದರೆ ಇಲ್ಲಿಯವರೆಗೂ
ಟ್ಯಾಕ್ಸಿಗಳನ್ನೇ ಅವಲಂಬಿಸಿದ ಮಹಿಳೆಯರಿಂದ ಟ್ಯಾಕ್ಸಿವಾಲಾಗಳು
ಎರಡು ಹೊತ್ತು ಊಟಮಾಡುತ್ತಿದ್ದರು.
ಇನ್ನು ಮುಂದೆ ಟ್ಯಾಕ್ಸಿಗಳು ಮಹಿಳೆಯರಿಗೆ ಅನಾವಶ್ಯಕವಾಗಲಿವೆ.
ಸರ್ಕಾರ ಟ್ಯಾಕ್ಸಿಚಾಲಕ ಬಂಧುಗಳ ಬದುಕಿಗೂ ಭದ್ರತೆ ನೀಡುವ ಒಂದು
ಗ್ಯಾರಂಟಿಯಂಥದೇ ಯೋಜನೆ ತಂದರೆ ಅವರಿಗೂ
ಸಂತೋಷವಾಗುತ್ತದೆ.