KLive Editorial ಬಹಳ ಮಂದಿ ಕಾಂಗ್ರೆಸ್ ಶಾಸಕರು ಮೊದಲ ಸಲ ಆಯ್ಕೆಯಾದವರಿದ್ದಾರೆ. ಅಥವಾ ಎರಡನೇ ಸಲ ಆಯ್ಕೆಯಾದವರೂ
ಇದ್ದಾರೆ. ಈ ಬಾರಿ ಹಳಿಯಾಳದ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಸಚಿವರಾಗುವ ಯೋಗ ಬರಲಿಲ್ಲ.ಆದರೆ ಅವರು ಮನಸ್ಸಿನೊಳಗೆ ಬೇಸರವಿದ್ದರೂ ಹೊರ ಹಾಕಲಿಲ್ಲ.ಖಾಸಗಿ ಟೀವಿಯ ಪ್ರತಿನಿಧಿ ‘ಹಿರಿಯರಾದ ನಿಮಗೆ ಇದು ಅವಮಾನ ಅಲ್ಲವೆ?’ ಎಂದೂ ಕೇಳಿಬಿಟ್ಟರು. ತಮ್ಮ ಟೀವಿಗೆ ಮೊದಲ ಅಪರೂಪದ ಬೈಟ್ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದರು ಪ್ರತಿನಿಧಿ. ಶಾಸಕರಾದ ದೇಶಪಾಂಡೆ ವಿಚಲಿತರಾಗದೇ ಉತ್ತರಿಸಿದರು. ಟೀವಿ ಪ್ರತಿನಿಧಿ ಬಂದ ದಾರಿಗೆ ಸುಂಕವಿಲ್ಲದೇ ತೆರಳಿದರು. ಪ್ರಶ್ನೆಗಳನ್ನ ಕೇಳಬೇಕಾದರೆ ಯಾವ ರೀತಿ ಕೇಳಿದರೆ ಉತ್ತರ ಬರಬಹುದು ಎಂಬ
ನಿರೀಕ್ಷೆಯೂ ಪ್ರಶ್ನೆಕೇಳುವವರಿಗಿರಬೇಕು. ಇರಲಿ . ಈಗ ಶಿವಮೊಗ್ಗ ಜಿಲ್ಲೆಗೆ ಅಚಿವ ಸ್ಥಾನ ಸಿಕ್ಕಿದೆ. ಮಧುಬಂಗಾರಪ್ಪ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾರೆ.ನಿರೀಕ್ಷೆಯ ಮಾತನ್ನೇ ಹೇಳುವುದಾದರೆ ಭದ್ರಾವತಿ ಶಾಸಕ ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಒಲಿದು ಬರಬೇಕಿತ್ತು. ಈಗ ಆಗಿರುವ ಪ್ರಕ್ರಿಯೆಯೇ ಬೇರೆ.
ಚುನಾವಣೆಗೆ ಮುನ್ನ ಸಿದ್ಧರಾಮಯ್ಯ ನವರೇ ಮಂತ್ರಿಗಿರಿ ಕೊಡುತ್ತೇವೆ ಗೆದ್ದು ಬನ್ನಿ ಅಂದಿದ್ದರು ಎಂದು ಸಂಗಮೇಶ್ವರ್ ಮಾಧ್ಯಮಗಳೆದುರು ಹೇಳಿದ್ದರು.ಅವರೀಗ ನಾಕು ಬಾರಿ ಗೆದ್ದಿದ್ದಾರೆ. ಅವರಿಗೆ ನಿರಾಶೆಯಾಗಿದೆ.ಬಂದಿರುವ ಪ್ರಶ್ನೆ ಅವರಿಗೆ ಲಿಂಗಾಯತ ಕೋಟಾ ಭರ್ತಿಯಾದ ಹಿನ್ನೆಲೆ ಸಿಕ್ಕಿಲ್ಲ ಎಂಬುದನ್ನ ಸಗಟಾಗಿ ಹೇಳಿಬಿಡಬಹುದು.ಆದರೆ ಚುನಾವಣೆಗೆ ಮತ್ತೆ ನಿಲ್ಲುವ ಚೈತನ್ಯವಿದೆಯೋ ಇಲ್ಲವೋ ಅಂಥವರೂ ಬಹಳಿದ್ದಾರೆ. ಅವರ ಬಗ್ಗೆಯೂ ಪಕ್ಷ ಯೋಚಿಸಬೇಕು.
ಬಿಜೆಪಿ ತೊರೆದು ಬಂದ ಪ್ರಮುಖರೋರ್ವರ ಬಗ್ಗೆ ಕಾಳಜಿ ತೋರಿಸಿದಂತೆ ಸಂಗಮೇಶ್ವರ್ ಬಗ್ಗೆಯೂ ಪಕ್ಷ ತೋರಿಸಬೇಕು.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಜ್ಷವನ್ನ ಘನವಾಗಿ ಹಿಡಿದಿಟ್ಟ ಶ್ರೇಯಸ್ಸು ಸಂಗಮೇಶ್ ಅವರಿಗೆ ಸಲ್ಲಬೇಕು.
ಪ್ರಸ್ತುತ ಭದ್ರಾವತಿ
KLive Editorial ಕಾರ್ಖಾನೆಗಳಿಗೆ ಜೀವನೀಡುವ ಬಗ್ಗೆಯಾದರೂ ಹಾಲಿ ಶಾಸಕರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು.
ಹಾಗಾದರೆ ಸಂಗಮೇಶ್
ಅವರಿಗೆ ನ್ಯಾಯ ದೊರಕಿದಂತಾಗುತ್ತದೆ.
KLive Editorial ಸಂಪಾದಕೀಯ
Date: