Friday, June 20, 2025
Friday, June 20, 2025

New library in Chikkamagalur ನೂತನ ಗ್ರಂಥಾಲಯಕ್ಕೆ ಜಿಲ್ಲಾ ಕಸಾಪ ಮನವಿ

Date:

New library in Chikkamagalur ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕನ್ನಡ ಭವನ ನವೀಕರಣ ಹಾಗೂ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ 96ಲಕ್ಷ ರೂ. ಹಣ ಅಂದಾಜಿಲಾಗಿದ್ದು ರಾಜ್ಯಸರ್ಕಾರ ಹಾಗೂ ಶಾಸಕರ ಅನುದಾನದಲ್ಲಿ ಭವನದ ಕಾಮಗಾರಿಗೆ ಹಣ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾ ಕಸಾಪವು ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಸ್ತುತವಿರುವ ಕನ್ನಡ ಭವನಕ್ಕೆ ಹೊಸ ದಾಗಿ ಆಸನಗಳು ಸೇರಿದಂತೆ ಇನ್ನಿತರೆ ಪೀಠೋಪಕರಣಗಳ ಅವಶ್ಯವಿರುವಿದೆ ಹಾಗೂ ಭವನದ ಮೇಲ್ಬಾಗದಲ್ಲಿ ನೂತನ ಗ್ರಂಥಾಲಯ ನಿರ್ಮಾಣ ಮಾಡುವ ಆಸಕ್ತಿಯಿರುವ ಹಿನ್ನೆಲೆಯಲ್ಲಿ ಒಟ್ಟು 96 ಲಕ್ಷ ರೂ. ಅಂದಾಜಿಲಾ ಗಿರುವ ಕಾರಣ ಸರ್ಕಾರದಿಂದ ಹಣ ಬಿಡುಗಡೆಗೊಳಿಸಿ ಭವನದ ನವೀಕರಣಕ್ಕೆ ಸಹಕರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದಂತೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ದಲ್ಲಿ 30*50ಅಳತೆಯನ್ನು ಗ್ರಂಥಾಲಯ ನಿರ್ಮಿಸಲು ಅನುಷ್ಟಾನಗೊಳಿಸಲಾಗಿದೆ. ಮುಂದಿನ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವ ಮೂಲಕ ಗ್ರಾಮಗಳಲ್ಲಿ ಗ್ರಂಥಾಲಯ ತೆರೆದು ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು ನಾಲ್ಕು ದಶಕಗಳಾಗಿದೆ. ಈ ಸಂಬಂಧ ಜಿಲ್ಲೆಯ 5 ಶಾಸಕರು ಒಟ್ಟುಗೂಡಿ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ರಾಷ್ಟçಮಟ್ಟದ ಸಮ್ಮೇಳನ ಆಯೋ ಜನೆ ನಡೆಸಲು ಮುಂದಾಗಬೇಕು. ನಗರ ಟೌನ್‌ಕ್ಯಾಂಟೀನ್ ಸಮೀಪವಿರುವ ಹಳೆಯ ಕನ್ನಡ ಜಾಗದಲ್ಲಿ ಹೊಸ ದಾಗಿ ಕಟ್ಟಡ ನಿರ್ಮಿಸಿ ನಗರ ನಿವಾಸಿಗಳಿಗೆ ಗ್ರಂಥಾಲಯ ಹಾಗೂ ಕಸಾಪ ಸಣ್ಣಪುಟ್ಟ ಕಾರ್ಯಕ್ರಮ ಆಯೋಜನೆ ಮಾಡಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ನಂತರ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಕನ್ನಡ ಭವನ, ಗ್ರಂಥಾಲಯ ನಿರ್ಮಾಣ ಮಾಡುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರ್ಣಗೊಳಿಸಲಾಗುತ್ತದೆ. ಹಾಗೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆಯೋಜನೆಗೆ ಸೂಕ್ತ ಕ್ರಮ ವಹಿಸಲಾ ಗುವುದು ಎಂದು ಭರವಸೆ ನೀಡಿದರು.

New library in Chikkamagalur ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್.ವೆಂಕಟೇಶ್, ಪವನ್, ರೂಪಾನಾಯ್ಕ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತಾ ಸತ್ಯನಾರಾಯಣ್, ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷೆ ಪುಷ್ಪಲತಾ, ನಗರ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ಕಡೂರು ಅಧ್ಯಕ್ಷೆ ಲತಾ, ಕೋಶಾಧ್ಯಕ್ಷ ಈಶ್ವರಪ್ಪ, ಗೌರವ ಸಲಹೆಗಾರ ಹೆಚ್.ಎಂ.ನಾಗರಾಜ್‌ರಾವ್, ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಸುಮ ಪ್ರಸಾದ್, ಕಾರ್ಯದರ್ಶಿ ವೀಣಾ ಅರವಿಂದ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...