Monday, February 2, 2026
Monday, February 2, 2026

Indian Medical Association Shivamogga ಯುವ ಜನತೆ ಸಾಂಸ್ಕೃತಿಕ ಆಸಕ್ತಿಯಿಂದ ದೂರವಾಗುತ್ತಿರುವುದು ಬೇಸರದ ಸಂಗತಿ- ಡಾ.ಎಚ್.ಎಸ್.ಮೋಹನ್

Date:

Indian Medical Association Shivamogga ನಾಡು, ನುಡಿ, ದೇಶ, ಭಾಷೆಯ ಸಂಸ್ಕೃತಿ ಉಳಿದು, ಬೆಳೆಯುವುದೇ ಸಾಂಸ್ಕೃತಿಕ ಚಟುವಟಿಕೆಗಳಿಂದ.ಆದರೆ, ಇಂದಿನ ಯುವ ಪೀಳಿಗೆ ಸಾಂಸ್ಕೃತಿಕ ಚಟುವಟಕೆಗಳಿಂದ ದೂರವಾಗುತ್ತಿರುವುದು ಬೇಸರದ ಸಂಗತಿ ಎಂದು ರಾಜ್ಯೋತ್ಸವ ಪುರಸ್ಕೃತ ವೈದ್ಯ ಸಾಹಿತಿ ಡಾ . ಎಚ್ . ಎಸ್ . ಮೋಹನ್ ಹೇಳಿದರು.

ಅವರು 4.6.2023 ರ ಭಾನುವಾರದಂದು ನಡೆದ ಶಿವಮೊಗ್ಗ ಶಾಖೆಯ ಭಾರತೀಯ ವೈದ್ಯಕೀಯ ಸಂಘದ ಸಾಂಸ್ಕೃತಿಕ ಸಂಜೆ – ಹುಣ್ಣಿಮೆ ವೈಭವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಐಎಂಎ ಶಿವಮೊಗ್ಗ ಆ ನಿಟ್ಟಿನಲ್ಲಿ ಸದಸ್ಯರ ಹಾಗು ಅವರ ಕುಟುಂಬದವರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಒಳ್ಳೆಯ ವೇದಿಕೆ ಕಲ್ಪಿಸಿದೆ , ಹಾಗೆಯೇ ಕಿರಿಯ ಮತ್ತು ಹಿರಿಯ ಸದಸ್ಯರು , ಪುಟಾಣಿ ಮಕ್ಕಳ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.

Indian Medical Association Shivamogga ಹಾಡು, ಮೂಕ ನಾಟಕ, ಸ್ಟಾಂಡ್ ಅಪ್ ಕಾಮಿಡಿ , ನೃತ್ಯ , ವಾದ್ಯಸಂಗೀತ , ಯಕ್ಷಗಾನ , ಫ್ಯಾಷನ್ ಷೋ ಮುಂತಾದ ಕಾರ್ಯಕ್ರಮಗಳನ್ನೊಳಗೊಂಡ ವರ್ಣರಂಜಿತ ಕಾರ್ಯಕ್ರಮ ಐಎಂಎ ಹಾಲ್ ಹೊರಾಂಗಣದಲ್ಲಿ ನಡೆದು ಹುಣ್ಣಿಮೆ ಚಂದಿರನ ಬೆಳದಿಂಗಳ ರಂಗೇರಿಸಿತು .

ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ .ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ , ವೈದ್ಯ ಬಳಗದ ಒತ್ತಡದ ಬದುಕಿನ ಮಧ್ಯದಲ್ಲಿ ,
ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿಗೆ ಹಿತ ನೀಡುವುದರೊಂದಿಗೆ , ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಒದಗಿಸುತ್ತದೆ. ನಾಯಕತ್ವ, ಟೀಮ್‌ವರ್ಕ್, ಸಹಯೋಗ ಮತ್ತು ಅವರ ಜೀವನಕ್ಕೆ ಅನ್ವಯಿಸಬಹುದಾದ ಹೊಸ ಸ್ನೇಹ ಸಂಬಂಧಗಳನ್ನು ಹುಟ್ಟು ಹಾಕಲು ಸಹಕಾರಿ ಎಂದು ಮಾತನಾಡಿದರು .

ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ , ಖಜಾಂಚಿ ಡಾ . ಶಶಿಧರ್ , ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ . ವಿನಯಾ ಶ್ರೀನಿವಾಸ್ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...